Advertisement

ಈಗ ರಿಕ್ಷಾ ಚಾಲಕನ ಸರದಿ; ನಿಯಮ ಉಲ್ಲಂಘನೆಗೆ 32 ಸಾವಿರ ರೂ.ದಂಡ

09:37 AM Sep 05, 2019 | sudhir |

ಹೊಸದಿಲ್ಲಿ: ಸಂಚಾರ ನಿಯಮ ಉಲ್ಲಂಘನೆಗೆ ಹೊಸ ದಂಡ ಮೊತ್ತ ಸೆ.1 ರಿಂದ ಜಾರಿಯಾದ ಬೆನ್ನಲ್ಲೇ ಸಾವಿರಾರು ದಂಡ ಹಾಕಿಸಿಕೊಳ್ಳುವವರ ಸಂಖ್ಯೆ ಏರತೊಡಗಿದೆ. ನಿನ್ನೆಯಷ್ಟೇ ಗುರುಗ್ರಾಮದಲ್ಲಿ ಸ್ಕೂಟರ್‌ ಸವಾರನೊಬ್ಬ ದಾಖಲೆ, ಹೆಲ್ಮೆಟ್‌ ಇಲ್ಲದ್ದಕ್ಕೆ 23 ಸಾವಿರ ರೂ. ದಂಡ ಹಾಕಿಸಿಕೊಂಡಿದ್ದು, ಈಗ ಅದೇ ಗುರುಗ್ರಾಮದಲ್ಲಿ ರಿಕ್ಷಾ ಚಾಲಕನೊಬ್ಬ ದಾಖಲೆ ನೀಡದ್ದಕ್ಕೆ 32 ಸಾವಿರ ರೂ. ದಂಡ ಹಾಕಿಸಿಕೊಂಡಿದ್ದಾನೆ.

Advertisement

ಈ ರಿಕ್ಷಾ ಚಾಲಕನ ಬಳಿ ಪರವಾನಿಗೆ, ನೋಂದಣಿ ಪ್ರಮಾಣಪತ್ರ, ಮಾಲಿನ್ಯ ಪ್ರಮಾಣಪತ್ರ, ವಿಮೆ ಇತ್ಯಾದಿ ದಾಖಲೆಗಳು ಇರಲಿಲ್ಲ ಎನ್ನಲಾಗಿದೆ.ಹೊಸ ಕಾನೂನು ಪ್ರಕಾರ ಪರವಾನಿಗೆ ಹೊಂದಿರದಿದ್ದರೆ 5 ಸಾವಿರ ರೂ. ದಂಡ ಕಟ್ಟಬೇಕು. ಈ ಮೊದಲು 500 ರೂ. ದಂಡ ಇತ್ತು.

Advertisement

Udayavani is now on Telegram. Click here to join our channel and stay updated with the latest news.

Next