Advertisement

ರೋಬೋಟ್‌ಗಳಿಗೇ ತಿಳಿವಳಿಕೆ ನೀಡುತ್ತೆ RT-2

09:40 PM Jul 29, 2023 | Team Udayavani |

ಗೂಗಲ್‌ನ ಡೀಪ್‌ ಮೈಂಡ್‌ ಕಂಪನಿಯು, ರೋಬೋಟಿಕ್ಸ್‌ ಟ್ರಾನ್ಸ್‌ಫಾರ್ಮರ್‌-2 ಅಥವಾ ಆರ್‌ಟಿ-2 ಎಂಬ ಕೃತಕ ಬುದ್ಧಿಮತ್ತೆ (ಎಐ) ಮಾದರಿಯನ್ನು ಅನಾವರಣಗೊಳಿಸಿದೆ. ರೋಬೋಟ್‌ಗಳು ತಮಗೆ ಅಪರಿಚಿತವಾದ ಸಂಗತಿಗಳನ್ನೂ ಉತ್ತಮವಾಗಿಯೇ ನಿರ್ವಹಿಸುವಂತಹ ತಂತ್ರಜ್ಞಾನವೊಂದನ್ನು ಇದರಲ್ಲಿ ಅಡಕಗೊಳಿಸಲಾಗಿದೆ. ಈಗಾಗಲೇ ಅದಕ್ಕೆ ಗೊತ್ತಿರುವ ಅಥವಾ ಗೊತ್ತೇ ಇಲ್ಲದ ಸಂಗತಿಗಳನ್ನು ಸೂಕ್ತವಾಗಿ ನಿಭಾಯಿಸಲು ರೋಬೋಟ್‌ಗಳಿಗೆ ಈ ಕೃತಕ ಬುದ್ಧಿಮತ್ತೆ ನೆರವು ನೀಡುತ್ತದೆ.

Advertisement

ಇದು ಬೇರೆಬೇರೆ ವೆಬ್‌ಸೈಟ್‌ಗಳ ಮೂಲಕ ನಿರ್ವಹಣೆಯ ಮಾಹಿತಿಯನ್ನು ಪಡೆಯುತ್ತದೆ, ಅದಕ್ಕೆ ಪೂರಕ ಚಿತ್ರಗಳನ್ನೂ ಗಮನಿಸುವಂತೆ ಎಐಯನ್ನು ರೂಪಿಸಲಾಗಿದೆ. ಉದಾಹರಣೆಗೆ, ಆರ್‌ಟಿ-2 ಕಸವನ್ನು ಗುರುತಿಸುವ ಸಾಮರ್ಥ್ಯವನ್ನು ಹೊಂದಿದೆ. ತರಬೇತಿಯಿಲ್ಲದಿದ್ದರೂ ಅದನ್ನು ಹೇಗೆ ವಿಲೇವಾರಿ ಮಾಡಬೇಕೆಂದು ತಿಳಿಸುತ್ತದೆ ಎಂದು ಗೂಗಲ್‌ ಕಂಪನಿ ಹೇಳಿದೆ.

Advertisement

Udayavani is now on Telegram. Click here to join our channel and stay updated with the latest news.

Next