Advertisement

ಈ ಸಮಾಜಕ್ಕೆ ಒಳ್ಳೆಯದು ಬಯಸುವ ಯಾರು ಬೇಕಾದರೂ RSS ಕಚೇರಿಗೆ ಹೋಗಬಹುದು: ಈಶ್ವರಪ್ಪ

01:09 PM Jun 23, 2021 | Team Udayavani |

ಶಿವಮೊಗ್ಗ: ನಾಗ್ಪುರದ ಆರ್ ಎಸ್ ಎಸ್ ಕಚೇರಿ ಇರುವುದೇ ಎಲ್ಲರೂ ಈ ಸಂಘಟನೆ ಸೇರಿಕೊಂಡು ದೇಶ ಉದ್ಧಾರ ಮಾಡಬೇಕು ಅಂತಾ..ಆರ್ ಎಸ್ ಎಸ್ ಕೇವಲ ಭಾರತದಲ್ಲಿ ಅಷ್ಟೇ ಅಲ್ಲ, ಪ್ರಪಂಚದಾದ್ಯಂತ ಹರಡಿದೆ ಎಂದು ಗಾಜನೂರಿನಲ್ಲಿ ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರಪ್ಪ ಹೇಳಿಕೆ ನೀಡಿದ್ದಾರೆ.

Advertisement

ರಮೇಶ್ ಜಾರಕಿಹೊಳಿ ನಾಗ್ಪುರ ಆರ್ ಎಸ್ ಎಸ್ ನಾಯಕರ ಭೇಟಿ ವಿಚಾರವಾಗಿ ಮಾತನಾಡಿದ ಅವರು, ನಾಗ್ಪುರಕ್ಕೆ ಹೋಗಿ ಆರ್ ಎಸ್ ಎಸ್ ನಾಯಕರನ್ನು ರಮೇಶ್ ಜಾರಕಿಹೊಳಿ ಅವರಷ್ಟೇ ಅಲ್ಲ, ಮಾಧ್ಯಮದವರು ಹೋಗಿ ಭೇಟಿ ಮಾಡಬಹುದು. ಇಡೀ ವಿಶ್ವದ ಹಿಂದು ಸಮಾಜ‌ ಜಾಗೃತಿ ಆದರೆ ವಿಶ್ವಕ್ಕೆ ಒಳ್ಳೆಯದಾಗುತ್ತದೆ.

ರಮೇಶ್ ಜಾರಕಿಹೊಳಿ ಅಲ್ಲಿ ಹೋಗಿದ್ದಾರೆ ಎನ್ನುವುದಕ್ಕೆ ತುಂಬಾ ವಿಶೇಷವಾದ ಮಹತ್ವ ಕೊಡುವುದಿಲ್ಲ..ಈ ದೇಶ, ಈ ಸಮಾಜಕ್ಕೆ ಒಳ್ಳೆಯದು ಬಯಸುವ ಯಾರು ಬೇಕಾದರೂ ಕೂಡಾ ಆರ್ ಎಸ್ ಎಸ್ ಕಚೇರಿಗೆ ಹೋಗಬಹುದು. ಕೇವಲ ನಾಗ್ಪುರದಲ್ಲಿ ಆರ್ ಎಸ್ ಎಸ್ ಕಚೇರಿ ಇಲ್ಲ. ಇಡಿ ದೇಶದ ಎಲ್ಲಾ ತಾಲೂಕುಗಳಲ್ಲಿ ಕಚೇರಿ‌ ಇದೆ. ಈ ದೇಶ ಅಭಿವೃದ್ಧಿ ಆಗಬೇಕು ಎಂಬ ಅಪೇಕ್ಷೆ ಇರುವವರು ಆರ್ ಎಸ್ ಎಸ್ ಕಾರ್ಯಾಲಯಕ್ಕೆ ಬಂದು ಹೋಗಬಹುದು ಎಂದು ತಿಳಿಸಿದರು.

ಅರುಣ್ ಸಿಂಗ್ ಹೈಕಮಾಂಡ್ ಗೆ ವರದಿ ನೀಡಿರುವ ವಿಚಾರವಾಗಿ ಮಾತನಾಡಿ, ಈ ಬಗ್ಗೆ ನನಗೂ ಗೊತ್ತಿಲ್ಲ, ನಿಮಗೂ‌ ಗೊತ್ತಿಲ್ಲ. ಅರುಣ್ ಸಿಂಗ್ ಭೇಟಿ ವೇಳೆ ಯಾವ ಯಾವ ವಿಚಾರ ಪ್ರಸ್ತಾಪ ಮಾಡಿದ್ರು ನಿಮಗೆ ಗೊತ್ತಿದೆ. ರಾಜ್ಯದಲ್ಲಿ ಬಿಜೆಪಿ ಸಂಘಟನಾತ್ಮಕವಾಗಿ ಎಲ್ಲಾ ಸಂಘಟನೆ ಜೊತೆ ಸೇರಿಕೊಂಡು ಕೋವಿಡ್ ಪರಿಹಾರ ಮಾಡುವಲ್ಲಿ ಶ್ರಮ ಹಾಕಿದ್ದೇವೆ.

ಇದನ್ನೂ ಓದಿ:  ನಟ ಸಂಚಾರಿ ವಿಜಯ್ ಜಾತಿ ನಿಂದನೆ ಎದುರಿಸಿದ್ದರಾ ? ಅವರ ಸಹೋದರ ನೀಡಿದ ಸ್ಪಷ್ಟನೆ ಏನು ?

Advertisement

ಈ ಬಗ್ಗೆ ಅರುಣ್ ಸಿಂಗ್ ಕೋರ್ ಕಮಿಟಿ ಸಭೆಯಲ್ಲಿ, ಶಾಸಕರ ಜೊತೆಯಲ್ಲಿ ಚರ್ಚೆ ಮಾಡಿದ್ದಾರೆ. ಮೂರನೇ ಅಲೆ ಎದುರಾದರೆ ಏನು ಮಾಡಬೇಕು ಅಂತಾ ಅರುಣ್ ಸಿಂಗ್ ಜೊತೆ ಚರ್ಚೆ ಮಾಡಿದ್ದೇವೆ. ರಾಜ್ಯದಲ್ಲಿ ಸಂಘಟನೆ ಬೆಳೆಸುವ ದೃಷ್ಟಿಯಲ್ಲಿ ಏನೇನು ಮಾಡಬೇಕು ಎಂದು ಚರ್ಚಿಸಿದ್ದೇವೆ. ಅವರ ಜೊತೆ ಚರ್ಚೆ ಆಗಿರುವ ವಿಷಯದ ಬಗ್ಗೆ ಕೇಂದ್ರದ ನಾಯಕರಿಗೆ ವರದಿ ಕೊಟ್ಟಿರಬಹುದು ನನಗೆ ಗೊತ್ತಿಲ್ಲ ಎಂದರು.

ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರವಾಗಿ ಮಾತನಾಡಿ, ಸ್ವತಂತ್ರ ಬಂದಾಗ ಅಕ್ಕಿ ಎರಡು ರೂ. ಇತ್ತು. ಇವತ್ತು ಎಷ್ಟಿದೆ…? ಅಕ್ಕಿ ರೇಟ್, ಬೆಳೆ ರೇಟ್ ಎಲ್ಲಾ ರೇಟ್ ಸ್ವಾಭಾವಿಕವಾಗಿ ಜಾಸ್ತಿ ಅಗ್ತಾನೇ ಇರುತ್ತೇ‌. ರೇಟ್ ಜಾಸ್ತಿ ಅಗೋದು ಸರ್ಕಾರದ ಮೇಲೆ ಎಫೆಕ್ಟ್ ಅಗುವುದಿಲ್ಲ. ಕೋವಿಡ್ ಸಂದರ್ಭದಲ್ಲಿ ಉತ್ತಮ ವಾಗಿ ಕೆಲಸ ಮಾಡುತ್ತಿದ್ದೇವೆ.

ಇದನ್ನೂ ಓದಿ:  ಕೋವಿಡ್‌ ನಿಂದ ಪೋಷಕರನ್ನು ಕಳೆದುಕೊಂಡಿರುವ ಅನಾಥ ಮಕ್ಕಳಿಗೆ ಧನಸಹಾಯ: ಸಚಿವೆ ಜೊಲ್ಲೆ

ಒಂದು ಕಡೆ ಉಚಿತವಾಗಿ ವ್ಯಾಕ್ಸಿನ್, ಇನ್ನೊಂದೆಡೆ ಬಡವರಿಗೆ ರೇಶನ್ ನೀಡಲಾಗುತ್ತಿದೆ. ಸುಮಾರು 80 ಕೋಟಿ ಜನ ನಾಗರೀಕರಿಗೆ ಉಚಿತವಾಗಿ ನೀಡುತ್ತಿರೋ ಸೂಪರ್ ಲೀಡರ್ ಮೋದಿ. ಇದೇ ಕಾರಣಕ್ಕಾಗಿ ದೇಶದ ಜನರು ಮೆಚ್ಚಿಕೊಂಡಿದ್ದಾರೆ. ಕೋವಿಡ್ ಗೂ ಚುನಾವಣೆಗೂ ಯಾವುದೇ ಸಂಬಂಧ ತರಬೇಡಿ ಎಂದು ವಿಪಕ್ಷಗಳಿಗೆ ಈಶ್ವರಪ್ಪ ಮನವಿ ಮಾಡಿದಲ್ಲದೆ, ಅವರೂ ತಂದರೇ, ನಾವು ಜನರಿಗೆ ವಾಸ್ತವ ತಿಳಿಸುತ್ತೇವೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next