Advertisement

ಮೀಸಲಿಗೆ ಆರೆಸ್ಸೆಸ್‌ ಮುಖಂಡ ವೈದ್ಯ ವಿರೋಧ

03:45 AM Jan 21, 2017 | Team Udayavani |

ಜೈಪುರ: ಮೀಸಲು ಮುಕ್ತ ಭಾರತಕ್ಕಾಗಿ ಆರ್‌ಎಸ್‌ಎಸ್‌ ಸಿದ್ಧಾಂತವಾದಿ ಮನಮೋಹನ್‌ ವೈದ್ಯ ಶುಕ್ರವಾರ ಕರೆ ನೀಡಿದ್ದಾರೆ. ಉತ್ತರಪ್ರದೇಶ ಚುನಾವಣೆಗೆ ಮುನ್ನ ಅವರು ನೀಡಿದ ಹೇಳಿಕೆ ಬಿಜೆಪಿ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅವರ ಹೇಳಿಕೆಯಿಂದ ಬಿಜೆಪಿ ದಲಿತ ವಿರೋಧಿ ಎಂದು ಸಾಬೀತಾಗಿದೆ ಎಂದು ಕಾಂಗ್ರೆಸ್‌, ಆಪ್‌, ಆರ್‌ಜೆಡಿ ಮೊದಲಾದ ವಿಪಕ್ಷಗಳು ಟೀಕಿಸಿವೆ.

Advertisement

ಜೈಪುರ ಸಾಹಿತ್ಯ ಉತ್ಸವದಲ್ಲಿ ಮಾತನಾಡಿದ ವೈದ್ಯ “ಮೀಸಲಾತಿ ನೀಡುವುದರಿಂದ ಜನರು ಸಮಾನ ಅವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇದು ದೇಶದಲ್ಲಿ ಪ್ರತ್ಯೇಕತೆ ಹೆಚ್ಚಿಸುತ್ತಿದೆ’ ಎಂದರು. “ಉದ್ಯೋಗ, ಶಿಕ್ಷಣದಲ್ಲಿ ಜಾತಿ ಆಧಾರಿತ ಮೀಸಲಾತಿ ಆದಷ್ಟು ಬೇಗ ಮುಕ್ತಾಯವಾಗಬೇಕು. ಎಲ್ಲರಿಗೂ ಸಮಾನ ಅವಕಾಶಗಳು ಸಿಗಬೇಕು’ ಎಂದು ಅಭಿಪ್ರಾಯಪಟ್ಟರು. “ಈ ವ್ಯವಸ್ಥೆಯ ಹೊರತಾಗಿ ಕೂಡ ಉದ್ಯೋಗ ಮತ್ತು ಶಿಕ್ಷಣದಲ್ಲಿ ಇನ್ನೂ ಹೆಚ್ಚಿನ ಅವಕಾಶವಿರಬೇಕು. ಇಲ್ಲದಿದ್ದರೆ ಇದು ಪ್ರತ್ಯೇಕತಾವಾದಕ್ಕೆ ಕಾರಣವಾಗುತ್ತದೆ’ ಎಂಬ ಅಂಬೇಡ್ಕರ್‌ರ ಹೇಳಿಕೆಯೊಂದನ್ನು ಉಲ್ಲೇಖೀಸಿ ಹೇಳಿದರು.

ಕಳೆದ ವರ್ಷ ಆರೆಸ್ಸೆಸ್‌ ಮುಖ್ಯಸ್ಥ ಮೋಹನ ಭಾಗವತ್‌  ಬಿಹಾರ ಚುನಾವಣೆಗೆ ಮುನ್ನ ಮೀಸಲು ವಿರೋಧಿ ಹೇಳಿಕೆ ನೀಡಿ ವಿವಾದ ಎಬ್ಬಿಸಿದ್ದರು. ನಂತರ ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತಿತ್ತು.

Advertisement

Udayavani is now on Telegram. Click here to join our channel and stay updated with the latest news.

Next