ಕೋಲಾರ: ಕೋಳಿಗಳಿಂದ ಕೊರೊನಾ ಹರಡುವ ವದಂತಿ ಹಿನ್ನೆಲೆಯಲ್ಲಿ ಕೋಳಿಗಳ ಮಾರಣ ಹೋಮ ಮಾಡಲಾಗುತ್ತಿದೆ.
ಕೋಲಾರ ಜಿಲ್ಲೆಯ ಬಂಗಾರಪೇಟೆ ತಾಲ್ಲೂಕಿನ ಮಾಗೊಂದಿ ಗ್ರಾಮದಲ್ಲಿಈ ಕೋಳಿಗಳನ್ನು ಮಾರಣಹೋಮ ನಡೆಸಲಾಗುತ್ತಿದೆ.
ಕೋಳಿಗಳಿಂದ ಕೊರೊನಾ ವೈರಸ್ ಹರಡುತ್ತದೆ ಎಂದು ವದಂತಿ ಹಬ್ಬಿದ್ದು, ಇಲ್ಲಿನ ಫಾರಂಗಳಿಂದಲೇ ಕೋಳಿಗಳ ಮಾರಣ ಹೋಮ ಮಾಡಲಾಗುತ್ತಿದೆ.
ಹೇಮಂತ ರೆಡ್ಡಿ ಎಂಬುವವರಿಗೆ ಸೇರಿದ ಕೋಳಿ ಫಾರಂ ಇದಾಗಿದ್ದು, ಮಂಗಳವಾರ ಬೆಳ್ಳಂ ಬೆಳಿಗ್ಗೆಯೇ ಬಂದು ಕೋಳಿಗಳನ್ನು ಕಂಪನಿಯವರು ಸಾಯಿಸಿದ್ದಾರೆ. ಫಾರಂನಲ್ಲಿ ಸಾಕಲಾಗುತ್ತಿದ್ದ ಸುಮಾರು 9500 ಕೋಳಿಗಳನ್ನು ಸಾಯಿಸಲಾಗಿದೆ.
ಮಾಗೊಂದಿ ಗ್ರಾಮದ ಹೊರವಲಯದಲ್ಲಿ ಗುಂಡಿ ತೆಗೆದು ಮುಚ್ಚಿ ಹಾಕಲಾಗಿದೆ. ಕೊರೊನಾ ಕಾಯಿಲೆ ಬರಲು ಕೋಳಿ ತಿಂದರೆ ಬರುತ್ತದೆ ಎಂಬ ಇರುವುದರಿಂದ ತಾಲೂಕಿನ ಮಂದಿ ಗ್ರಾಮದಲ್ಲಿ ಗ್ರಾಮಸ್ಥರು ಪಕ್ಕದಲ್ಲಿರುವ ಕೋಳಿ ಸಾಕಾಣಿಕಾ ಕೇಂದ್ರ ವಿರುದ್ಧ ಗಲಾಟೆ ಮಾಡುತ್ತಿದ್ದಾರೆ. ಎಲ್ಲಿ ನೋಡಿದರೂ ಇದರ ಬಗ್ಗೆ ಚರ್ಚೆ ಹೆಚ್ಚಾಗಿ ನಡೆಸಲಾಗುತ್ತಿದೆ.
ಮಾಗೊಂದಿ ಗ್ರಾಮದ ಕೋಳಿ ಫಾರಂ ಮಾಲಿಕ ಹೇಮಂತ ರೆಡ್ಡಿ ತೀವ್ರವಾಗಿ ಅಸಮಾಧಾನಗೊಂಡಿದ್ದು, ಕೊರೊನಾ ಕಾಯಿಲೆಗೂ ಕೋಳಿ ಸಾಕಾಣಿಕೆಗೆ ಯಾವುದೇ ಸಂಬಂಧ ಇಲ್ಲದಿದ್ದರೂ ಕೆಲವು ಕಿಡಿಗೇಡಿಗಳು ದುರುದ್ದೇಶದಿಂದ ಸುಳ್ಳು ಸುದ್ದಿ ಹಬ್ಬಿಸಿದ್ದಾರೆ. ಈ ರೀತಿ ವದಂತಿ ಹಬ್ಬಿಸಿದವರ ವಿರುದ್ಧ ಕ್ರಮಕ್ಕೆ ಫಾರಂ ಮಾಲೀಕರ ಒತ್ತಾಯ ಮಾಡುತ್ತಿದ್ದಾರೆ.