Advertisement
ಅವರು ಶನಿವಾರ ದಕ್ಷಿಣ ಕನ್ನಡ ಜಿಲ್ಲಾ ಸಿಪಿಐಎಂ ಘಟಕವು ಇಲ್ಲಿನ ನೆಹರೂ ಮೈದಾನದಲ್ಲಿ ಏರ್ಪಡಿಸಿದ್ದ “ಕೋಮುವಾದದ ವಿರುದ್ಧ ಶಾಂತಿ ಸಾಮರಸ್ಯಕ್ಕಾಗಿ ಕರಾವಳಿ ಸೌಹಾರ್ದ ರ್ಯಾಲಿ’ಯಲ್ಲಿ ಮಾತನಾಡಿದರು.ಜಾತ್ಯತೀತತೆ ಎಂಬ ಪದವನ್ನು ಸಂವಿಧಾನದಲ್ಲಿ ಸೇರ್ಪಡೆಗೊಳಿಸಿ ರುವುದು ಎಲ್ಲವುದಕ್ಕೂ ಕಾರಣ ಎಂಬುದಾಗಿ ಕೇಂದ್ರದ ಗೃಹ ಸಚಿವರು ಹೇಳಿಕೆ ನೀಡಿರುವುದು ಅಪಾಯಕಾರಿ. ಭಾರತದಲ್ಲಿ ವಿವಿಧ ಜಾತಿ, ಧರ್ಮದವರಿದ್ದು, ಜಾತ್ಯತೀತ ವ್ಯವಸ್ಥೆಗೆ ಹೆಸರಾಗಿದೆ. ಎಲ್ಲ ಜಾತಿ ಜನಾಂಗದವರಿಗೆ ಸೇರಿದ ದೇಶವಾಗಿದೆ; ಆರೆಸ್ಸೆಸ್‌ನ ಸೊತ್ತು ಅಲ್ಲ.
1947ರಲ್ಲಿ ದೇಶಕ್ಕೆ ಸ್ವಾತಂತ್ರÂ ದೊರಕುವ ತನಕದ 22 ವರ್ಷಗಳಲ್ಲಿ ಯಾವುದೇ ಸ್ವಾತಂತ್ರÂ ಸಂಗ್ರಾಮದಲ್ಲಿ ಭಾಗವಹಿಸಿಲ್ಲ. ಗೋಡ್ಸೆಯನ್ನು ಅಸ್ತ್ರವಾಗಿ ಬಳಸಿ ಮಹಾತ್ಮಾ ಗಾಂಧಿ ಅವರ ಕೊಲೆ ಮಾಡಿಸಿತ್ತು. ಗಾಂಧಿ ಕೊಲೆಯಾದ ದಿನ ಸಿಹಿ ಹಂಚಿ ಸಂಭ್ರಮಿಸಿತ್ತು. ಇಟೆಲಿಯ ಮುಸೋಲಿನಿ ಅವರ ಫ್ಯಾಸಿಸ್ಟ್ ನೀತಿ ಮತ್ತು ಜರ್ಮನಿಯ ಹಿಟ್ಲರ್ ತಣ್ತೀ ಸಿದ್ಧಾಂತಗಳಿಂದ ಪ್ರೇರಿತವಾಗಿರುವ ಆರೆಸ್ಸೆಸ್ ಭಾರತದಲ್ಲಿ ನಡೆದ ಕೋಮು ಗಲಭೆಗಳಿಗೆ ಬೆಂಬಲ ನೀಡಿದೆ ಎಂದು ಪಿಣರಾಯಿ ವಿಜಯನ್ ಅವರು ಟೀಕಿಸಿದರು.
Related Articles
Advertisement
ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಆರೆಸ್ಸೆಸ್ ವಿರೋಧಿಸುತ್ತಿದ್ದು, ಡಾ| ಯು.ಆರ್ ಅನಂತ ಮೂರ್ತಿ, ಶಾರೂಖ್ ಖಾನ್, ಅಮೀರ್ ಖಾನ್, ಕೇರಳದ ಪ್ರಸಿದ್ಧ ಸಾಹಿತಿ ಎಂ.ಟಿ. ವಾಸುದೇವನ್ ನಾಯರ್, ಚಲನಚಿತ್ರ ಕಲಾವಿದೆ ನಂದಿತಾ ದಾಸ್ ಅವರನ್ನು ಪಾಕಿಸ್ಥಾನಕ್ಕೆ ಹೋಗುವಂತೆ ಟಿಕೆಟ್ ನೀಡಿ ಕಳುಹಿಸಿತ್ತು ಎಂದರು.
ಕರ್ನಾಟಕದ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಸಂಘ ಪರಿವಾರದವರು ಸಂಘ ಪರಿವಾರದವ ರನ್ನೇ ಕೊಲೆ ಮಾಡುತ್ತಿದ್ದಾರೆ. ಹಿಂದೂ ಜಾಗರಣ ವೇದಿಕೆಯ ಪ್ರತಾಪ್ ಪೂಜಾರಿ, ಬಿಜೆಪಿಯ ವಿನಾಯಕ ಬಾಳಿಗಾ, ಉಡುಪಿಯಲ್ಲಿ ಪ್ರವೀಣ್ ಪೂಜಾರಿ ಕೊಲೆ ಪ್ರಕರಣಗಳು ಇದಕ್ಕೆ ನಿದರ್ಶನ ಎಂದರು.
ಸಿಪಿಎಂ ರಾಜ್ಯ ಕಾರ್ಯದರ್ಶಿ ಜಿ.ವಿ. ಶ್ರೀರಾಮ ರೆಡ್ಡಿ ಮಾತನಾಡಿ, ಮಂಗಳೂರಿನಲ್ಲಿ ಕಾರ್ಯಕ್ರಮ ಆಯೋಜಿಸಿದ ಪಕ್ಷದ ದ.ಕ. ಜಿಲ್ಲಾ ಘಟಕ ಹಾಗೂ ಅವಕಾಶ ಕಲ್ಪಿಸಿದ ರಾಜ್ಯ ಸರಕಾರಕ್ಕೆ ಅಭಿನಂದನೆ ಸಲ್ಲಿಸಿದರು. ಪಕ್ಷದ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ಜೆ. ಬಾಲಕೃಷ್ಣ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪಿಣರಾಯಿ ವಿಜಯನ್ ಅವರು ಮಲಯಾಳ ಭಾಷೆಯಲ್ಲಿ ಭಾಷಣ ಮಾಡಿದರು. ಸಿಪಿಎಐಂ ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಿ.ಜೆ. ಕೆ. ನಾಯರ್ ಭಾಷಣವನ್ನು ಕನ್ನಡಕ್ಕೆ ಅನುವಾದಿಸಿದರು.
ಕಾಸರಗೋಡಿನ ಸಂಸದ ಕರುಣಾಕರನ್, ಇನ್ನೋರ್ವ ಸಂಸದ ರಾಜ ಗೋಪಾಲ್, ಸಿಪಿಐ ಜಿಲ್ಲಾ ಕಾರ್ಯದರ್ಶಿ ವಿ. ಕುಕ್ಯಾನ್, ಕಾಸರಗೋಡು ಜಿಲ್ಲಾ ಕಾರ್ಯದರ್ಶಿ ಸತೀಶ್ಚಂದ್ರನ್, ಮಾಜಿ ಶಾಸಕ ಸಿ.ಎಚ್. ಕುಂಞಂಬು, ಮುಖಂಡರಾದ ಕೆ. ಶಂಕರ್, ಜಿ.ಎನ್. ನಾಗರಾಜ್, ಎಸ್. ವರ ಲಕ್ಷ್ಮೀ, ಯು. ಬಸವರಾಜ್, ಮುನಿ ವೆಂಕಟಪ್ಪ, ಕೆ.ಎನ್. ಉಮೇಶ್, ಕೆ. ಯಾದವ ಶೆಟ್ಟಿ, ಬಾಲಕೃಷ್ಣ ಶೆಟ್ಟಿ (ಉಡುಪಿ), ಯಮುನಾ ಗಾಂವ್ಕರ್ (ಉತ್ತರ ಕನ್ನಡ), ಮುನೀರ್ ಕಾಟಿಪಳ್ಳ ಮೊದಲಾದವರು ಉಪಸ್ಥಿತರಿದ್ದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯದರ್ಶಿ ಮಂಡಳಿ ಸದಸ್ಯ ಸುನಿಲ್ ಕುಮಾರ್ ಬಜಾಲ್ ಸ್ವಾಗತಿಸಿ ಕಾರ್ಯಕ್ರಮ ನಿರ್ವಹಿಸಿದರು. ರಾಜ್ಯ ಕಾರ್ಯದರ್ಶಿ ಮಂಡಳಿ ಸದಸ್ಯ ವಸಂತ ಆಚಾರಿ ಅವರು ಪ್ರಸ್ತಾವನೆಗೈದರು.