Advertisement
ಸಾಮಾನ್ಯ ಸಾವಿನ ಪ್ರಕರಣಗಳಲ್ಲಿ ಸೂರ್ಯಾಸ್ತದ ಬಳಿಕವೂ ಪೋಸ್ಟ್ ಮಾರ್ಟಂಗೆ ಅವಕಾಶ ನೀಡಿದರೆ ಅಂಗಾಂಗ ದಾನಗಳಿಗೆ ಸಹಾಯ ವಾಗಲಿದೆ. ರಾತ್ರಿ ವೇಳೆ ಮರಣೋತ್ತರ ಪರೀಕ್ಷೆ ನಡೆಸುವಂತೆ ಕೇಂದ್ರ ಸರಕಾರಕ್ಕೆ ಮನವಿಗಳು ಬಂದಿರುವ ಹಿನ್ನೆಲೆಯಲ್ಲಿ ಬ್ರಿಟಿಷರು ಜಾರಿ ಗೊಳಿಸಿದ್ದ ಪದ್ಧತಿಗೆ ಮುಕ್ತಾಯ ಹಾಡಲು ತೀರ್ಮಾನಿಸಲಾಗಿದೆ ಎಂದು ಮನಸುಖ ಮಾಂಡವಿಯಾ ಟ್ವೀಟ್‌ನಲ್ಲಿ ತಿಳಿಸಿದ್ದಾರೆ. ಜನರಿಗೆ ಮರಣೋತ್ತರ ಪರೀಕ್ಷೆಯ ಪದ್ಧತಿ ಯಲ್ಲಿ ಸದ್ಯ ಇರುವ ನಿಯಮಗಳಿಂದ ಅನನುಕೂಲ ವಾಗುತ್ತಿತ್ತು. ಹೀಗಾಗಿ ಅವುಗಳನ್ನು ರದ್ದುಪಡಿಸುವ ನಿಟ್ಟಿನಲ್ಲಿ ಮೋದಿ ಸರಕಾರ ಈ ನಿರ್ಧಾರ ಕೈಗೊಂಡಿದೆ ಎಂದು ಬರೆದುಕೊಂಡಿದ್ದಾರೆ.
ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾ ಲಯ ಸೂರ್ಯಾಸ್ತದ ಬಳಿಕ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡುವ ಬಗ್ಗೆ ಪರಿ ಶೀಲನೆ ನಡೆಸಿತ್ತು. ಈಗಾಗಲೇ ಕೆಲವು ವೈದ್ಯಕೀಯ ಸಂಸ್ಥೆಗಳು ರಾತ್ರಿ ಮರಣೋ ತ್ತರ ಪರೀಕ್ಷೆ ನಡೆಸುತ್ತಿವೆ ಎಂಬ ಅಭಿಪ್ರಾಯವೂ ವ್ಯಕ್ತವಾಗಿತ್ತು. ವೈದ್ಯಕೀಯ ಕ್ಷೇತ್ರದಲ್ಲಿ ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಲಾಗಿರುವ ಹಿನ್ನೆಲೆಯಲ್ಲಿ ಮತ್ತು ರಾತ್ರಿಯ ವೇಳೆ ಕೂಡ ಸಾಕಷ್ಟು ಒಳ್ಳೆಯ ಬೆಳಕು ಲಭ್ಯವಿರುವ ಕಾರಣ ಮರಣೋತ್ತರ ಪರೀಕ್ಷೆ ನಡೆಸಲು ಅವಕಾಶ ನೀಡಬಹುದು ಎಂದು ತೀರ್ಮಾನಿಸಲಾಗಿತ್ತು.
Related Articles
ರಾತ್ರಿ ವೇಳೆ ನಡೆಯುವ ಎಲ್ಲ ರೀತಿಯ ಮರಣೋತ್ತರ ಪರೀಕ್ಷೆಗಳ ವೀಡಿಯೋ ಚಿತ್ರೀಕರಣ ನಡೆಸಲು ಕೇಂದ್ರ ಆರೋಗ್ಯ ಸೇವೆಗಳ ನಿರ್ದೇಶನಾಲಯ ನಿರ್ಧರಿಸಿದೆ.
Advertisement