Advertisement
ನಗರದಲ್ಲಿ ಶುಕ್ರವಾರ ಸಿದ್ದರಾಮೆಶ್ವರ ವಿಜ್ಞಾನ ಕಾಲೇಜು ಪದವಿ ಪೂರ್ವ ವಿಭಾಗದ ನೂತನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಆಶೀರ್ವಚನ ನೀಡಿದ ಅವರು, ಉತ್ತರ ಕರ್ನಾಟಕ ಭಾಗದ ಬಡ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗುತ್ತಿರುವುದನ್ನು ಮನಗಂಡು ಲಿಂಗೈಕ್ಯ ಡಾ| ಶಿವಬಸವ ಶ್ರೀಗಳು ಶ್ರೀಮಠದಿಂದ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದರು. ಅವರ ಆಶಯ ಹಾಗೂ ಚಿಂತನೆಯನ್ನು ಇಂದಿಗೂ ಮುಂದುವರಿಸಿಕೊಂಡು ಹೋಗಲಾಗುತ್ತಿದೆ. 5 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ವಿಜ್ಞಾನ ಕಾಲೇಜಿನ ಕಟ್ಟಡ ಒಂದೂವರೆ ವರ್ಷದಲ್ಲಿ ಪೂರ್ಣಗೊಳ್ಳಲಿದೆ ಎಂದರು.
ಹೇಳಿದರು. ನಗರ ಪೊಲೀಸ್ ಉಪ ಆಯುುಕ್ತ ನಾರಾಯಣ ಭರಮನಿ ಮಾತನಾಡಿ, ರಾಜ್ಯದ ಮತ್ತು ಪ್ರಮುಖವಾಗಿ ಬೆಳಗಾವಿ ಗಡಿ ಭಾಗದ ಬಹುತೇಕ ಎಲ್ಲಾ ಆಗು ಹೋಗುಗಳಲ್ಲಿ ಶ್ರೀಮಠವು ಅತ್ಯಂತ ಪ್ರಮುಖ ಪಾತ್ರ ವಹಿಸಿದ್ದನ್ನು ನೆನಪಿಸಿಕೊಂಡರು .
Related Articles
Advertisement
ಕಾರ್ಯಕ್ರಮದಲ್ಲಿ ಇಂಜಿನಿಯರ್ ಮಹೇಶ ಹೆಬ್ಟಾಳೆ, ಪ್ರಾಚಾರ್ಯ ಸಿದ್ದರಾಮ ರೆಡ್ಡಿ, ಬೈಲಹೊಂಗಲ ಸರ್ಕಾರಿ ಪಿಯು ಕಾಲೇಜಿನ ಪುಂಡಲೀಕ ಕಾಂಬ್ಳೆ , ಗುತ್ತಿಗೆದಾರ ವೈಭವ್ ಬಡಮಂಜಿ, ಬಿಎಡ್ ಕಾಲೇಜು ಪ್ರಾಚಾರ್ಯ ಡಾ| ಎ.ಎಲ್ ಪಾಟೀಲ್ ಉಪಸ್ಥಿತರಿದ್ದರು. ಉಪನ್ಯಾಸಕ ಎ.ಕೆ ಪಾಟೀಲ ನಿರ್ವಹಿಸಿದರು. ಶಶಿಕಲಾ ಸ್ವಾಗತಿಸಿದರು. ವಿಜ್ಞಾನ ಕಾಲೇಜು ಮುಖ್ಯಸ್ಥ ಪ್ರವೀಣ ಪಾಟೀಲ್ ವಂದಿಸಿದರು.