ವಾಷಿಂಗ್ಟನ್: ಡೊನಾಲ್ಡ್ ಟ್ರಂಪ್ ಆಪ್ತ, ವಕೀಲ ರೂಢಿ ಗಿಯುಲಿಯಾನಿ ಅವರಿಗೆ ಕೋವಿಡ್ ಸೋಂಕು ದೃಢಪಟ್ಟಿದೆ. ಆ ಮೂಲಕ ಟ್ರಂಪ್ ಅವರ ಆಪ್ತ ವಲಯದಲ್ಲಿ ಕೋವಿಡ್ ಸೊಂಕಿಗೆ ಒಳಪಟ್ಟವರ ಪಟ್ಟಿಯಲ್ಲಿ ಇವರೂ ಸೇರಿಕೊಂಡಿದ್ದಾರೆ.
ಕೋವಿಡ್ ಸೋಂಕಿನ ಲಕ್ಷಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಗಿಯುಲಿಯಾನಿ ಅವರು ವಾಷಿಂಗ್ಟನ್ ನ ಜಾರ್ಜ್ ಟೌನ್ ವಿಶ್ವವಿದ್ಯಾನಿಲಯದ ವೈದ್ಯಕೀಯ ಕೇಂದ್ರದಲ್ಲಿ ಭಾನುವಾರ (ಡಿ 6) ರಂದು ದಾಖಲಾಗಿದ್ದರು.
ಈ ಕುರಿತಾಗಿ ಟ್ವಿಟ್ ಮಾಡಿರುವ ಟ್ರಂಪ್, ಗಿಯುಲಿಯಾನಿ ಅವರಿಗೆ ‘ಕೋವಿಡ್ ವೈರಸ್’ ಸೋಂಕು ದೃಡಪಟ್ಟಿದೆ ಎಂದು ತಿಳಿಸಿದ್ದು, ಇವರ ಸೋಂಕಿನ ಕಾರಣ ನಮ್ಮ ಕಾರ್ಯವಿಧಾನದ ಮೇಲೆ ಯಾವುದೇ ರೀತಿಯ ಪ್ರಭಾವ ಬೀರುವುದಿಲ್ಲ ಎಂದಿದ್ದಾರೆ.
ಇದನ್ನೂ ಓದಿ:ನಾಳೆ ಭಾರತ್ ಬಂದ್: ಕರಾವಳಿಯಲ್ಲಿ ಹೇಗಿರಲಿದೆ ಬಂದ್, ಬಸ್ ಸಂಚಾರ ಪರಿಸ್ಥಿತಿ?
76 ವರ್ಷದ ಗಿಯುಲಿಯಾನಿ ಅತಿಯಾದ ತೂಕ ಮತ್ತು ಕ್ಯಾನ್ಸರ್ ಗೆ ತುತ್ತಾದವರಾಗಿದ್ದು. ಇದೀಗ ಕೋವಿಡ್ ಸೋಂಕಿನಿಂದಾಗಿ ಅವರಲ್ಲಿ ಸೋಂಕಿನ ತೀವ್ರ ಲಕ್ಷಣಗಳು ಕಂಡುಬರುವ ಸಾಧ್ಯತೆಗಳಿವೆ ಎನ್ನಲಾಗುತ್ತಿದೆ.
ಟ್ರಂಪ್ ಅವರ ರಾಜಕೀಯ ಮತ್ತು ಕಾನೂನಾತ್ಮಕ ವಿಚಾರಗಳಿಗೆ ಸಂಬಂಧಿಸಿದಂತೆ ಇವರ ಪಾತ್ರ ಪ್ರಮುಖವಾಗಿತ್ತು ಎಂದು ವರದಿಯಾಗಿದೆ.