Advertisement

Artificial Reef; ಮೀನು ಅಭಿವೃದ್ಧಿಗಾಗಿ ಸಾಲು ಬಂಡೆ ಯೋಜನೆ

11:58 PM Mar 09, 2024 | Team Udayavani |

ಭಟ್ಕಳ: ಮೀನು ಸಂತತಿ ವೃದ್ಧಿಗೆ ಇದೇ ಪ್ರಥಮ ಬಾರಿಗೆ ಕೃತಕ ಬಂಡೆಗಳ ಸಾಲು ನಿರ್ಮಾಣ ಯೋಜನೆಗೆ ಶನಿವಾರ ಚಾಲನೆ ದೊರೆತಿದೆ.

Advertisement

ಈ ಹಿಂದೆ ಸಾಂಪ್ರದಾಯಿಕ ಬಂಡೆಗಳಿದ್ದಲ್ಲಿ ಮೀನುಗಳು ಮೊಟ್ಟಗಳನ್ನಿಟ್ಟು, ಮರಿಗಳನ್ನು ಮಾಡಿ ಸಂತತಿ ವೃದ್ಧಿಸುತ್ತಿತ್ತು. ಆದರೆ ಈಗ ಬಂಡೆಗಳು ಮಾಯವಾದಂತೆ ಮೀನು ಸಂತತಿಯೂ ಕ್ಷೀಣಿಸುತ್ತಾ ಬಂದಿದೆ. ಹೀಗಾಗಿ ಕೃತಕ ಬಂಡೆಗಳನ್ನು ಸಮುದ್ರದ ಆಳದಲ್ಲಿ ಸ್ಥಾಪಿಸಿ ಮೀನು ಸಂತತಿ ವೃದ್ಧಿಸಲು ಮೀನುಗಾರಿಕೆ ಇಲಾಖೆ ಈ ಯೋಜನೆ ಅನುಷ್ಠಾನಗೊಳಿಸಿದೆ.

ಐದು ವರ್ಷಗಳಿಂದ ಕೇರಳ ಮತ್ತು ತಮಿಳುನಾಡು ಸರಕಾರಗಳು ಪ್ರಾಯೋಗಿಕವಾಗಿ ಜಾರಿಗೊಳಿಸಿದ ಈ ಯೋಜನೆ ಉತ್ತಮ ಫಲ ನೀಡಿರುವ ಹಿನ್ನೆಲೆಯಲ್ಲಿ ರಾಜ್ಯದ ಮೀನುಗಾರಿಕೆ ಇಲಾಖೆ ಅಧಿಕಾರಿಗಳು ಅಲ್ಲಿಗೆ ಹೋಗಿ ಅಧ್ಯಯನ ಮಾಡಿ ಈ ಯೋಜನೆ ರೂಪಿಸಿದ್ದು, ದಕ್ಷಿಣಕನ್ನಡ, ಉಡುಪಿ ಹಾಗೂ ಉತ್ತರಕನ್ನಡದಲ್ಲಿ ಜಾರಿಗೆ ಬರಲಿದೆ.

ಪ್ರಾಯೋಗಿಕವಾಗಿ ಮೂರು ಜಿಲ್ಲೆಗಳಲ್ಲಿ ಒಟ್ಟು 56 ಬಂಡೆಗಳನ್ನು ಸ್ಥಾಪಿಸಲಾಗುತ್ತಿದ್ದು, ಒಟ್ಟು 17.45 ಕೋಟಿ ರೂ. ವೆಚ್ಚ ಅಂದಾಜಿಸಲಾಗಿದೆ.
ಸಿಮೆಂಟ್‌ನಿಂದ ತ್ರಿಕೋನಾಕೃತಿ, ಆಯತಾಕಾರ ಹಾಗೂ ಉರುಟು ಆಕಾರಗಳಲ್ಲಿ ಬಂಡೆಗಳನ್ನು ತಯಾರು ಮಾಡಿ ಸಮುದ್ರದಲ್ಲಿ ಸುಮಾರು ಐದು ನಾಟಿಕಲ್‌ ಮೈಲು ದೂರ (ಸಮುದ್ರದ 10-15 ಮೀಟರ್‌ ಆಳ) ಸ್ಥಾಪಿಸುವುದು ಸದ್ಯದ ಯೋಜನೆ. ಮೀನುಗಾರಿಕೆ ಬೋಟ್‌ ಹಾಗೂ ದೋಣಿಗಳಿಗೂ ಯಾವುದೇ ಹಾನಿ ಆಗದಂತೆ ನೋಡಿಕೊಳ್ಳುವ ಉದ್ದೇಶದಿಂದ ಆಳದಲ್ಲಿ ಸ್ಥಾಪಿಸಲಾಗುತ್ತಿದೆ. ಕೃತಕವಾಗಿ ಸ್ಥಾಪಿಸಲಾಗುವ ಈ ಬಂಡೆಗಳನ್ನು ಮುಡೇìಶ್ವರದಲ್ಲಿಯೇ ತಯಾರಿಸ ಲಾಗುತ್ತಿದೆ. ಒಂದೊಂದು ಬಂಡೆಯೂ ಸುಮಾರು 4-5 ಟನ್‌ ಭಾರ ಇರುತ್ತದೆ ಎನ್ನಲಾಗಿದೆ.

ಕಡಲಲ್ಲಿ ಈಜಿದ ಮೀನುಗಾರಿಕೆ ಸಚಿವ!
ಭಟ್ಕಳ: ಮೀನುಗಾರಿಕೆ ಸಚಿವ ಮಂಕಾಳ ವೈದ್ಯ ಅವರು ಶನಿವಾರ ಭಟ್ಕಳ ಸಮೀಪದ ಬೆಳಕೆ ಸಮುದ್ರ ತೀರದಲ್ಲಿ ಈಜಾಡಿ ಗಮನ ಸೆಳೆದರು. ಸಮುದ್ರ ತಳದಲ್ಲಿ ಕೃತಕ ಬಂಡೆಗಳನ್ನು ಅಳವಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಲು ಪ್ರವಾಸಿ ಬೋಟ್‌ನಲ್ಲಿ ತೆರಳಿದ್ದ ಅವರು, ಸಮುದ್ರಕ್ಕೆ ಧುಮುಕಿ ಶವಾಸನ ಮಾಡುವ ಮೂಲಕ ಗಮನಸೆಳೆದರು.

Advertisement

 

Advertisement

Udayavani is now on Telegram. Click here to join our channel and stay updated with the latest news.

Next