Advertisement

ಉಡುಪಿ; ಬೃಹತ್ ಹಿಂದೂ ಸಮಾಜೋತ್ಸವ, ಆಕರ್ಷಕ ಮೆರವಣಿಗೆಗೆ ಸಜ್ಜು

10:00 AM Nov 26, 2017 | Sharanya Alva |

ಉಡುಪಿ: ಉಡುಪಿಯಲ್ಲಿ ನಡೆಯುತ್ತಿರುವ ಧರ್ಮ ಸಂಸದ್ ಗೆ ಇಂದು ಸಂಜೆ ವಿಧ್ಯುಕ್ತವಾಗಿ ತೆರೆ ಬೀಳಲಿದೆ. ಬೃಹತ್ ಹಿಂದೂ ಸಮಾಜೋತ್ಸವಕ್ಕೆ ಕ್ಷಣಗಣನೆ ಆರಂಭವಾಗಿದೆ. ಎಂಜಿಎಂ ಕಾಲೇಜು ಮೈದಾನದಲ್ಲಿ ನಡೆಯಲಿರುವ ವಿರಾಟ್ ಹಿಂದೂ ಸಮಾಜೋತ್ಸವದಲ್ಲಿ ಲಕ್ಷಾಂತರ ಜನರು ಭಾಗವಹಿಸುವ ನಿರೀಕ್ಷೆ ಇದ್ದು, ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ.

Advertisement

ವಿಶ್ವಹಿಂದೂ ಪರಿಷದ್ ಪ್ರಾಂತ ಕಾರ್ಯಾಧ್ಯಕ್ಷ ಎಂಬಿ ಪುರಾಣಿಕ್ ಮತ್ತು ಜಿಲ್ಲಾಧ್ಯಕ್ಷ ವಿಲಾಸ ನಾಯಕ್ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ್ದಾರೆ.

ದ.ಕ., ಉಡುಪಿ, ಕಾಸರಗೋಡು ಜಿಲ್ಲೆಗಳ ಹಳ್ಳಿ ಹಳ್ಳಿಗಳಿಂದ ಜನರು ಭಾಗವಹಿಸಲಿದ್ದಾರೆ. ಸುಮಾರು ಒಂದು ಲಕ್ಷ ಜನರು ಸೇರುವ ನಿರೀಕ್ಷೆ
ಇದೆ. ಅಪರಾಹ್ನ 2.30ಕ್ಕೆ ಜೋಡುಕಟ್ಟೆಯಿಂದ ಆಕರ್ಷಕ ಮೆರವಣಿಗೆ ನಡೆಯಲಿದೆ. 3.45ರ ಒಳಗೆ ಎಂಜಿಎಂ ಮೈದಾನಕ್ಕೆ ಮೆರವಣಿಗೆ ಸೇರಲಿದೆ ಎಂದು ತಿಳಿಸಿದರು. ಜೋಡುಕಟ್ಟೆಗೆ ಬರುವಾಗಲೇ ಕಾಪು ಕಡೆಯಿಂದ, ಕುಂದಾ ಪುರ ಕಡೆಯಿಂದ, ಕಾರ್ಕಳ ಕಡೆ ಯಿಂದ ಬರುವವರಿಗೆ ಊಟದ ವ್ಯವಸ್ಥೆ ಮಾಡಲಾಗಿದೆ. ಅವರು ಅಲ್ಲಿ ಊಟ ಮಾಡಿ ಜೋಡುಕಟ್ಟೆಗೆ ಬಂದು ಸೇರಬೇಕು.

ಶೋಭಾಯಾತ್ರೆ
ಶೋಭಾಯಾತ್ರೆಯಲ್ಲಿ ಚೆಂಡೆ ಬಳಗ, ದೊಡ್ಡ ಬ್ಯಾನರ್‌, ವಿಹಿಂಪ ನಾಯಕರು, ಭಾರತಮಾತೆಯ ಚಿತ್ರ, 2,000 ಧ್ವಜಗಳನ್ನು ಹಿಡಿದ ಮಾತೆ ಯರು, 2,000 ಭಜನಾ ಕಲಾ ವಿದರು, 2,000 ಧ್ವಜಗಳನ್ನು ಹಿಡಿದ ಪುರುಷರು, ಕೇರಳದ ಚೆಂಡೆ, ವಾಲಗ, ಕಾರ್ಯಕರ್ತರು ಇರುತ್ತಾರೆ.

ಸಂಜೆ 4 ಗಂಟೆಗೆ ಹಿಂದೂ ಸಮಾಜೋತ್ಸವದ ಸಾರ್ವಜನಿಕ ಸಭೆ ನಡೆಯಲಿದ್ದು ಉತ್ತರ ಪ್ರದೇಶ ಮುಖ್ಯ ಮಂತ್ರಿ ಯೋಗಿ ಆದಿತ್ಯನಾಥ ಪಾಲ್ಗೊಳ್ಳುವ ಸಾಧ್ಯತೆ ಇದೆ. ಸಾಧು ಸಂತರು, ಪ್ರಮುಖರು ಪಾಲ್ಗೊಳ್ಳುವರು. ಬೆಳಗ್ಗೆ 10 ಗಂಟೆಗೆ ರೋಯಲ್‌ ಗಾರ್ಡನ್‌ ಮತ್ತು ಶ್ರೀಕೃಷ್ಣಮಠದ ರಾಜಾಂಗಣ ದಲ್ಲಿ ಏಕಕಾಲದಲ್ಲಿ ನಿರ್ಣಯ ಗೋಷ್ಠಿ ಮತ್ತು ಸಮಾಜ ಪ್ರಮುಖರ ಸಭೆ ಜರಗಲಿದೆ. 

Advertisement

ಪ್ರದರ್ಶಿನಿ ಇಂದು ಕೊನೆ
ಕಲ್ಸಂಕ ರೋಯಲ್‌ ಗಾರ್ಡನ್‌  ನಲ್ಲಿರುವ “ಹಿಂದೂ ವೈಭವ’ ಪ್ರದರ್ಶಿನಿಗೆ ಶನಿವಾರ ಭಾರೀ ಜನಸಂದಣಿ ಇರುವುದು ಕಂಡು 
ಬಂತು. ಅದಕ್ಕಾಗಿ ಸುದೀರ್ಘ‌ ಸರತಿ ಸಾಲು ಇತ್ತು. ರವಿವಾರ ಕೊನೆಯ ದಿನವಾಗಿದ್ದು ಬೆಳಗ್ಗೆ 9ರಿಂದ ರಾತ್ರಿ 9 ಗಂಟೆವರೆಗೆ ಇದು ತೆರೆದಿರುತ್ತದೆ.

Advertisement

Udayavani is now on Telegram. Click here to join our channel and stay updated with the latest news.

Next