Advertisement

ಟ್ರಂಪ್‌ ಡಿಸ್ಚಾರ್ಜ್‌; ಶ್ವೇತ ಭವನದಲ್ಲಿ ಮಾಸ್ಕ್‌ ತೆಗೆದು ಹಾಕಿ need not fear ಎಂದರು

06:50 PM Oct 06, 2020 | Karthik A |

ಮಣಿಪಾಲ: ಮೂರು ದಿನಗಳ ಹಿಂದೆ ಕೋವಿಡ್‌ ಪಾಸಿಟಿವ್‌ ಕಂಡುಬಂದ ಹಿನ್ನೆಲೆಯಲ್ಲಿ ಡೊನಾಲ್ಡ್ ಟ್ರಂಪ್ ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಚಿಕಿತ್ಸೆಯ ಬಳಿಕ ಆಸ್ಪತ್ರೆಯಿಂದ ಸೋಮವಾರ ರಾತ್ರಿ ಶ್ವೇತಭವನಕ್ಕೆ ಹಿಂದಿರುಗಿದ್ದಾರೆ.

Advertisement

ಚಿಕಿತ್ಸೆ ಪಡೆದು ಬಂದ ಅವರು ಯಾರೂ ಕೋವಿಡ್‌ 19ಕ್ಕೆ ಭಯಪಡುವ ಅಗತ್ಯವಿಲ್ಲ ಎಂದಿದ್ದಾರೆ. ಟ್ರಂಪ್‌ ಅವರ ಕುರಿತು ಆತಂಕ ವ್ಯಕ್ತಪಡಿಸಿರುವ ವೈದ್ಯರು ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕಾಗಿದೆ ಎಂದಿದ್ದಾರೆ. ವಯಸ್ಸಾದವರಿಗೆ ಕೋವಿಡ್‌ ತಗುಲಿದರೆ ಮತ್ತೆ ಅದರಿಂದ ಹೊರಬರುವುದು ತುಂಬಾ ತ್ರಾಸದಾಯಕವಾಗಿದೆ.

ಆಸ್ಪತ್ರೆಯಿಂದ ಹೊರಬಂದ ಟ್ರಂಪ್‌ ಅವರು ಶ್ವೇತ ಭವನ ಪ್ರವೇಶಿಸುವಂತೆಯೇ ಮಾಸ್ಕ್‌ ಅನ್ನು ತೆಗೆದಿದ್ದಾರೆ ಎಂಬುದು ಸುದ್ದಿಯಾಗಿದೆ. ಅಧ್ಯಕ್ಷ ಟ್ರಂಪ್ ಸೇರಿದಂತೆ 15 ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳಿಗೆ ಕೋವಿಡ್‌ ಪಾಸಿಟಿವ್‌ ಕಂಡುಬಂದಿದೆ.

ಆದರೆ ಕೋವಿಡ್‌ ಅಪಾಯದಿಂದ ಟ್ರಂಪ್‌ ಹೊರ ಬರುತ್ತಿದ್ದಾರೆ ಎಂದು ಹೇಳಲಾಗುತ್ತಿದ್ದು, ಅಕ್ಟೋಬರ್ 15ರಂದು ನಡೆಯಲಿರುವ ಎರಡನೇ ಅಧ್ಯಕ್ಷೀಯ ಚರ್ಚೆಯಲ್ಲಿ ಟ್ರಂಪ್ ಭಾಗವಹಿಸಬಹುದು ಎಂದು ಕೆಲವು ಮಾಧ್ಯಮ ವರದಿಗಳು ತಿಳಿಸಿವೆ. ಆದರೆ ಶ್ವೇತ ಭವನ ಈ ಕುರಿತಂತೆ ಏನೂ ಹೇಳಿಲ್ಲ.

Advertisement

ಚಿಕಿತ್ಸೆಯು ಮುಂದುವರಿಯುತ್ತದೆ
ಅಧ್ಯಕ್ಷರು ಅಗತ್ಯ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಅವರ ಚಿಕಿತ್ಸೆ ಮುಂದುವರಿಯುತ್ತದೆ ಎಂದು ವೈದ್ಯರು ಹೇಳಿದ್ದಾರೆ. ಸೂಟ್ ಮತ್ತು ಮಾಸ್ಕ್ ಧರಿಸಿ ಟ್ರಂಪ್ ಆಸ್ಪತ್ರೆಯಿಂದ ಹೊರಬಂದಿದ್ದರು. ಮಾಧ್ಯಮಗಳನ್ನು ನೋಡುತ್ತಾ ಕೈಕುಲುಕಿದರು. ಮಾಧ್ಯಮಗಳು ದೂರದಿಂದಲೇ ಪ್ರಶ್ನೆಗಳನ್ನು ಕೇಳಲು ಪ್ರಯತ್ನಿಸಿದವು. ಆದರೆ ಅವರು ಕೇವಲ ಧನ್ಯವಾದ ಹೇಳಲಷ್ಟಕ್ಕೇ ಸೀಮಿತವಾದರು. ವಿರ್ಯಾಸ ಎಂದರೆ ಇದೇ ಸಮಯದಲ್ಲಿ ಟ್ರಂಪ್‌ ತಾನು ಧರಿಸಿದ್ಧ ಮಾಸ್ಕ್‌ ಅನ್ನು ತೆಗೆದಿದ್ದಾರೆ. ಮಾಸ್ಕ್‌ ತೆಗೆದು ನೇರವಾಗಿ ಸೂಟ್‌ನ ಜೇಬಿಗೆ ತಳ್ಳಿದ್ದಾರೆ. ಆಸ್ಪತ್ರೆಯಿಂದ ನಿರ್ಗಮಿಸಿದ ಅವರು ಮೆರೈನ್ ಒನ್‌ನಲ್ಲಿ ತಮ್ಮ ಹೆಲಿಕಾಪ್ಟರ್‌ನಲ್ಲಿ ಹತ್ತಿ 10 ನಿಮಿಷಗಳಲ್ಲಿ ಶ್ವೇತಭವನವನ್ನು ತಲುಪಿದ್ದರು.

ಹಲವು ಪ್ರಶ್ನೆಗಳಿಗೆ ಉತ್ತರವಿಲ್ಲ
ಮಾಸ್ಕ್‌ ಇಲ್ಲದೇ ಟ್ರಂಪ್‌ ಅವರು ಶ್ವೇತಭವನದತ್ತ ಹೆಜ್ಜೆ ಹಾಕುತ್ತಿರುವುದನ್ನು ಅಲ್ಲಿನ ಟಿವಿ ಮಾಧ್ಯಮಗಳು ಲೈವ್‌ ಮಾಡಿದ್ದರೆ. ಅದೇ ಲೈವ್‌ ಪ್ರಸಾರವನ್ನು ಟ್ರಂಪ್‌ ಅವರು ಟಿವಿಯಲ್ಲಿ ವೀಕ್ಷಿಸಿದ್ದಾರೆ. ಆದರೆ ಟ್ರಂಪ್‌ ಅವರ ವೈದ್ಯಕೀಯ ಸಲಹೆಗಾರವ ಮತ್ತು ವೈದ್ಯ ಸೀನ್ ಕಾನ್ಲೆ ಅವರಲ್ಲಿ ಟ್ರಂಪ್‌ ಅವರ ಆರೋಗ್ಯದ ಬೆಳವಣಿಗೆಗಳನ್ನು ಅಲ್ಲಿನ ಮಾಧ್ಯಮಗಳು ಕೇಳುವ ಪ್ರಯತ್ನ ಮಾಡಿದವು. ಆದರೆ ಅವರು ಕಠಿನ ಪ್ರಶ್ನೆಗಳಿಗೆ ಉತ್ತರಿಸುವ ಔದಾರ್ಯ ತೋರಿಲ್ಲ. ಕೋವಿಡ್‌ ಪಾಸಿಟಿವ್‌ ಪತ್ತೆಯಾದ ಟ್ರಂಪ್ ಅವರ ಶ್ವಾಸಕೋಶದ ಸ್ಥಿತಿ ಏನು? ವರದಿ ನಕಾರಾತ್ಮಕವಾಗಿ ಬಂದಿದೆಯೇ? ಎಂಬ ಪ್ರಶ್ನೆಗೆ ಉತ್ತರ ಲಭಿಸಿಲ್ಲ.

ಡೋಂಟ್‌ ವರಿ ಎಂದ ಟ್ರಂಪ್‌
ಆದರೆ ಟ್ರಂಪ್‌ ಅವರು ಇನ್ನೂ ಸಂಪೂರ್ಣವಾಗಿ ಅಪಾಯದಿಂದ ಹೊರಬಂದಿಲ್ಲ ಎಂದು ಹೇಳಲಾಗುತ್ತಿದೆ. ಅಧ್ಯಕ್ಷರ ಆರೋಗ್ಯವನ್ನು ಅವರ ವೈದ್ಯಕೀಯ ತಂಡ ನಿರಂತರವಾಗಿ ಮೇಲ್ವಿಚಾರಣೆ ಮಾಡುತ್ತಿದೆ. ಟ್ರಂಪ್ ಅವರ ಮಾಧ್ಯಮ ಕಾರ್ಯದರ್ಶಿ ಕೆಲ್ಲಿ ಮೆಕೆಕ್ನಿ ಅವರಿಗೂ ಪಾಸಿಟಿವ್‌ ಕಂಡುಬಂದಿದೆ. ಕೋವಿಡ್ -19 ಬಗ್ಗೆ ಭಯಪಡುವ ಅಗತ್ಯವಿಲ್ಲ. ಅದು ನಿಮ್ಮ ಜೀವನದ ಮೇಲೆ ಪ್ರಾಬಲ್ಯ ಸಾಧಿಸಲು ಬಿಡಬೇಡಿ ಎಂದು ಟ್ರಂಪ್‌ ಟ್ವೀಟರ್‌ ಮೂಲಕ ಹೇಳಿದ್ದಾರೆ. ಇದರ ಜತೆ ವಿಡಿಯೋ ಕೂಡ ಪೋಸ್ಟ್ ಮಾಡಿದ್ದು, ನೀವು ಅದನ್ನು ಸುಲಭವಾಗಿ ಸೋಲಿಸಬಹುದು ಎಂದು ಹೇಳಿದ್ದಾರೆ.

ಚರ್ಚೆಯಲ್ಲಿ ಭಾಗವಹಿಸುತ್ತಾರಾ?
ಕೆಲವು ಮಾಧ್ಯಮ ವರದಿಗಳ ಪ್ರಕಾರ, ಟ್ರಂಪ್‌ ಅವರು ಅಧ್ಯಕ್ಷೀಯ ಚರ್ಚೆಯಲ್ಲಿ ಭಾಗವಹಿಸಲಿದ್ದು, ಅಕ್ಟೋಬರ್ 15 ರಂದು ನಡೆಯಲಿರುವ ಎರಡನೇ ಅಧ್ಯಕ್ಷೀಯ ಚರ್ಚೆಯಲ್ಲಿ ಭಾಗವಹಿಸಲಿದ್ದಾರೆ ಎಂದು ಹೇಳಿವೆ. ಇದಕ್ಕಾಗಿ ಅವರು ಸಹ ತಯಾರಿ ಆರಂಭಿಸಿದ್ದಾರೆ. ಎರಡನೇ ಚರ್ಚೆಯಲ್ಲಿ ಟ್ರಂಪ್ ಭಾಗವಹಿಸಲಿದ್ದಾರೆ ಎಂದು ಅವರ ಪ್ರಚಾರ ತಂಡವನ್ನು ನೋಡಿಕೊಳ್ಳುತ್ತಿರುವ ವ್ಯವಸ್ಥಾಪಕ ರಿಯಾನ್ ನೋಬ್ಸ್ ಹೇಳಿದ್ದಾರೆ. ಟ್ರಂಪ್‌ ಅವರ ಪ್ರಚಾರ ತಂಡವು ಈ ಬಗ್ಗೆ ಚರ್ಚಾ ಆಯೋಗಕ್ಕೆ ಮಾಹಿತಿ ನೀಡಬೇಕಾಗುತ್ತದೆ. ಅನಂತರ ಅಧಿಕೃತ ಪ್ರಕಟನೆ ನೀಡಲಾಗುತ್ತದೆ.

 

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next