Advertisement

ಶಿಕ್ಷಕನಿಂದ ಅಸಭ್ಯ ವರ್ತನೆ: ಬಿಇಒಗೆ ದೂರು

04:23 PM Dec 10, 2022 | Team Udayavani |

ಮಂಡ್ಯ: ಮಕ್ಕಳನ್ನು ಭವಿಷ್ಯದ ಸತøಜೆಗಳನ್ನಾಗಿ ರೂಪಿಸಬೇಕಾದ ಶಿಕ್ಷಕನೊಬ್ಬ ವಿದ್ಯಾರ್ಥಿನಿಯರ ಜತೆ ಅಸಭ್ಯವಾಗಿ ವರ್ತಿಸಿರುವ ಘಟನೆ ಮಂಡ್ಯ ತಾಲೂಕಿನ ಬೇಬಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದಿದೆ.

Advertisement

ಹಲವು ಬಾರಿ ದೂರು ಸಲ್ಲಿಕೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಕನ್ನಡ ಶಿಕ್ಷಕ ಮಹದೇವು ಎಂಬಾತನೇ ಈ ಕೃತ್ಯ ನಡೆಸಿ ದ್ದಾನೆ. ವಿದ್ಯಾರ್ಥಿನಿಯರ ಜತೆ ಅಸಭ್ಯ ವಾಗಿ ವರ್ತಿಸುವುದಲ್ಲದೆ, ಅವರ ಮೈ, ಕೈ ಮುಟ್ಟಿ ಲೈಂಗಿಕ ದೌರ್ಜನ್ಯ ನಡೆಸಿದ್ದಾನೆ ಎಂದು ಸ್ವತಃ ವಿದ್ಯಾರ್ಥಿನಿಯರೇ ತಮ್ಮ ಪೋಷಕರ ಬಳಿ ಅಳಲು ತೋಡಿಕೊಂಡಿ ದ್ದಾರೆ. ಕಳೆದ ಎರಡು ವರ್ಷಗಳಿಂದಲೂ ಈ ರೀತಿಯಾಗುತ್ತಿದ್ದು ಪೋಷಕರು ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.

ಬಿಇಒಗೆ ಕರೆ: ಆದರೆ, ಅಧಿಕಾರಿಗಳು ಈವ ರೆಗೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ. ಇದರಿಂದ ರೋಸಿ ಹೋಗಿದ್ದ ಪೋಷಕರು ಎಸ್‌ಡಿಎಂಸಿ ಗಮನಕ್ಕೆ ತಂದಿಲ್ಲದೆ, ಸ್ಥಳೀಯ ಗ್ರಾಮ ಪಂಚಾಯ್ತಿಗೂ ದೂರು ನೀಡಿದ್ದಾರೆ. ಶುಕ್ರವಾರ ಇದ್ದಕ್ಕಿದ್ದಂತೆ ಎಸ್‌ಡಿಎಂಸಿ ಸಭೆ ಸೇರಿ ಈ ಬಗ್ಗೆ ಚರ್ಚಿಸಿದ್ದಾರೆ. ಅಲ್ಲದೆ, ಶಿಕ್ಷಕ ಮಹದೇವು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಲ್ಲದೆ ಒಂದು ಹಂತದಲ್ಲಿ ಹಲ್ಲೆ ಮಾಡಲೂ ಮುಂದಾಗಿದ್ದಾರೆ. ತಕ್ಷಣ ಪಂಚಾಯ್ತಿ ಸದಸ್ಯರು ತಡೆದು ಬಿಇಒಗೆ ಕರೆ ಮಾಡಿ ಸುದ್ದಿ ಮುಟ್ಟಿಸಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಬಿಇಒ ಸೌಭಾಗ್ಯ ಅವರು ಪೋಷಕರ ದೂರನ್ನು ಆಲಿಸಿದರಲ್ಲದೆ, ಶಿಕ್ಷಕ ಮಹದೇವು ಅವರನ್ನು ಶುಕ್ರವಾರದಿಂದಲೇ ಕಡ್ಡಾಯ ರಜೆ ಮೇಲೆ ತೆರಳುವಂತೆ ಆದೇಶ ಹೊರಡಿಸಿದರು.

ಡಿಡಿಪಿಐ ಜತೆ ಚರ್ಚೆ ಮಾಡಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ಮಕ್ಕಳ ಪೋಷಕರಿಗೆ ಭರವಸೆ ನೀಡಿದರು. ಈ ಬಗ್ಗೆ ಅಸಮಾಧಾನಗೊಂಡ ಪೋಷಕರು, ಮಹದೇವು ಅವರನ್ನು ಅಮಾನತು ಮಾಡಬೇಕು. ಬೇರೆ ಯಾವುದೇ ಶಾಲೆಗೆ ಕಳುಹಿಸಬಾರದೆಂದು ಪಟ್ಟು ಹಿಡಿದರು.

ನಂತರ ಮಾತನಾಡಿದ ಬಿಇಒ, ಅವರನ್ನು ಅಮಾನತು ಮಾಡುವ ಅಧಿ ಕಾರ ನನಗಿಲ್ಲ. ಡಿಡಿಪಿಐ ಜತೆ ಚರ್ಚೆ ಮಾಡಿ ವಿವರಣೆ ನೀಡುತ್ತೇನೆ. ಖಂಡಿತವಾಗಿಯೂ ಶಿಕ್ಷಕ ಮಹದೇವು ಅವರ ವಿರುದ್ಧ ಕಾನೂನು ರೀತಿಯ ಕ್ರಮ ಜರುಗಿಸಲಾಗುವುದು ಎಂದು ಸಮಾಧಾನಪಡಿಸಿದರು.

Advertisement

ಡಿಡಿಪಿಐಗೆ ವರದಿ ಸಲ್ಲಿಸುವೆ: ಇದು ವಿದ್ಯಾರ್ಥಿನಿಯರ ವಿಚಾರವಾ ಗಿರುವುದರಿಂದ ಗ್ರಾಮಸ್ಥರು ತುಂಬಾ ಆಕ್ರೋಶಗೊಂಡಿದ್ದರು. ಕೂಡಲೇ ನಾನು ಸ್ಥಳಕ್ಕೆ ಹೋಗಿ ಎಲ್ಲರನ್ನೂ ಸಮಾಧಾನಪಡಿಸಿ ವರದಿ ತೆಗೆದುಕೊಂಡು ಬಂದಿದ್ದೇನೆ. ಶಿಕ್ಷಕನ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುವಂತೆ ಡಿಡಿಪಿಐ ಅವರಿಗೆ ವರದಿ ಸಲ್ಲಿಸಲಾಗುವುದು ಎಂದು ಮಂಡ್ಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ.ಸೌಭಾಗ್ಯ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next