Advertisement

ವಾಂಬೆ ಹೌಸ್ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ : ಬಡಾವಣೆ ನಿವಾಸಿಗಳ 17 ವರ್ಷಗಳ ಕನಸು-ನನಸು

09:30 PM Apr 08, 2021 | Team Udayavani |

ಹುಣಸೂರು : ಬಡವರಿಗೆ ನೆಮ್ಮಿದಿಯ ಬದುಕು ಕಟ್ಟಿಕೊಳ್ಳಲು ಸರಕಾರದವತಿಯಿಂದ 17 ವರ್ಷಗಳ ಹಿಂದೆ ನಿರ್ಮಿಸಿಕೊಟ್ಟಿದ್ದ ಮನೆಗಳ ಹಕ್ಕುಪತ್ರ ಸಿಕ್ಕಿದ್ದು, ನಿವಾಸಿಗಳ ಕನಸು ನನಸಾಗಿದ್ದಕ್ಕಾಗಿ ಸಂತಸಗೊಂಡಿದ್ದಾರೆ.

Advertisement

ನಗರದ ರತ್ನಪುರಿ ರಸ್ತೆಯಲ್ಲಿ ವಿಜಯನಗರ ಬಡಾವಣೆ (ವಾಂಬೆಹೌಸ್)ಯಲ್ಲಿ ನಗರಸಭೆಯಿಂದ ಅಯೋಜಿಸಿದ ಮನೆಗಳ ಇ-ಸ್ವತ್ತು ವಿತರಣೆ ಕಾರ್ಯಕ್ರಮದಲ್ಲಿ ಬಾಗವಹಿಸಿ ಮಾತನಾಡಿದ ಶಾಸಕ ಎಚ್.ಪಿ.ಮಂಜುನಾಥ್ ಬಾಗಿಲಿಗೆ ಹಕ್ಕುಪತ್ರ ವಿತರಿಸುವ ಮೂಲಕ ಬಡವರು ಬದುಕು ಕಟ್ಟಿಕೊಳ್ಳಲು ನೆರವಾಗುವ ಮೂಲಕ ಕೊಟ್ಟ ಮಾತನ್ನು ಉಳಿಸಿಕೊಂಡ ತೃಪ್ತಿ ಇದೆ ಎಂದು ಬಣ್ಣಿಸಿದರು.

ಕಳೆದ 17 ವರ್ಷಗಳಿಂದ ಈ ಬಡಾವಣೆಯ ನಿವಾಸಿಗಳಿಗೆ ಮನೆಗಳ ಹಕ್ಕು ಪತ್ರ ಹಾಗೂ ಇ-ಸ್ವತ್ತು ಸಿಗದೆ ನಗಗರಸಭೆ ಕಛೆರಿಗೆ ಅಲೆದು ಅಲೆದು ಬೇಸೆತ್ತು ಹೋಗಿದ್ದ ನಿವಾಸಿಗಳಿಗೆ ನಾನು ಎರಡನೇ ಅವಧಿಯಲ್ಲಿ ಶಾಸಕನಾಗಿದ್ದ ವೇಳೆ ಫಲಾನುಭವಿಗಳ ಪಟ್ಟಿ ಹಾಗೂ ವಾಸವಿರುವವರ ಬಗ್ಗೆ ಸಮಗ್ರ ಮಾಹಿತಿ ಕಲೆ ಹಾಕಿ, ಹಕ್ಕುಪತ್ರ ನೀಡಲು ಮುಂದಾಗಿದ್ದೆ, ಆ ವೇಳೆಯಲ್ಲಿ ನೈಜ ಫಲಾನುಭವಿಗಳನ್ನು ಹುಡುಕುವುದು ಸಮಸ್ಯೆಯಾಗಿದ್ದು, ಕೆಲವರು ಪೌತಿಯಾಗಿದ್ದರೆ, ಮತ್ತೆ ಕೆಲವರು ಮಾರಾಟ ಮಾಡಿ ಬೇರೆ ಕಡೆಗೆ ಹೊರಟು ಹೋಗಿದ್ದರು, ಇದನ್ನು ಗಂಬೀರವಾಗಿ ಪರಿಗಣಿಸಿದ ತಾವು. ಫಲಾನುಭವಿಗಳಿಗೆ ನಗರಸಭೆ ಕಚೇರಿಗೆ ನಿತ್ಯ ಎಡತಾಕುವುದು ಬೇಡ ಅಧಿಕಾರಿಗಳನ್ನೇ ಸ್ಥಳಕ್ಕೆ ಕರೆತಂದು ಹಕ್ಕು ಪತ್ರ ಕೊಡಿಸುವ ವಾಗ್ದಾನ ಮಾಡಿದ್ದೆ. ನಂತರದ ಚುನಾವಣೆಯಲ್ಲಿ ನಾನು ಸೋತು ಎರಡು ವರ್ಷ ಕಳೆದು ಹೋಗಿತ್ತು. ಮತ್ತೆ ಉಪ ಚುನಾವಣೆಯಲ್ಲಿ ಗೆದ್ದರೂ ಕೋವಿಡ್ ದಿಂದ ಒಂದು ವರ್ಷ ಉರುಳಿದೆ. ಈಗ ಹೇಳಿದ ಮಾತಿನಂತೆ ನಿಮ್ಮಗಳ ಮನೆ ಬಾಗಿಲಿಗೆ ಬಂದುಹಕ್ಕು ಪತ್ರ ಹಾಗೂ ಇ-ಸ್ವತ್ತು ಕೋಡಿಸಿದ್ದೇನೆ, ನಾನು ಕೊಟ್ಟ ಭರವಸೆಯೂ ಈಡೇರಿದ ತೃಪ್ತಿ ತಮಗಿದೆ.

ಇಲ್ಲಿನ 116 ಮನೆಗಳ ಪೈಕಿ 58 ಮನೆಗಳಿಗೆ ಮಾತ್ರ ಹಕ್ಕು ಪತ್ರ ನೀಡಲು ಸಾದ್ಯವಾಗಿದೆ. ಇಲ್ಲಿ ಮಂಡಳಿಯಿಂದ ನೇರ ಹಂಚಿಕೆದಾರರೂ, ಹಂಚಿಕೆಯಾಗಿ ಬಾಡಿಗೆ ಮತ್ತು ಬ್ಯೋಗ್ಯದಲ್ಲಿರುವವರು, ಹಾಗೂ ಹಂಚಿಕೆಯಾಗಿ ಮಾರಾಟ ಮಾಡಿಕೊಂಡು ಹೋಗಿರುವವರುಇದ್ದಾರೆ ಇವುಗಳಲ್ಲಿ ನಿಜವಾದ ಫಲಾನುಭವಿಗಳ ಗುರುತಿಸಿ ಅರ್ಹರಿಗೆ ದಾಖಲಾತಿಗಳನ್ನು ಪರಿಶಿಲಿಸಿ ಮುಂದಿನ ದಿನಗಳಲ್ಲಿ ನೀಡಲಾಗುವುದು ಫಲಾನುಭವಿಗಳು  ಮನೆಗಳನ್ನು ಮಾರಾಟ ಮಾಡದೆ ಬದುಕನ್ನು ರೂಪಿಸಿಕೊಳ್ಳಿ ನೀವು ಮಾರಿಕೊಂಡರೆ ನಾವು ಪಟ್ಟ ಶ್ರಮ ವ್ಯರ್ಥವಾಗಲಿದೆ ಎಂದರು.

ಹಕ್ಕು ಪತ್ರ ಹಾಗೂ ಇ-ಸ್ವತ್ತು ಸಿಗಲು ನಿಮ್ಮ ವಾರ್ಡ್ ಸದಸ್ಯ ಮಂಜುರ ವಿಶೇಷ ಆಸಕ್ತಿಯಿಂದ ಮನೆ ಮಾಲಿಕತ್ವ ಸಿಗಲು ಸಾಧ್ಯವಾಗಿದ್ದು, ಅವರನ್ನು ಅಭಿನಂದಿಸುವುದಾಗಿ ತಿಳಿಸಿದರು.

Advertisement

ನಗರಸಭಾ ಸದಸ್ಯ ಹಾಗೂ ನಗರಾಭಿವೃದ್ದಿ ಪ್ರಾಧಿಕಾರದ ಸದಸ್ಯ ಎಚ್.ಪಿ.ಸತೀಶ್‌ಕುಮಾರ್ ಮಾತನಾಡಿ ಶಾಸಕ ಎಚ್.ಪಿ.ಮಂಜುನಾಥ್‌ರವರು ಬಡಾವನೆಯ ನಿವಾಸಿಗಳ ಕನಸನ್ನು ನನಸು ಮಾಡಿದ್ದಾರೆ ವಾರ್ಡಿನಕೌನ್ಸಿಲರ್ ಅಧಿಕಾರಿಗಳ ಬಳಿ ಹಾಗೂ ಶಾಸಕರ ಬಳಿ ಪಟ್ಟು  ಹಿಡಿದು ಹಿಡಿದಕೆಲಸವನ್ನುಕಾರ್ಯಗತ ಗೊಳಿಸಿದ್ದಾರೆಂದರು.

ನಗರಸಭಾಅದ್ಯಕ್ಷೆ  ಅನುಷಾ, ಉಪಾದ್ಯಕ್ಷದೇವನಾಯ್ಕ, ನಗರಾಭಿವೃದ್ದಿ ಪ್ರಾಧಿಕಾರದ ಅದ್ಯಕ್ಷ ಗಣೇಶ್‌ಕುಮಾರಸ್ವಾಮಿ,  ಸದಸ್ಯರಾದ ಮಂಜು, ಗೀತಾನಿಂಗರಾಜ್, ಸೌರಭಸಿದ್ದರಾಜು, ರಮೇಶ, ಶ್ರೀನಾಥ್, ಯುನುಸ್, ದೇವರಾಜ್.ಸಿ, ಆಶಾ, ಮಾಲೀಕ್, ಮನು, ಶ್ರೀನಾಥ, ಶ್ವೆತಾಮಂಜು, ಪ್ರೀಯಾಂಕಥಾಮಸ್, ಇಮ್ರಾನ್, ಜಾಕಿರ್, ಬ್ಲಾಕ್‌ಅದ್ಯಕ್ಶ ಟಿ.ವಿ.ನಾರಾಯಣ್, ಚೆಸ್ಕಂ ಎಇಇ ಸಿದ್ದಪ್ಪ, ಸಿ.ಪಿ.ಐ ರವಿ, ನಗರಸಭೆಯರಾಘವೇಂದ್ರ, ಸುರೇಂದ್ರ, ರಾಮು, ಬಡಾವಣೆಯ ರವಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next