Advertisement

ತೆಂಡುಲ್ಕರ್ ಮಗಳ ಜೊತೆ ಶುಭ್ಮನ್ ಗಿಲ್ ಲವ್ವಿಡವ್ವಿ?

09:25 AM Jun 18, 2019 | keerthan |

ಮುಂಬೈ: ಶುಭ್ಮನ್ ಗಿಲ್ ಅಂಡರ್ 19 ಕ್ರಿಕೆಟ್ ನಲ್ಲಿ ತನ್ನ ಅದ್ಭುತ ಆಟದಿಂದ ಸುದ್ದಿಯಾದ ಪ್ರತಿಭಾನ್ವಿತ ಆಟಗಾರ. ನಂತರ ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲೂ ಕೊಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ ಗಿಲ್ ತನ್ನ ಆಟದಿಂದ ಗಮನ ಸೆಳೆದಿದ್ದರು. ಆದರೆ ಗಿಲ್ ಈಗ ಕ್ರಿಕೆಟ್ ಹೊರತಾದ ಕಾರಣವೊಂದಕ್ಕೆ ಸುದ್ದಿಯಾಗಿದ್ದಾರೆ.

Advertisement

ಪಂಜಾಬ್ ಮೂಲದ ಈ ಬಲಗೈ ಆಟಗಾರ ಈಗ ಪ್ರೀತಿಯಲ್ಲಿ ಬಿದ್ದಿದ್ದಾರಂತೆ. ಅದೂ ಕೂಡಾ ಕ್ರಿಕೆಟ್ ದಿಗ್ಗಜ ಸಚಿನ್ ತೆಂಡುಲ್ಕರ್ ಮಗಳ ಜೊತೆ ! ಹೀಗೊಂದು ಸುದ್ದಿ ಈ ಹಿಂದೆಯೂ ಒಮ್ಮೆ ಕೇಳಿ ಬಂದಿತ್ತಾದರೂಇತ್ತೀಚೆಗಷ್ಟೆ ಈ ಊಹಾಪೋಹಕ್ಕೆ ಪುಷ್ಠಿ ಸಿಕ್ಕುವಂತಹ ಘಟನೆ ನಡೆದಿದೆ. ಹಾಗಾದರೆ ಆಗಿದ್ದೇನು ? ಮುಂದೆ ಓದಿ.

ಶುಭ್ಮನ್ ಗಿಲ್ ಇತ್ತೀಚೆಗಷ್ಟೆ ಹೊಚ್ಚ ಹೊಸ ರೇಂಜ್ ರೋವರ್ ಕಾರನ್ನು ಖರೀದಿಸಿದ್ದರು. ಕಾರಿನೊಂದಿಗೆ ನಿಂತುಕೊಂಡಿದ್ದ ಫೋಟೋವೊಂದನ್ನು ಗಿಲ್ ಸಾಮಾಜಿಕ ಜಾಲತಾಣ ಇನ್ಸ್ಟಾಗ್ರಾಮ್ ನಲ್ಲಿ ಹರಿಯಬಿಟ್ಟಿದ್ದರು. ಈ ಫೋಟೋಗೆ ಸಚಿನ್ ತೆಂಡುಲ್ಕರ್ ಪುತ್ರಿ ಸಾರಾ ತೆಂಡುಲ್ಕರ್ ‘ಶುಭಾಶಯಗಳು’ ಎಂದು ಪ್ರತಿಕ್ರಿಯೆ ನೀಡಿದ್ದರು. ಇದಕ್ಕೆ ಪ್ರತಿಯಾಗಿ ಶುಭ್ಮನ್ ಕೂಡಾ ‘ಥ್ಯಾಂಕ್ಸ್ ಅ ಲಾಟ್’ ಎಂದು ಮರು ಕಾಮೆಂಟ್ ಹಾಕಿದ್ದರು.

ಇಷ್ಟೇ ಆಗಿದ್ದರೆ ಇದು ಇಷ್ಟು ದೊಡ್ಡ ಸುದ್ದಿಯೇನು ಆಗುತ್ತಿರಲಿಲ್ಲವೇನೋ! ಆದರೆ ಇದರ ನಡುವೆ ಬಂದಿದ್ದು ಟಿಂ ಇಂಡಿಯಾ ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ. ಗಿಲ್ ರ ಥ್ಯಾಂಕ್ಸ್ ಅ ಲಾಟ್ ಕಾಮೆಂಟ್ ಗೆ ‘ಮೋಸ್ಟ್ ವೆಲ್ ಕಮ್ ಫ್ರಮ್ ಹರ್’ ಎಂದು ಕಣ್ಣು ಮಿಟುಕಿಸುವ ಇಮೋಜಿ ಹಾಕಿದ್ದಾರೆ. ಇದೇ ಈಗ ಗಿಲ್ – ಸಾರಾ ನಡುವೆ ಏನೋ ನಡೆಯುತ್ತಿದೆ ಎಂಬುದಕ್ಕೆ ಸಾಕ್ಷಿಯಾಗಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next