Advertisement
ಪೋಷಕ ಹನುಮಂತೇ ಗೌಡ ಮಾತನಾಡಿ, ತಾಲೂಕಿನ ಆಲೂರುದುದ್ದನಹಳ್ಳಿ ಬಳಿ ಇರುವ ಖಾಸಗಿ ಶಾಲೆಯಲ್ಲಿ ಪಠ್ಯ ಪುಸ್ತಕ ಮತ್ತು ಸಮವಸ್ತ್ರ ಹೊರತು ಪಡಿಸಿ ಹೆಚ್ಚುವರಿಯಾಗಿ 5800 ರೂ. ಹಣ ಪಾವತಿಸಬೇಕು ಎಂದು ಬೇಡಿಕೆ ಇಟ್ಟಿದ್ದು, ಹಣ ಸಂದಾಯ ಮಾಡಿದ್ದಕ್ಕೆ ರಸೀದಿ ನೀಡುವಂತೆ ಕೇಳಿದರೆ ರಸೀದಿ ನೀಡಲಾಗುವುದಿಲ್ಲ.
ಪ್ರತಿಯೊಂದು ಶಾಲೆಯವರು ಶುಲ್ಕ ನಿಗದಿ ಪಡಿಸಿದ್ದರೂ ಸಹ ಹೆಚ್ಚುವರಿಯಾಗಿ ಪಾವತಿಸಬೇಕು. ಮಕ್ಕಳ ಜೀವನದ ಜೊತೆ ಖಾಸಗಿ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿಗಳು ಚೆಲ್ಲಾಟವಾಡುತ್ತಿದೆ. ಶಿಕ್ಷಣ ಇಲಾಖೆ ಸೂಕ್ತ ಕ್ರಮ ಕೈಗೊಳ್ಳದಿದ್ದರೆ ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು.
Related Articles
ಓದುತ್ತಿರುವ ವಿದ್ಯಾರ್ಥಿಗಳಿಗೆ ಯಾವುದೇ ರೀತಿಯ ಮಾನಸಿಕ ತೊಂದರೆಗೆ ಒಳಪಡಬಾರದು ಎಂಬ ದೃಷ್ಟಿಯಲ್ಲಿ ಸರ್ಕಾರ ಅನುಕೂಲ ಮಾಡಿಕೊಟ್ಟಿದೆ. ಕೆಲ ಖಾಸಗಿ ಶಾಲೆಗಳು ಇದನ್ನು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ. ಆರ್‌ಟಿಇ ಮಕ್ಕಳ ಪೋಷಕರಿಂದ 5800 ರೂ.ಗಳ ಹೆಚ್ಚುವರಿ ರಸೀದಿ ರಹಿತ ಶುಲ್ಕವನ್ನು ಕಟ್ಟುವಂತೆ ಬೇಡಿಕೆ ಇಡುತ್ತಾರೆ.
Advertisement
ಶಾಲೆಯಲ್ಲಿ ಆರ್‌ಟಿಇ ಮಕ್ಕಳಿಗೆ ಪ್ರತ್ಯೇತಕವಾಗಿ ಕಾಣಲಾಗುತ್ತಿದೆ. ಹಲವಾರು ಮಕ್ಕಳು ಇದರಿಂದ ಮಾನಸಿಕಹಿಂಸೆ ಪಡುತ್ತಿದ್ದಾರೆ. ನಮ್ಮ ಜಿಲ್ಲಾ ಬಹುಜನ ವಿದ್ಯಾರ್ಥಿ ಸಮಿತಿಗೆ ಪೋಷಕರು ಮಾಹಿತಿ ನೀಡಿದ್ದಾರೆ. ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಗಮನ ಹರಿಸಬೇಕು ಎಂದು ಆಗ್ರಹಿಸಿದರು. ಪೋಷಕರಾದ ನಾರಾಯಣಸ್ವಾಮಿ, ಸಿ. ಮಂಜುನಾಥ್, ಮುನಿಕೆಂಪಣ್ಣ, ಡಿ.ಎಂ. ಮಂಜುನಾಥ, ದುಗ್ಗೇಶ್, ಎ.ಎಂ.
ಮಂಜು ನಾಥ್, ಲಕ್ಷ್ಮಣ್, ಮುನಿರಾಜು ಇತರರು ಇದ್ದರು. ಆರ್‌ಟಿಇ ಅಡಿ ಖಾಸಗಿ ಶಾಲೆಯಲ್ಲಿ 5800ರೂ. ಹಣ
ಬೇಡಿಕೆ ಇಟ್ಟಿರುವುದು ಪೋಷಕರು ತಮ್ಮ ಗಮನಕ್ಕೆ ತಂದಿದ್ದಾರೆ. ದೂರ ವಾಣಿ ಮುಖಾಂತರ ಕರೆ ಮಾಡಿ
ವಿಚಾರಿಸಿದ್ದೇನೆ. ಕಾರಣ ಕೇಳಿ ನೋಟಿಸ್ ಸಹ ನೀಡಲಾಗುತ್ತಿದೆ. ನಾನು ಯಾರ ಪರ ಅಲ್ಲ. ಪ್ರತಿ ಮಗುವಿಗೂ ಗುಣಮಟ್ಟದ ಶಿಕ್ಷಣ ಸಿಗುವುದೇ ನನ್ನ ಕರ್ತವ್ಯವಾಗಿದೆ. ಮಕ್ಕಳಿಗೆ ಅನ್ಯಾಯವಾಗದಂತೆ ನೋಡಿಕೊಳ್ಳಲಾಗುತ್ತಿದೆ. ಮುಖಾ ಮುಖೀ ಇಬ್ಬರನ್ನು ಕೂರಿಸಿ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
ಗಾಯಿತ್ರಿದೇವಿ, ಕ್ಷೇತ್ರ ಶಿಕ್ಷಣಾಧಿಕಾರಿ