Advertisement

ಆರ್‌ಟಿಐ ಅಡಿ ಮೌಖೀಕ ಅರ್ಜಿಗೂ ಅವಕಾಶ!

01:35 AM Mar 31, 2017 | Karthik A |

ಹೊಸದಿಲ್ಲಿ: ಮಾಹಿತಿ ಹಕ್ಕು ಕಾಯ್ದೆ ಅಡಿ ಮೌಖೀಕವಾಗಿ ಕೂಡ ಅರ್ಜಿ ಸಲ್ಲಿಸಲು ಅವಕಾಶವಿದೆ ಎಂದು ಸಿಬಂದಿ ಖಾತೆ ಸಹಾಯಕ ಸಚಿವ ಜಿತೇಂದ್ರ ಸಿಂಗ್‌ ಸ್ಪಷ್ಟಪಡಿಸಿದ್ದಾರೆ. ರಾಜ್ಯಸಭೆಯಲ್ಲಿ ಈ ಕುರಿತು ಮಾಹಿತಿ ನೀಡಿದ ಸಿಂಗ್‌, ‘ಮಾಹಿತಿ ಪಡೆಯಲಿಚ್ಛಿಸುವ ವ್ಯಕ್ತಿ ಲಿಖೀತ ಅರ್ಜಿ ಸಲ್ಲಿಸಲು ಸಾಧ್ಯ ವಾಗದೆ ಇರುವ ಸಂದರ್ಭಗಳಲ್ಲಿ, ಕೇಂದ್ರ ಸಾರ್ವಜನಿಕ ಮಾಹಿತಿ ಅಧಿಕಾರಿ ಅಥವಾ ರಾಜ್ಯ ಸಾರ್ವಜನಿಕ ಮಾಹಿತಿ ಅಧಿಕಾರಿ ಅರ್ಜಿದಾರರಿಗೆ ಎಲ್ಲ ಸಹಕಾರ ನೀಡುವ ಜತೆಗೆ, ಮೌಖೀಕ ಅರ್ಜಿ ಸ್ವೀಕರಿಸಲು ಕಾಯ್ದೆಯ ವಿಭಾಗ 6 (1) ಅವಕಾಶ ಕಲ್ಪಿಸುತ್ತದೆ” ಎಂದರು. ‘ಆದರೆ ರಾಜ್ಯ ,ಕೇಂದ್ರದ ಯಾವುದೇ ನೋಡಲ್‌ ವಿಭಾಗಗಳು ಈ ನಿಯಮಾವಳಿಯ ಮಾಹಿತಿ ಬಹಿರಂಗಪಡಿಸಿಲ್ಲ,” ಎಂದು ಎನ್‌ಜಿಒ ಸದಸ್ಯರೊಬ್ಬರು ದೂರಿದ್ದಾರೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next