Advertisement

“ರಗಡ್’ಎಂಟ್ರಿ ಕೊಟ್ಟ ಮರಿ ಟೈಗರ್: Watch

04:47 PM Jun 22, 2018 | |

ಅಮ್ಮ ಸಿನಿ ಕ್ರಿಯೇಷನ್ಸ್ ಬ್ಯಾನರ್ ನಲ್ಲಿ ತಯಾರಾಗುತ್ತಿರುವ ವಿನೋದ್ ಪ್ರಭಾಕರ್ ಅಭಿನಯದ ಬಹು ನಿರೀಕ್ಷಿತ “ರಗಡ್’ ಚಿತ್ರದ ಟೀಸರ್ ಬಿಡುಗಡೆಯಾಗಿದ್ದು, ಯಂಗ್​ ಅಂಡ್​ ಎನರ್ಜಿಟಿಕ್ ಆಗಿ ಪಕ್ಕಾ ಮಾಸ್ ಎಂಟ್ರಿ ಕೊಟ್ಟಿದ್ದಾರೆ ಮರಿ ಟೈಗರ್. ಅಲ್ಲದೇ ಭುಜದ ಮೇಲೆ ಆನೆ ಟ್ಯಾಟೂ ಹಾಕಿಸಿಕೊಂಡು, ಒಂದೇ ಉಸಿರಿನಲ್ಲಿ ಉದ್ದುದ್ದ ಡೈಲಾಗ್ ಹೊಡೆದಿದ್ದಾರೆ.

Advertisement

ಇದೊಂದು ಪಕ್ಕಾ ಲವ್‌ ಮತ್ತು ಆ್ಯಕ್ಷನ್‌ ಚಿತ್ರವಾಗಿದ್ದು, ಪಾತ್ರಕ್ಕಾಗಿ 8 ಪ್ಯಾಕ್ ವರ್ಕೌಟ್ ಮಾಡಿದ್ದಾರೆ ವಿನೋದ್ ಪ್ರಭಾಕರ್. ಇದಕ್ಕಾಗಿಯೇ 6 ತಿಂಗಳು ಉಪ್ಪು, ಖಾರ ಬಿಟ್ಟು ವರ್ಕೌಟ್ ಮಾಡಿದ್ದಲ್ಲದೇ, ಚಿತ್ರದಲ್ಲಿ ಆರಂಭದ ದೃಶ್ಯವೇ ಅಂಡರ್‌ ವಾಟರ್‌ನಲ್ಲಿ ಇರುವಂಥದ್ದು.

ನೀರಲ್ಲಿ ಸುಮಾರು 30 ಸೆಕೆಂಡ್‌ಗಳ ಕಾಲ ಇರುವ ದೃಶ್ಯ ಬರುವ ಹಿನ್ನೆಲೆಯಲ್ಲಿ ವಿನೋದ್‌ ಪ್ರಭಾಕರ್‌, ತಾನೇ ಅಂಡರ್‌ವಾಟರ್‌ ನಲ್ಲಿ ಕುಳಿತುಕೊಳ್ಳುವುದಾಗಿ ನಿರ್ಧರಿಸಿ ಅಂಡರ್​ ವಾಟರ್​ನಲ್ಲೂ ಉಸಿರು ಗಟ್ಟಿ ಕೂರೋ ರಿಸ್ಕ್​ ಸ್ಟಂಟ್ ಟ್ರೈ ಮಾಡಿದ್ದಾರೆ.

ಇನ್ನು ವಿನೋದ್ ಪ್ರಭಾಕರ್ ಎದುರಿಗೆ ನಾಯಕಿಯಾಗಿ ಚೈತ್ರಾ ರೆಡ್ಡಿ ನಟಿಸುತ್ತಿದ್ದಾರೆ. ಚಿತ್ರಕ್ಕೆ ದರ್ಶನ್‌ ಅವರ ಹಲವು ಚಿತ್ರಗಳಿಗೆ ಅಸೋಸಿಯೇಟ್‌ ಆಗಿ ಕೆಲಸ ಮಾಡಿದ್ದ ಮಹೇಶ್‌ ಗೌಡ ಆ್ಯಕ್ಷನ್ ಕಟ್ ಹೇಳಿದ್ದು, ಅರುಣ್‌ ಕುಮಾರ್‌ ನಿರ್ಮಾಣ, ಅಭಿಮನ್‌ ರಾಯ್‌ ಸಂಗೀತ ಚಿತ್ರಕ್ಕಿದೆ.

Advertisement

Udayavani is now on Telegram. Click here to join our channel and stay updated with the latest news.

Next