Advertisement
”ಅನೇಕ ಒಳ್ಳೆಯ ಅವಕಾಶಗಳು ಸಿಕ್ಕವು, ಸಾಮಾನ್ಯ ಪುರಸಭೆ ಸದಸ್ಯನಾಗಿ ಮುಖ್ಯಮಂತ್ರಿ ಆಗುವ ಅವಕಾಶ ದೊರಕಿತು. ಆ ಕಾಲದಲ್ಲಿ ರಸ್ತೆಗಳು ಸರಿ ಇಲ್ಲದ ಕಾಲದಲ್ಲಿ ಅಟಲ್ ಬಿಹಾರಿ ವಾಜಪೇಯಿ ಅವರ ಜೊತೆ ಪ್ರವಾಸ ಮಾಡುವ ಸೌಭಾಗ್ಯ ದೊರಕಿತು. ಇಲ್ಲಿ ಇರುವ ಸದಸ್ಯರು ನಂಬುತ್ತೀರೋ ಇಲ್ಲವೋ ಗೊತ್ತಿಲ್ಲ.ನಾನು ಅನೇಕ ಕಡೆ ಭಾಷಣ ಆರಂಭಿಸಿದ ಬಳಿಕ ವಾಜಪೇಯಿ ಅವರು, ಅಡ್ವಾಣಿ, ಮುರಳಿ ಮನೋಹರ್ ಜೋಶಿ ಅವರು ಬರುತ್ತಿದ್ದರು” ಎಂದರು.
Related Articles
Advertisement
”ಇವತ್ತು ನಮಗೆಲ್ಲ ಆದರ್ಶ ಮಾನ್ಯ ಹೆಚ್.ಡಿ. ದೇವೇಗೌಡರು, ಸಣ್ಣ ವಿಚಾರವಲ್ಲ. ಇವತ್ತಿಗೂ ದೇಶದ, ರಾಜ್ಯದ ವಿಚಾರಗಳ ಕುರಿತು ಮಾರ್ಗದರ್ಶ ಮಾಡುತ್ತಾರೆ. ಇದಕ್ಕಿಂತ ಆದರ್ಶ ಬೇರೆ ಬೇಕಿಲ್ಲ . ಅವರನ್ನು ನೋಡಿ ಕಲಿಯಬೇಕಾದದ್ದು ಬಹಳಷ್ಟು ಇದೆ” ಎಂದರು.
”ನಾನು ಶಿಕಾರಿಪುರದ ಜನತೆಗೆ ಚಿರಋಣಿ, ಬದುಕಿನ ಕೊನೆಯುಸಿರು ಇರುವ ವರೆಗೆ ಅವರ ಸೇವೆ ಪ್ರಾಮಾಣಿಕವಾಗಿ ಮಾಡುತ್ತೇನೆ. ಬರುವಂತಹ ದಿನಗಳಲ್ಲಿ ರಾಜ್ಯದ ಉದ್ದಗಲಕ್ಕೆ ಓಡಾಡಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವ ಕೆಲಸ ಮಾಡುತ್ತೇನೆ ಎಂದರು. ಯಾರೂ ವಿಚಲಿತರಾಗುವ ಅಗತ್ಯವಿಲ್ಲ. ಒಂದು ದಿನವೂ ನನ್ನ ಸ್ವಂತಕ್ಕೆ ಬಳಸಿಕೊಳ್ಳುವುದಿಲ್ಲ ” ಎಂದು ವಿಪಕ್ಷಗಳಿಗೆ ಬಿಸಿ ಮುಟ್ಟಿಸಿದರು.
”ಮುಖ್ಯಮಂತ್ರಿಯಾಗಿ ಬಸವರಾಜ್ ಬೊಮ್ಮಾಯಿ ಅವರು ಮಾಡಿದ ಕೆಲಸಗಳು, ಒಬ್ಬ ಅಧ್ಯಕ್ಷರಾಗಿ ನೀವು (ವಿಶ್ವೇಶ್ವರ ಹೆಗಡೆ ಕಾಗೇರಿ) ಮಾಡಿದ ಕೆಲಸ ಅನುಸರಣೀಯ. ವಿಪಕ್ಷ ನಾಯಕನಾಗಿ ಸಿದ್ದರಾಮಯ್ಯ ಅವರ ಕೆಲಸ ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ” ಎಂದರು.
ಸಿಎಂ ಬಸವರಾಜ್ ಬೊಮ್ಮಾಯಿ ಅವರು ಮಾತನಾಡಿ, ”ವಿಧಾನಸೌಧ ಆಗುವುದರ ಹಿಂದಿರ ಹೋರಾಟ, ಉದ್ದೇಶ ಮತ್ತು ಶ್ರದ್ದೆಯಿಂದ ಕೂಡಿವೆ. ಸ್ವಾತಂತ್ರ್ಯ ಹೋರಾಟ, ಕರ್ನಾಟಕದ ಏಕೀಕರಣ ಮಹತ್ವದ ಘಟ್ಟ ಎಂದರು. ಮಧ್ಯರಾತ್ರಿ ಪಡೆದ ಸ್ವಾತಂತ್ರ್ಯ ವಿಶೇಷವಾಗಿ ಡಾ. ಬಿ.ಆರ್.ಅಂಬೇಡ್ಕರ್ ಅವರ ಕೊಡುಗೆ ದೊಡ್ಡದಿದೆ. ಸಂವಿಧಾನದ ಅಡಿಯಲ್ಲಿ ರಾಜ್ಯಗಳ ಸ್ಥಾಪನೆ ಚಳವಳಿಗಳು ಹೋರಾಟಗಳು ಮಹತ್ವದ್ದಾಗಿದೆ” ಎಂದರು.