Advertisement

RSS vs INC: ಹೆಚ್ಚು ಮಕ್ಕಳ ಹೆರಲು ನಾವು ಮೊಲಗಳೇ?: ಕಾಂಗ್ರೆಸ್‌ ಪ್ರಶ್ನೆ

02:38 AM Dec 03, 2024 | Team Udayavani |

ನವದೆಹಲಿ: “ಮಕ್ಕಳನ್ನು ಹೆರುತ್ತಲೇ ಇರಲು ನಾವೇನು ಮೊಲಗಳೇ? ಹೆಚ್ಚೆಚ್ಚು ಮಕ್ಕಳನ್ನು ಹೆರಬೇಕು ಎಂದು ಉಪದೇಶ ನೀಡುತ್ತಿರುವವರು ಎಷ್ಟು ಮಕ್ಕಳನ್ನು ಹೆತ್ತಿದ್ದಾರೆ? ಅವರಿಗೆ ಯಾವ ಅನುಭವವಿದೆ?’.

Advertisement

ಹೀಗೆಂದು ಕಾಂಗ್ರೆಸ್‌ ರಾಜ್ಯಸಭಾ ಸಂಸದೆ ರೇಣುಕಾ ಚೌಧರಿ ಅವರು ಆರೆಸ್ಸೆಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ವಿರುದ್ಧ ಕಿಡಿ ಕಾರಿದ್ದಾರೆ. ದೇಶದಲ್ಲಿ ಜನಸಂಖ್ಯೆ ಕ್ಷೀಣಿಸುತ್ತಿದೆ. ಹೀಗಾಗಿ ಭಾರತೀಯ ದಂಪತಿಗಳು ಕನಿಷ್ಠ 3 ಮಕ್ಕಳಿಗೆ ಜನ್ಮ ನೀಡಬೇಕು ಎಂದು ಭಾಗವತ್‌ ಕರೆ ನೀಡಿದ ಬೆನ್ನಲ್ಲೇ ಅವರ ವಿರುದ್ಧ ಪ್ರತಿಪಕ್ಷ ನಾಯಕರು ಟೀಕಾ ಪ್ರಹಾರ ನಡೆಸುತ್ತಿದ್ದಾರೆ.

ಹೇಳಿಕೆ ಕುರಿತು ಸಂಸತ್ತಿನ ಹೊರಗೆ ಮಾಧ್ಯಮಗಳ ಎದುರು ಮಾತನಾಡಿದ ಚೌಧರಿ, “ಉದ್ಯೋಗವಿಲ್ಲದೆ ಕುಳಿತ ಯಾರಿಗೂ ಮಗಳನ್ನು ಕೊಟ್ಟು ಮದುವೆ ಮಾಡಲು ಪೋಷಕರು ಮುಂದಾಗಲ್ಲ. ದೇಶದಲ್ಲಿ ನಿರುದ್ಯೋಗ ತಾಂಡವ ಆಡುತ್ತಿದೆ, ಬೆಲೆ ಗಗನಕ್ಕೇರಿದೆ. ಹೀಗಿದ್ದಾಗ ಮಕ್ಕಳನ್ನು ಬೆಳಸುವುದಾದರೂ ಹೇಗೆ’ ಎಂದು ಪ್ರಶ್ನಿಸಿದ್ದಾರೆ.

ಉದ್ಧವ್‌ ಶಿವಸೇನೆ ಸಂಸದ ಸಂಜಯ್‌ ರಾವತ್‌ ಕೂಡ ಭಾಗವತ್‌ ಅವರು ಇಂಥ ಸಲಹೆಗಳನ್ನು ಮೊದಲಿಗೆ ಬಿಜೆಪಿ ಅವರಿಗೆ ನೀಡಲಿ ಎಂದರೆ, ಛತ್ತೀಸ್‌ಗಢ ಮಾಜಿ ಸಿಎಂ ಭೂಪೇಶ್‌ ಬಘೇಲ್‌, “ಮೊದಲು ಆರೆಸ್ಸೆಸ್‌ನವರು ಮದುವೆಯಾಗಲಿ, ನಂತರ ಮಕ್ಕಳ ಮಾತು’ ಎಂದಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next