Advertisement

Kadaba: ರಬ್ಬರ್ ತೋಟದ ಕಾರ್ಮಿಕರನ್ನು ಬೆನ್ನಟ್ಟಿದ ಕಾಡಾನೆಗಳು: ಮೂವರಿಗೆ ಗಾಯ

10:47 AM Dec 16, 2023 | Team Udayavani |

ಕಡಬ: ಇಲ್ಲಿನ ಕೊಣಾಜೆ ಕರ್ನಾಟಕ ಅರಣ್ಯ ಅಭಿವೃದ್ಧಿ ನಿಗಮ (ಕೆ.ಎಫ್.ಡಿ.ಸಿ) ದ ರಬ್ಬರ್ ತೋಟದಲ್ಲಿ ರಬ್ಬರ್ ಟಾಪಿಂಗ್ ಮಾಡುತ್ತಿದ್ದ ಕಾರ್ಮಿಕರನ್ನು ಕಾಡಾನೆಗಳು ಬೆನ್ನಟ್ಟಿ ಮೂವರು ಗಾಯಗೊಂಡ ಘಟನೆ ಡಿ.16ರ ಶನಿವಾರ ಮುಂಜಾನೆ ಸಂಭವಿಸಿದೆ.

Advertisement

ನಿಗಮದ ಟಾಪಿಂಗ್ ಕಾರ್ಮಿಕ ರಾಜಗೋಪಾಲ್ (49), ಮೇಸ್ತ್ರಿಗಳಾದ ನಾಗಪ್ಪ (53) ಹಾಗೂ ಶಿವರಾಜ್ (43) ಗಾಯಗೊಂಡವರು.

ಗಾಯಾಳುಗಳನ್ನು ಕಡಬ ಸಮುದಾಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಕಾರ್ಮಿಕರು ಕೆಲಸದಲ್ಲಿ ನಿರತರಾಗಿದ್ದಾಗ ಆನೆಗಳು ಕಾಣಿಸಿಕೊಂಡಿವೆ.

ಭಯಭೀತರಾದ ಅವರು ಓಡಿ ತಪ್ಪಿಸಿಕೊಳ್ಳುವ ವೇಳೆ ಬಿದ್ದು ತರಚಿದ ಗಾಯಗಳಾಗಿವೆ. ಓಡುವ ವೇಳೆ ಆನೆಗಳು ಅವರನ್ನು ಬೆನ್ನಟ್ಟಿವೆ ಎಂದು ಗಾಯಾಳುಗಳು ತಿಳಿಸಿದ್ದಾರೆ. ಸುದ್ದಿ ತಿಳಿದ ಅರಣ್ಯ ಸಿಬಂದಿ ಸ್ಥಳಕ್ಕೆ ಧಾವಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next