Advertisement

ಆರ್‌ಎಸ್‌ಎಸ್‌ ವದಂತಿ ಹರಡುವ ಸಂಘಟನೆ

11:43 AM Jan 21, 2018 | Team Udayavani |

ಬೆಂಗಳೂರು: ಆರ್‌ಎಸ್‌ಎಸ್‌ ದೇಶದಲ್ಲಿ ವದಂತಿ ಹರಡುವ ಸಂಘಟನೆಯಾಗಿದೆ ಎಂದು ರಾಜ್ಯಸಭಾ ಸದಸ್ಯ ಬಿ.ಕೆ. ಹರಿಪ್ರಸಾದ್‌ ಆರೋಪಿಸಿದ್ದಾರೆ. ತಮಿಳು ಸಾಹಿತಿ ವಿಡುದಲೈ ರಾಜೇಂದ್ರನ್‌ ಬರೆದು ಕನ್ನಡಕ್ಕೆ ಕಲೈ ಸೆಲ್ವಿ ಅನುವಾದಿಸಿರುವ ಸಿರಿವರ ಪ್ರಕಾಶನದ “ಸಂಚುಗಾರ ಸಂಘ ಪರಿವಾರ’ ಪುಸ್ತಕ ಬಿಡುಗಡೆ ಮಾಡಿ ಮಾತನಾಡಿದರು.

Advertisement

ಸಂಘ ಪರಿವಾರ ದೇಶದಲ್ಲಿ ಭಯದ ವಾತಾವರಣ ಸೃಷ್ಟಿಸುವ ಮೂಲಕ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಪ್ರಯತ್ನ ನಡೆಸುತ್ತಿದೆ ಎಂದು ದೂರಿದರು. ಸಂಘ ಪರಿವಾರ ದೇಶದಲ್ಲಿ ಇದುವರೆಗೂ ಎಲ್ಲೂ ನೋಂದಣಿಯಾಗಿಲ್ಲ. ಪ್ರತಿ ವರ್ಷ ವಿಜಯದಶಮಿ ದಿನ ಗುರುದಕ್ಷಿಣೆಯಾಗಿ ಬರುವ ಹಣದ ಲೆಕ್ಕ ಕೊಟ್ಟಿಲ್ಲ.

ದಕ್ಷಿಣ ಕನ್ನಡದಲ್ಲಿ ನಡೆದ 23 ಹಿಂದೂ ಯುವಕರ ಹತ್ಯೆಯಲ್ಲಿ 13 ಹತ್ಯೆಗಳು ಸಂಘ ಪರಿವಾರದವರಿಂದ ಆಗಿವೆ. ದೇಶದಲ್ಲಿ ಯಾವುದೇ ಪಕ್ಷವನ್ನು ಅಧಿಕಾರಕ್ಕೆ ತನ್ನಿ ಅದರೆ, ಸಂಘ ಪರಿವಾರದವನ್ನು ಮಾತ್ರ ಅಧಿಕಾರಕ್ಕೆ ತರಬೇಡಿ ಎಂದರು.

ಕೇಂದ್ರ ಸರ್ಕಾರದ ಪ್ರತಿಯೊಬ್ಬ ಸಚಿವರ ಕಚೇರಿಯಲ್ಲಿ ನಾಗಪುರದ ವ್ಯಕ್ತಿಯನ್ನು ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಂದು ನೇಮಿಸಲಾಗಿದೆ. ಎಲ್ಲ ನಿರ್ಧಾರಗಳನ್ನು ಅವರೇ ತೆಗೆದುಕೊಳ್ಳುತ್ತಾರೆ. ಮೋದಿಗೆ ಪ್ರಧಾನಿಯಾಗಿ ಯಾವುದೇ ಅಧಿಕಾರ ನಡೆಸಲು ಅವಕಾಶ ಇಲ್ಲ ಎಂದರು. 

 ಸಾಹಿತಿ ಕೆ. ಮರುಳ ಸಿದ್ದಪ್ಪ,  ಜಾತ್ಯತೀತರು ಎಂದು ಹೇಳಿಕೊಳ್ಳಲು ಈಗ ಎಲ್ಲರೂ ಹಿಂಜರಿಯುತ್ತಿದ್ದಾರೆ. ಕಾಂಗ್ರೆಸ್‌ನವರೂ ಹಿಂದೂ ಎಂದು ಹೇಳಿಕೊಳ್ಳಲು ಹಾತೊರೆಯುತ್ತಿದ್ದಾರೆ. ಜಾತ್ಯತೀತರು ಹಿಂದೂ ವಿರೋಧಿಗಳಲ್ಲಾ. ಎಲ್ಲರನ್ನೂ ಒಳಗೊಂಡಿರುವ ಹಿಂದುತ್ವ ಜಾತ್ಯಾತೀತತೆ ಎಂದು ಹೇಳಿದರು.

Advertisement

ಜಾತ್ಯತೀತರು ಜಾತಿ ಧರ್ಮ ಬಿಡಬೇಕೆಂದಿಲ್ಲ. ನಮ್ಮ ಆಚರಣೆಗಳನ್ನು ಮಾಡಿಕೊಂಡೆ ಜಾತ್ಯತೀತ ವಾದ ಪ್ರತಿಪಾದಿಸಬೇಕು. ಜಾತ್ಯತೀತರಿಗೆ ಅಪ್ಪ ಅಮ್ಮ ಇಲ್ಲ ಎನ್ನುವವರಿಗೆ ನಾವು ಯಾರು ಎಂದು ಹೇಳುವ ಅಗತ್ಯವಿಲ್ಲ ಎಂದು ತಿಳಿಸಿದರು.

ತಮಿಳು ಸಾಹಿತಿ ವಿಡುದಲೈ ರಾಜೇಂದ್ರನ್‌ ಮಾತನಾಡಿ, ಆರ್‌ಎಸ್‌ಎಸ್‌ನವರು ಇತಿಹಾಸ ತಿರುಚುವ ಕೆಲಸ ಮಾಡುತ್ತಿದ್ದಾರೆ. ಭಾರತ ಮತ್ತು ಇಂಡಿಯಾ ಬಗ್ಗೆ ಜನರಲ್ಲಿ ಗೊಂದಲ ಸೃಷ್ಠಿಸುವ ಕೆಲಸ ಮಾಡಲಾಗುತ್ತಿದೆ. ಗೋಮಾಂಸವನ್ನು ಕೇಲವ ಮುಸ್ಲಿàಮರಷ್ಟೇ ಅಲ್ಲ. ಹಿಂದೂಗಳು ತಿನ್ನುತ್ತಾರೆ ಎಂದು ಹೇಳಿದರು.

ಪತ್ರಕರ್ತ ಅಗ್ನಿ ಶ್ರೀಧರ್‌ ಮಾತನಾಡಿ, ವೈದಿಕ ಶಾಹಿಯವರು ದೇಶದಲ್ಲಿ ಸಾವಿರಾರು ವರ್ಷಗಳ ಹಿಂದೆಯೇ ಮೀಸಲಾತಿಯನ್ನು ತಂದಿದ್ದಾರೆ. ಈಗ ಮೀಸಲಾತಿ ತೆಗೆದು ಹಾಕುವ ಮಾತನಾಡುತ್ತಿದ್ದಾರೆ. ಮೀಸಲಾತಿ ತೆಗೆದರೆ ಒಬ್ಬ ದಲಿತ ಕಾರ್ಪೊರೇಟರ್‌ ಆಗಲು ಸಾಧ್ಯವಿಲ್ಲ ಎಂದರು.

ಹಿಂದೂ ಧರ್ಮದ ರಕ್ಷಣೆ ಮಾಡುವುದಾಗಿ ಹೇಳುತ್ತಿರುವ ಕಲ್ಲಡ್ಕ ಪ್ರಭಾಕರ್‌ ಭಟ್‌, ಧರ್ಮ ರಕ್ಷಣೆಗೆ ತಮ್ಮ ಮನೆಯವರನ್ನು ಬಿಡಲಿ. ಪೇಜಾವರ ಶ್ರೀಗಳು ದಲಿತ ಕೇರಿಗೆ ಹೋಗಿ ಹಾಲು ಕುಡಿಯುವ ಬದಲು ತಮ್ಮ ಮಠದಲ್ಲಿ ದಲಿತರೊಂದಿಗೆ ಸಹ ಪಂಕ್ತಿ ಭೋಜನ ನಡೆಸಲಿ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next