Advertisement

RSS ಕಾರ್ಯಕರ್ತನ ಭೀಕರ ಹತ್ಯೆ;ಮುಖ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ 

01:45 PM Jan 23, 2019 | |

ರಾತ್ಲಾಂ (ಮಧ್ಯಪ್ರದೇಶ ): ಜಿಲ್ಲಾ ಮುಖ್ಯ ಕಾರ್ಯಾಲಯದಿಂದ 20 ಕಿ.ಮೀ ದೂರದಲ್ಲಿ ಬಿಲ್‌ಪಾಂಕ್‌ ಥಾನಾ ಎಂಬಲ್ಲಿ ಆರ್‌ಎಸ್‌ಎಸ್‌ ಪೂರ್ವ ಮಂಡಲ ಕಾರ್ಯವಾಹರಾಗಿದ್ದ ಹಿಮ್ಮತ್‌ ಪಾಟೀದಾರ್‌ ಎನ್ನುವವರನ್ನು ದುಷ್ಕರ್ಮಿಗಳು ಬರ್ಬರವಾಗಿ ಹತ್ಯೆಗೈದಿದ್ದಾರೆ. 

Advertisement

36 ವರ್ಷ ಪ್ರಾಯದ ಪಾಟೀದಾರ್‌ ಅವರ ಶವ ಬುಧವಾರ ಜಮೀನಿನಲ್ಲಿ ಪತ್ತೆಯಾಗಿದ್ದು, ಮಂಗಳವಾರ ಹೊಲಕ್ಕೆ ಹೋದವರನು ನಾಪತ್ತೆಯಾಗಿದ್ದು, ಕತ್ತು ಕತ್ತರಿಸಲಾಗಿದ್ದು, ಮುಖ ಗುರುತು ಸಿಗದಂತೆ ಬೆಂಕಿ ಹಚ್ಚಿ ಸುಟ್ಟು ಹಾಕಲಾಗಿದೆ ಎಂದು ಪೊಲೀಸ್‌ ಅಧಿಕಾರಿಗಳು ತಿಳಿಸಿದ್ದಾರೆ. 

ಸ್ಥಳಕ್ಕಾಗಮಿಸಿದ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿಕೊಟ್ಟಿದ್ದಾರೆ. 

ಹತ್ಯೆಯಾದ ಸ್ಥಳದಲ್ಲಿ ಪೊಲೀಸರಿಗೆ ಟಾರ್ಚ್‌ ಪತ್ತೆಯಾಗಿದ್ದು, ಮೋಟಾರ್‌ ಸೈಕಲ್‌ ಶವದಿಂದ 10 ಮೀಟರ್‌ ದೂರದಲ್ಲಿ ಬಿದ್ದಿತ್ತು. ಇದನ್ನೇ ಆಧರಿಸಿ ತನಿಖೆ ಕೈಗೊಂಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next