Advertisement

ಆರ್‌ಟಿಒ: ಮೊದಲ ದಿನವೇ 5.60 ಕೋ.ರೂ. ದಂಡ ವಸೂಲಿ!

12:53 AM Feb 04, 2023 | Team Udayavani |

ಬೆಂಗಳೂರು: ಸಂಚಾರಿ ನಿಯಮ ಉಲ್ಲಂಘಿಸಿ ದಂಡ ಬಾಕಿ ಉಳಿಸಿರುವ ಸವಾರರಿಗೆ ಶೇ. 50ರಷ್ಟು ರಿಯಾಯಿತಿ ನೀಡಲಾಗಿದ್ದು, ಶುಕ್ರವಾರ 2,01,828 ಪ್ರಕರಣಗಳಿಗೆ ಸಂಬಂಧಿಸಿ 5,61,45,000 ರೂ. ದಂಡ ಸಂಗ್ರಹವಾಗಿದೆ.

Advertisement

ಯಾವ ನಿಯಮಗಳ ಉಲ್ಲಂಘನೆಗೆ ಎಷ್ಟು ರಿಯಾಯಿತಿ ಎಂಬ ಕುರಿತು ಸಂಚಾರ ವಿಭಾಗದ ಪೊಲೀಸರು ಶುಕ್ರವಾರ 44 ತರಹದ ನಿಯಮಗಳ ಉಲ್ಲಂಘನೆಯ ಪಟ್ಟಿ ಬಿಡು ಗಡೆ ಮಾಡಿದ್ದಾರೆ. ಇದರ ಬೆನ್ನಲ್ಲೇ ಬೆಂಗಳೂರಿನ ವಾಹನ ಸವಾರರು ದಂಡ ಕಟ್ಟಲು ಮುಗಿಬಿದ್ದಿದ್ದಾರೆ.

ಸಂಚಾರ ಪೊಲೀಸರ ಕೊಡುಗೆಗೆ ನಿರೀಕ್ಷೆಗೂ ಮೀರಿದ ಪ್ರತಿಕ್ರಿಯೆ ಬರುತ್ತಿದೆ. ಫೆ. 11ರ ವರೆಗೆ ಶೇ. 50ರಷ್ಟು ರಿಯಾಯಿತಿಯಲ್ಲಿ ದಂಡ ಪಾವತಿಸಲು ಅವಕಾಶಗಳಿವೆ.

Advertisement

Udayavani is now on Telegram. Click here to join our channel and stay updated with the latest news.

Next