Advertisement

ಪಾಳುಬಿದ್ದ ಮನೆ, ನೆರಳು ಮತ್ತು ತೊಗಲು ಬೊಂಬೆಗಳು

04:21 PM Feb 03, 2018 | Team Udayavani |

ಸಂಕೀರ್ಣ ನಿರೂಪಣಾ ತಂತ್ರ, ಮ್ಯಾಜಿಕ್‌ ರಿಯಲಿಸಂ ಮುಂತಾದ ತಂತ್ರಗಳು ಸಿನಿಮಾಗಳಲ್ಲಿ ಮತ್ತು ಪುಸ್ತಕದಲ್ಲಿ ಕಾಣಸಿಗುತ್ತಿದ್ದವು. ರಂಗಪ್ರಕಾರದಲ್ಲಿ ಅಂಥ ಪ್ರಯೋಗಗಳು ಕಾಣಸಿಗುವುದು ಅಪರೂಪ. ಏಕೆಂದರೆ ನಾಟಕವಾಗಿ ಅದನ್ನು ಕಾರ್ಯರೂಪಕ್ಕೆ ತರುವುದು ಕ್ಲಿಷ್ಟಕರವೆನ್ನುವುದು ಒಂದು ಕಾರಣ. ಅಂಥ ಒಂದು ಪ್ರಯೋಗಾತ್ಮಕ ಸೈಕಲಾಜಿಕಲ್‌ ಥ್ರಿಲ್ಲರ್‌ ನಾಟಕ “ದಿ ಕ್ಯಾಬಿನೆಟ್‌ ಆಫ್ ಡಾ. ಕಲಿಗರಿ’.

Advertisement

ಈ ನಾಟಕ, ಪುಸ್ತಕ ಮತ್ತು ಸಿನಿಮಾ ನೋಡಿದ ಅನುಭವವನ್ನು ನೀಡುತ್ತೆ. ರೋಮಾಂಚನಕಾರಿ ದೃಶ್ಯವೈಭವ ಕೆಲವರಿಗೆ ಅತಿ ಎಂದು ತೋರಬಹುದು. ಆದರೆ ಕಥಾವಸ್ತುವೇ ಹಾಗಿರುವುದರಿಂದ ದೂರುವ ಹಾಗಿಲ್ಲ. ವೇದಿಕೆ ಮೇಲೆ ಪಾತ್ರಗಳು ಕಥೆಯನ್ನು ಹೇಳುತ್ತಿದ್ದರೆ, ಹಿಂದುಗಡೆ ಹಾಕಲಾಗಿರುವ ಟಿ.ವಿ ಸ್ಕ್ರೀನ್‌ ಕೂಡಾ ನಾಟಕದ ನಿರೂಪಣೆಯನ್ನು ಮಾಡುತ್ತದೆ. ಹೀಗಾಗಿ ಹಲವಾರು ಹಂತಗಳಲ್ಲಿ ಕಥೆ ಸಾಗುತ್ತದೆ.

ಅದನ್ನು ಗ್ರಹಿಸಲು ಪ್ರೇಕ್ಷಕನ ಗಮನ ಅತ್ಯಗತ್ಯ. ಇಲ್ಲದೇ ಹೋದರೆ ಕಥೆಯ ತುಣುಕು ಮಿಸ್‌ ಆಗುವ ಸಾಧ್ಯತೆ ಇದೆ. ಅಂದ ಹಾಗೆ 1920ನೇ ಇಸವಿಯಲ್ಲೇ ಈ ನಾಟಕ ಮೊದಲು ಜರ್ಮನಿಯಲ್ಲಿ ಇದೇ ಹೆಸರಿನಲ್ಲಿ ಸಿನಿಮಾ ಆಗಿ ತೆರೆಕಂಡಿತ್ತು. ಹಿಟ್ಲರ್‌ನ ಆಗಮನದ ಕುರಿತು ದಶಕಗಳ ಹಿಂದೆಯೇ ಸೂಚಿಸಿತ್ತು ಎಂಬ ಖ್ಯಾತಿ ಆ ಮೂಕಿ ಸಿನಿಮಾಗಿದೆ.

ಪ್ರಜಾಪ್ರಭುತ್ವದ ಕಗ್ಗೊಲೆ ನಾನಾ ವಿಧಗಳಲ್ಲಿ ನಾನಾ ರಾಷ್ಟ್ರಗಳಲ್ಲಿ ಗಮನಿಸಬಹುದಾದ ಇವತ್ತಿನ ಸಂದರ್ಭದಲ್ಲಿ ಈ ನಾಟಕ ಪ್ರಸ್ತುತತೆಯನ್ನು ಪಡೆಯುತ್ತೆ ಅನ್ನೋದು ನಿರ್ದೇಶಕರ ಅಭಿಪ್ರಾಯ. ಭಯ ಹುಟ್ಟಿಸುವ ಕಲಾ ನಿರ್ದೇಶನ, ಪಾಳುಬಿದ್ದ ಮನೆ, ನೆರಳುಗಳು, ತೊಗಲುಬೊಂಬೆಗಳು ಹೀಗೆ ರಂಗಾಸಕ್ತರ ಕುತೂಹಲ ಕೆರಳಿಸುವ ಅಂಶಗಳನ್ನು ಈ ಇಂಗ್ಲೀಷ್‌ ನಾಟಕ ಹೊಂದಿದೆ. ದೀಪನ್‌ ಶಿವರಾಮನ್‌ ನಿರ್ದೇಶಿಸಿ ನಟಿಸಿರುವ ಈ ನಾಟಕ ಬೆಂಗಳೂರಿನ ಬ್ಲೂ ಓಷನ್‌ ಥಿಯೇಟರ್‌ನ ಸಹಯೋಗದಲ್ಲಿ ಮೂಡಿ ಬರುತ್ತಿದೆ.

ಎಲ್ಲಿ?: ದಿ ಬೇ ಆ್ಯಂಫಿ ಥಿಯೇಟರ್‌, ಬೆಳ್ಳಂದೂರು
ಯಾವಾಗ?: ಫೆ. 9- 11, ಸಂಜೆ 6.30 ಮತ್ತು ರಾತ್ರಿ 8.30 (ದಿನಕ್ಕೆರಡು ಪ್ರದರ್ಶನಗಳು)
ಟಿಕೆಟ್‌: 500ರೂ ಯಿಂದ ಶುರು

Advertisement
Advertisement

Udayavani is now on Telegram. Click here to join our channel and stay updated with the latest news.

Next