Advertisement

ಸಿಎಂ ಬೊಮ್ಮಾಯಿ ಆರ್ ಎಸ್ಎಸ್ ಅಲ್ಲ, ಅದಕ್ಕೆ ಬದಲಾವಣೆಗೆ ಮುಂದಾಗಿದ್ದಾರೆ: ಸಿದ್ದರಾಮಯ್ಯ

12:39 PM May 01, 2022 | Team Udayavani |

ಮೈಸೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಆರ್ ಎಸ್ಎಸ್ ನವನಲ್ಲ. ಹೀಗಾಗಿ ಅವನನ್ನು ಬದಲಾಯಿಸಲು ಆರ್ ಎಸ್ಎಸ್ ನವರು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಹೇಳಿದರು.

Advertisement

ಮೈಸೂರಿನಲ್ಲಿ ಸುದ್ದಿಗಾರರೊಂದಗೆ ಮಾತನಾಡಿದ ಅವರು, ಬಸವರಾಜ ಬೊಮ್ಮಾಯಿ ಜನತಾ ಪರಿವಾರದವನು. ನಮ್ಮ ಜೊತೆಯಲ್ಲೇ ಇದ್ದ. ಆದರೆ ಅವನು ನಮ್ಮ ಪಟ್ಟುಗಳನ್ನು ಕಲಿಯಲಿಲ್ಲ‌ ಎಂದರು.

ರಾಜ್ಯದಲ್ಲಿ ರಾಜ್ಯ ಸರ್ಕಾರ ಸತ್ತು ಹೋಗಿದೆ. ಸಿಎಂ, ಗೃಹ ಸಚಿವರು ಇಬ್ಬರು ಅಶಕ್ತರು. ಗೃಹ ಸಚಿವರು ಅತ್ಯಂತ ಅಸಮರ್ಥ ಸಚಿವ. ರಾಜ್ಯದಲ್ಲಿ ಸರ್ಕಾರವೇ ಇಲ್ಲ. ಇವರಿಗೆ ಆಡಳಿತ ಮಾಡುವುದಕ್ಕೆ ಬರುತ್ತಿಲ್ಲ. ಎಲ್ಲಾ ಪರೀಕ್ಷೆಗಳಲ್ಲೂ ದುಡ್ಡು ದುಡ್ಡು ಎನ್ನುತ್ತಿದ್ದಾರೆ. ದುಡ್ಡು ಕೊಟ್ಟು ಬಂದ ಅಧಿಕಾರಿಗಳು ಇವರ ಮಾತು ಕೇಳುತ್ತಿಲ್ಲ ಎಂದು ಆರೋಪಿಸಿದರು.

ಭ್ರಷ್ಟ ಸರ್ಕಾರ: ರಾಜ್ಯದಲ್ಲಿ ಕಲ್ಲಿದ್ದಲು ಕೊರತೆಯಿಲ್ಲ. ಆದರೆ ಸರ್ಕಾರಕ್ಕೆ ಅದನ್ನು ನಿಭಾಯಿಸಲು ಬರುತ್ತಿಲ್ಲ. ಕಲ್ಲಿದ್ದಲು ಹೆಚ್ಚಾಗಿಯೇ ಇದೆ. ಆದರೆ ಅದನ್ನು ಹಂಚಿಕೆ ಮಾಡಲು ಇವರಿಗೆ ಬರುತ್ತಿಲ್ಲ. ಇಂತಹ ಆಡಳಿತದಿಂದ ಕಷ್ಟ ಎದುರಾಗುತ್ತಿದೆ. ಕೃತಕ ಕೊರತೆ ಸೃಷ್ಟಿಯನ್ನು ಮಾಡುತ್ತಿದ್ದಾರೆ.  ದಿಢೀರನೆ ಕಲ್ಲಿದ್ದಲು ಉತ್ಪಾದನೆ ನಿಲ್ಲಲು ಹೇಗೆ ಸಾಧ್ಯಾ? ಅಧಿಕಾರಿಗಳು ಯಾವ ಸಚಿವರ ಮಾತನ್ನು ಕೇಳುತ್ತಿಲ್ಲ. ಸಚಿವರುಗಳಿಗೂ ಇದರ ಬಗ್ಗೆ ಜ್ಞಾನವಿಲ್ಲ. ಇಂತಹ ಸರ್ಕಾರವನ್ನು ಕರ್ನಾಟಕ ಎಂದೂ ನೋಡಿರಲಿಲ್ಲ. ಇದೊಂದು ಭ್ರಷ್ಟ ಸರ್ಕಾರ ಎಂದು ವಾಗ್ದಾಳಿ ನಡೆಸಿದರು.

ಇದನ್ನೂ ಓದಿ:ರಾಜ್ಯದಲ್ಲಿ 60 ಯೋಜನೆಯ ಒಟ್ಟು 2465 ಕೋಟಿ ರೂ. ಹೂಡಿಕೆಯ ಪ್ರಸ್ತಾವನೆಗೆ ಅನುಮೋದನೆ

Advertisement

ಕಾಂಗ್ರೆಸ್‌ನಿಂದ ವಂಶ ಪಾರಂಪರ್ಯ ರಾಜಕಾರಣ ಎಂಬ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್‌ ಆರೋಪಕ್ಕೆ ಪ್ರತಿಕ್ರಿಯಿಸಿ, ಯಡಿಯೂರಪ್ಪ ಮತ್ತು ಅವರ ಮಕ್ಕಳು ಯಾರು? ಅಪ್ಪ- ಮಕ್ಕಳು ಅಲ್ವ? ಅಂದರೆ ವಂಶ ಪಾರಂಪರ್ಯ ರಾಜಕಾರಣದ ಬಗ್ಗೆ ಮಾತನಾಡಲು ಇವರಿಗೆ ಯಾವ ನೈತಿಕತೆ ಇದೆ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next