Advertisement
ಇದೇ ಸಂದರ್ಭದಲ್ಲಿ ದೇಶದಲ್ಲೇ ಮೊಟ್ಟಮೊದಲ ‘ಸ್ಮಾರ್ಟ್ ಸಿಟಿ ಕಾರ್ಯಕ್ರಮ’ ಕ್ಕೆ ಹರ್ಬಲ್‌ಲೈಫ್ ಕಂಟ್ರಿ ಹೆಡ್ ಮತ್ತು ಉಪಾಧ್ಯಕ್ಷ ಅಜಯ್ ಖನ್ನಾ ಚಾಲನೆ ನೀಡಿ, ಮಂಗಳೂರು, ದೇಶದ ಮೊಟ್ಟಮೊದಲ ಹರ್ಬಲ್‌ಲೈಫ್ ಸ್ಮಾರ್ಟ್ ಸಿಟಿ ಎನಿಸಿಕೊಂಡಿದೆ. ಇದು ಗ್ರಾಹಕರನ್ನು ಸಕ್ರಿಯ ಹಾಗೂ ಆರೋಗ್ಯಕರ ಜೀವನಶೈಲಿಗೆ ತೊಡಗಿಸಿಕೊಳ್ಳುವಂತೆ ಉತ್ತೇಜನ ನೀಡುವ ಯೋಜನೆಯಾಗಿದ್ದು, ಇದಕ್ಕೆ ಪೂರಕವಾದ ಉತ್ಪನ್ನ, ತರಬೇತಿ ಹಾಗೂ ಕಾರ್ಯಕ್ರಮದ ಸೌಲಭ್ಯ ನಾಗರಿಕರಿಗೆ ಸಿಗಲಿದೆ ಎಂದರು.
ನಗರದ ನೆಹರು ಕ್ರೀಡಾಂಗಣದಿಂದ ರನ್ ಫಾರ್ ಹೆಲ್ದಿ ಲಿವಿಂಗ್ 3 ಕಿ.ಮೀ. ಓಟ ನಡೆಯಿತು. ಹಂಪನಕಟ್ಟೆ ಸರ್ಕಲ್‌ಗೆ ತೆರಳಿ ಅಲ್ಲಿಂದ ಮತ್ತೆ ನೆಹರೂ ಮೈದಾನ ತಲುಪಿತು. ನಗರದ ಜಾಯ್‌ನೆಲ್ ಪಿಂಟೋ ಪ್ರಥಮ, ದಾದಾ ಖಲಂದರ್ ದ್ವಿತೀಯ ಹಾಗೂ ಮಾನ್‌ಸಿಂಗ್ ತೃತೀಯ ಬಹುಮಾನ ಪಡೆದರು.