Advertisement

ಎಸ್‌ಡಿಎಂ ಇನ್‌ಸಿಗ್ನಿಯಾ-17ಕ್ಕೆ ಚಾಲನೆ

01:21 PM Mar 17, 2017 | |

ಧಾರವಾಡ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಅಭಿಯಾಂತ್ರಿಕ ಮತ್ತು ತಾಂತ್ರಿಕ ಮಹಾವಿದ್ಯಾಲಯದ ಸಭಾಂಗಣದಲ್ಲಿ ರಾಷ್ಟ್ರಮಟ್ಟದ ತಾಂತ್ರಿಕ ಮತ್ತು ಸಾಂಸ್ಕೃತಿಕ ಮೇಳವಾದ ಇನ್‌ಸಿಗ್ನಿಯಾ-2017ಕ್ಕೆ ಮಾಜಿ ಸಚಿವ ಬಸವರಾಜ ಬೊಮ್ಮಾಯಿ ಗುರುವಾರಚಾಲನೆ ನೀಡಿದರು. 

Advertisement

ನಂತರ ಮಾತನಾಡಿದ ಅವರು, ತಂತ್ರಜ್ಞಾನ ಹಾಗೂ ಸಂಸ್ಕೃತಿಯ ಸರಿಯಾದ ಮಿಶ್ರಣವಿದ್ದಲ್ಲಿ ತಂತ್ರಜ್ಞಾನ ಕ್ಷೇತ್ರದಲ್ಲಿ ಪ್ರಗತಿ ಸಾಧಿಸಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಇದುವರೆಗೆ ವ್ಯಕ್ತಿಗತ ಸಾಧನೆಗಳು ಶ್ರೇಷ್ಠವಾಗಿವೆ. ಹೀಗಾಗಿ ನಿಮ್ಮ ಜಗತ್ತನ್ನು ಸಂಕುಚಿತಗೊಳಿಸಬೇಡಿ. ಸಾಧನೆಗಾಗಿ ಹಪಹಪಿಸಿ.

ಎಲ್ಲವೂ ಸರಳವಾಗಿ ಇದ್ದರೇ ಏನೊಂದು ಹೊಸ ಆವಿಷ್ಕಾರಗಳು ಆಗುವುದಿಲ್ಲ. ಸಂಕೀರ್ಣ ವಿಷಯಗಳ ಬಗ್ಗೆ ತಲೆ ಕೆಡಿಸಿಕೊಳ್ಳಿ, ಹೊಸದನ್ನು ಸಾಧಿಸುತ್ತೀರಿ. ಸಂಸ್ಕೃತಿ ಹಾಗೂ ತಂತ್ರಜ್ಞಾನ ಒಟ್ಟಾಗಿ ಬೆಳೆಯಬೇಕು. ಸಂಸ್ಕೃತಿ ಹಾಳು ಮಾಡುವಂತಹ ತಂತ್ರಜ್ಞಾನ ಬರಬಾರದು. ಉತ್ತರ ಕರ್ನಾಟಕದ ಭಾಗಕ್ಕೆ ಎಸ್‌.ಡಿ.ಎಂ ಎಂಜಿನಿಯರಿಂಗ್‌ ಕಾಲೇಜು ಒಂದು ವರದಾನವಾಗಿದೆ ಎಂದರು. 

ಡಾ| ಇ.ಎಸ್‌. ಚಕ್ರವರ್ತಿ ಮಾತನಾಡಿ, ಉತ್ತಮ ಸಂವಹನ ಕೌಶಲವಿರುವಂತಹ ವ್ಯಕ್ತಿಯು ಸಮಾಜದಲ್ಲಿ ಎಲ್ಲರ ಪ್ರೀತಿ ಪಾತ್ರನಾಗಿರುತ್ತಾನೆ ಹಾಗೂ ಉತ್ತಮ ಶಿಕ್ಷಣ ಮನುಷ್ಯನನ್ನು ದಿಟ್ಟ ವ್ಯಕ್ತಿಯನ್ನಾಗಿ ಮಾಡುತ್ತದೆ ಎಂದು ತಿಳಿಸಿದರು. ಶಿಕ್ಷಣ ಪ್ರಮುಖವಾಗಿ ನಾಲ್ಕು ಉದ್ದೇಶಗಳನ್ನು ಹೊಂದಿದೆ.

ವಿದ್ಯಾರ್ಥಿಗಳನ್ನು ಸ್ವಾವಲಂಬಿಗಳನ್ನಾಗಿ ಮಾಡುವುದು, ತಾವು ಕಲಿತ ವಿದ್ಯೆಯಿಂದ ಸಮಾಜಕ್ಕೆ ಏನಾದರೂ ಕೊಡುಗೆ ನೀಡುವುದು, ವಿದ್ಯಾರ್ಥಿಗಳನ್ನು ಸದೃಢರನ್ನಾಗಿ ಮಾಡುವುದು ಮತ್ತು ಈ ಸಮಾಜದಲ್ಲಿ ಉತ್ತಮ ನಾಗರಿಕನನ್ನಾಗಿ ಮಾಡುವ ಉದ್ದೇಶಗಳನ್ನು ಹೊಂದಿದೆ. ಶಿಕ್ಷಣ ಪಡೆಯುವಾಗ ವಿದ್ಯಾರ್ಥಿಗಳು ಕಡ್ಡಾಯವಾಗಿ ಇವುಗಳನ್ನು ಅರ್ಥ ಮಾಡಿಕೊಳ್ಳಬೇಕು ಎಂದರು. 

Advertisement

ಅಧ್ಯಕ್ಷತೆ ವಹಿಸಿದ್ದ ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಕೆ. ಜಿನೇಂದ್ರ ಪ್ರಸಾದ ಮಾತನಾಡಿ, ವಿದ್ಯಾರ್ಥಿಗಳು ಉತ್ತಮ ರೀತಿಯಲ್ಲಿ ಇನ್‌ಸಿಗ್ನಿಯಾ-2017ರ ವೇದಿಕೆಯನ್ನು ತಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ಉಪಯೋಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಡಾ| ಕೆ. ಗೋಪಿನಾಥ ಮಾತನಾಡಿದರು. ಈ ಉತ್ಸವದಲ್ಲಿ ವಿವಿಧ ರಾಜ್ಯಗಳಿಂದ 2000ಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸಿದ್ದಾರೆ. 

ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಉಪ ಕಾರ್ಯದರ್ಶಿಅ ಜೀವಂಧರಕುಮಾರ, ಸಲಹೆಗಾರರಾದ ಪ್ರೊ| ಮಹೇಂದ್ರ ದಿಕ್ಷೀತ್‌, ಮಹಾವಿದ್ಯಾಲಯದ ಎಲ್ಲ ವಿಭಾಗ ಮುಖ್ಯಸ್ಥರು  ಹಾಗೂ ಅನೇಕ ಪ್ರಾಧ್ಯಾಪಕರು ಇದ್ದರು. ಪ್ರಾಚಾರ್ಯ ಡಾ| ಎಸ್‌.ಬಿ. ವಣಕುದರೆ ಸ್ವಾಗತಿಸಿದರು. ವೈಷ್ಣವಿ ಕೇಕುದಾ ನಿರೂಪಿಸಿದರು. ಪ್ರೊ| ವಿ.ಕೆ. ಪರ್ವತಿ ವಂದಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next