Advertisement

RTI ಅರ್ಜಿಗೆ ಸಿಕ್ಕಿದ್ದು 40,000 ಪುಟದ ಪ್ರತಿಕ್ರಿಯೆ!

09:01 PM Jul 29, 2023 | Team Udayavani |

ಇಂದೋರ್‌: ಮಾಹಿತಿ ಹಕ್ಕು ಕಾಯ್ದೆ ಬಂದ ಮೇಲೆ, ಸರ್ಕಾರಿ ಮಾಹಿತಿಗಾಗಿ ಅರ್ಜಿ ಹಾಕುವುದು ಮಾಮೂಲಿಯಾಗಿದೆ. ಇದಕ್ಕೆ ಬರುವ ಉತ್ತರಗಳು ಎಷ್ಟು ಪುಟ ಹೊಂದಿರಬಹುದು? ಮಧ್ಯಪ್ರದೇಶದ ಧರ್ಮೇಂದ್ರ ಶುಕ್ಲ ಹಾಕಿದ್ದ ಅರ್ಜಿಗೆ ಅಲ್ಲಿನ ಆರೋಗ್ಯಾಧಿಕಾರಿ 40,000 ಪುಟಗಳ ಉತ್ತರ ನೀಡಿದ್ದಾರೆ! ಧರ್ಮೇಂದ್ರ ಶುಕ್ಲ ಈ ಮಾಹಿತಿಗಳನ್ನು ತಮ್ಮ ಎಸ್‌ಯುವಿ ಕಾರಿನಲ್ಲಿ ತುಂಬಿಕೊಂಡು ಬಂದಿದ್ದಾರೆ.

Advertisement

ಇಂದೋರ್‌ನ ಶುಕ್ಲ, ಕೊರೊನಾ ಸಂದರ್ಭದಲ್ಲಿ ಔಷಧಿಗಳು, ಉಪಕರಣ ಸಾಮಗ್ರಿಗಳ ಖರೀದಿ ಸಂಬಂಧಿಸಿದಂತೆ ಟೆಂಡರ್‌ ಮತ್ತು ಬಿಲ್‌ ಪಾವತಿಗಳ ಬಗ್ಗೆ ಮಾಹಿತಿ ನೀಡುವಂತೆ ಕೋರಿ ಇಂದೋರ್‌ನ ಮುಖ್ಯ ವೈದ್ಯಕೀಯ ಹಾಗೂ ಆರೋಗ್ಯ ಅಧಿಕಾರಿ (ಸಿಎಂಎಚ್‌ಒ)ಗೆ ಅರ್ಜಿ ಸಲ್ಲಿಸಿದ್ದರು. ಇದಕ್ಕೆ ಪ್ರತಿಯಾಗಿ ಸಿಎಂಎಚ್‌ 40,000 ಪುಟಗಳ ದಾಖಲೆ ನೀಡಿದೆ. ಕಾನೂನಿನ ಅನ್ವಯ ಪ್ರತಿ ಪುಟಕ್ಕೆ 2 ರೂ.ಗಳನ್ನು ಧರ್ಮೇಂದ್ರ ಪಾವತಿಸಬೇಕಿತ್ತು. ಆದರೆ, ಮಾಹಿತಿ ಕೋರಿ 1 ತಿಂಗಳಾದರೂ ಪ್ರತಿಕ್ರಿಯೆ ನೀಡದ ಹಿನ್ನೆಲೆ ಅವರಿಗೆ ಉಚಿತವಾಗಿ ದಾಖಲೆಗಳನ್ನ ಒದಗಿಸಲಾಗಿದೆ.

ಇನ್ನು ಸರಿಯಾದ ಸಮಯಕ್ಕೆ ದಾಖಲೆ ನೀಡದೇ ಸರ್ಕಾರಕ್ಕೆ 80 ಸಾವಿರ ರೂ. ನಷ್ಟ ಉಂಟು ಮಾಡಿರುವ ಹಿನ್ನೆಲೆಯಲ್ಲಿ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಹಿರಿಯ ಅಧಿಕಾರಿ ಆದೇಶಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next