Advertisement

ಆರ್‌ಎಸ್‌ಎಸ್‌ನಿಂದ ಗರ್ಭ ಸಂಸ್ಕಾರ ಅಭಿಯಾನ ಶುರು

01:16 AM Mar 07, 2023 | Team Udayavani |

ಹೊಸದಿಲ್ಲಿ: ಆರ್‌ಎಸ್‌ಎಸ್‌ನ ಸಹವರ್ತಿ ಸಂಸ್ಥೆ “ಸಂವರ್ಧಿನೀ ನ್ಯಾಸ’ ಗರ್ಭ ಸಂಸ್ಕಾರ ಅಭಿಯಾನವನ್ನು ಆರಂಭಿಸಿದೆ. ತಾಯಿ ಗರ್ಭಿಣಿಯಾಗಿರುವಾಗಲೇ ಆಕೆಗೆ ಸಂಸ್ಕಾರ ಕೊಡುವುದರ ಮೂಲಕ, ಮಗುವಿಗೂ ಸಂಸ್ಕೃತಿ ಮತ್ತು ಮೌಲ್ಯಗಳನ್ನು ನೀಡುವುದು ಉದ್ದೇಶ ಎಂದು ಸಂವರ್ಧಿನೀ ನ್ಯಾಸದ ರಾಷ್ಟ್ರೀಯ ಸಂಘಟನ ಕಾರ್ಯದರ್ಶಿ ಮಾಧುರಿ ಮರಾಠೆ ಹೇಳಿದ್ದಾರೆ.

Advertisement

ಈ ಅಭಿಯಾನದಲ್ಲಿ ಸ್ತ್ರೀರೋಗ ತಜ್ಞರು, ಆಯುರ್ವೇದ ವೈದ್ಯರು, ಯೋಗ ಶಿಕ್ಷಕರು ಇರಲಿದ್ದಾರೆ. ಸ್ತ್ರೀ ಗರ್ಭ ಧರಿಸಿದ ಸಮಯದಿಂದ ಒಟ್ಟು 2 ವರ್ಷಗಳವರೆಗೆ ಭಗವದ್ಗೀತೆ, ರಾಮಾಯಣವನ್ನು ಪಠಣ, ಯೋಗ ತರಬೇತಿ ನೀಡಲಾಗುತ್ತದೆ.

ಈ ಅಭಿಯಾನದ ಮೂಲಕ ಒಟ್ಟು 1000 ಮಹಿಳೆಯರನ್ನು ತಲುಪುವುದು ಸಂವರ್ಧಿನೀ ನ್ಯಾಸದ ಉದ್ದೇಶ. ಮಹಾಭಾರತದಲ್ಲಿ ಅಭಿಮನ್ಯು ಗರ್ಭದಲ್ಲಿರುವಾಗಲೇ ಚಕ್ರವ್ಯೂಹ ಭೇದಿಸುವುದನ್ನು ಶ್ರೀಕೃಷ್ಣನಿಂದಲೇ ಕಲಿತಿದ್ದ ಎಂಬ ಕಥೆಯನ್ನು ನಾವೆಲ್ಲ ಕೇಳಿದ್ದೇವೆ. ಹೀಗೆ ಗರ್ಭದಲ್ಲಿರುವಾಗಲೇ ಮಗುವಿಗೆ ಶಿಕ್ಷಣ ನೀಡಲು ಈ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next