ನವ ದೆಹಲಿ : ಭಾರತದಲ್ಲಿ ವಾಸಿಸುವ ಹಿಂದುಗಳು ಮತ್ತು ಮುಸ್ಲಿಮರ ಪೂರ್ವಜರು ಒಂದೇ ಆಗಿದ್ದಾರೆ ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್ ಎಸ್ ಎಸ್) ಮುಖ್ಯಸ್ಥ ಮೋಹನ್ ಜಿ. ಭಾಗವತ್ ಹೇಳಿದ್ದಾರೆ.
ಪುಣೆಯಲ್ಲಿ ಗ್ಲೋಬಲ್ ಸ್ಟ್ರಾಟೆಜಿಕ್ ಪಾಲಿಸಿ ಫೌಂಡೇಶನ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಪ್ರತಿಯೊಬ್ಬ ಭಾರತೀಯ ಪ್ರಜೆಯೂ ಹಿಂದೂ ಎಂದಿದ್ದಾರೆ. ದೇಶದ ಸಂವೇದನಾಶೀಲ ಮುಸ್ಲಿಂ ನಾಯಕರು ಮೂಲಭೂತವಾದಿಗಳ ವಿರುದ್ಧ ದೃಢವಾಗಿ ಎದ್ದು ನಿಲ್ಲಬೇಕು ಎಂದು ಕರೆ ನೀಡಿದ್ದಾರೆ.
ಇದನ್ನೂ ಓದಿ : ಯೋಗಿ ಕಣ್ಣಲ್ಲಿ ಲಂಕೆ ಕನಸು : 200ಕ್ಕೂ ಅಧಿಕ ಚಿತ್ರಮಂದಿರಗಳಲ್ಲಿ ರಿಲೀಸ್
ಭಾರತದಲ್ಲಿ ಅಲ್ಪ ಸಂಖ್ಯಾತರು ಯಾವುದೇ ಕಾರಣಕ್ಕೂ ಹಿಂಜರಿಯುವ ಅಗತ್ಯವಿಲ್ಲ. ಭಯ ಪಡುವ ಅಗತ್ಯವಿಲ್ಲ. ಹಿಂದೂಗಳು ಎಲ್ಲರನ್ನು ಸಮಾನವಾಗಿ ಕಾಣುವವರು. ಯಾರೊಂದಿಗೂ ದ್ವೇಷ ಕಟ್ಟಿಕೊಳ್ಳುವಂತವರಲ್ಲ. ‘ಹಿಂದೂ ಪದವು ಮಾತ್ರಭೂಮಿ, ಪೂರ್ವಜ ಮತ್ತು ಭಾರತೀಯ ಸಂಸ್ಕೃತಿಗೆ ಸಮನಾಗಿದೆ ಮತ್ತು ಇದು ಇತರರ ದೃಷ್ಟಿಕೋನಕ್ಕೆ ಅಗೌರವ ಅಲ್ಲ . ನಾವು ಮುಸ್ಲಿಂ ಪ್ರಾಬಲ್ಯದ ಬಗ್ಗೆ ಯೋಚಿಸಬೇಕಾಗಿಲ್ಲ. ಆದರೆ, ಭಾರತದ ಪ್ರಾಬಲ್ಯದ ಬಗ್ಗೆ ಖಂಡಿತವಾಗಿ ಯೋಚಿಸಬೇಕಾಗಿದೆ. ಭಾರತದ ಸರ್ವತೋಮುಖ ಅಭಿವೃದ್ಧಿಗಾಗಿ ಎಲ್ಲರು ಒಟ್ಟಾಗಿ ಶ್ರಮಿಸಬೇಕಾಗಿದೆ’ ಎಂದು ಅವರು ಹೇಳಿದ್ದಾರೆ.
ಭಾರತಕ್ಕೆ ಇಸ್ಲಾಂ ಎಂಬ ಪದವು ಆಕ್ರಮಣಕಾರರೊಂದಿಗೆ ಬಂದಿದ್ದರಿಂದ ಅದನ್ನು ನಾವು ಹಾಗೆಯೇ ಉಚ್ಛರಿಸಬೇಕಿದೆ. ಮುಸ್ಲೀಂ ನಾಯಕರು ಆ ಬಗ್ಗೆ ಅನಗತ್ಯ ಸಮಸ್ಯೆಗಳನ್ನು ವಿರೋಧಿಸಬೇಕಾಗಿದೆ. ದೇಶ ಒಗ್ಗಟ್ಟಾಗಬೇಕಿದೆ. ಉಗ್ರರ ವಿರುದ್ಧ ಎದ್ದು ನಿಲ್ಲಬೇಕು ಎಂದಿದ್ದಾರೆ.
ವಿಚಾರಗೋಷ್ಠಿಯೊಂದನ್ನು ಉದ್ದೇಶಿಸಿ ಮಾತನಾಡಿರುವ ಅವರು, ‘ಹಿಂದೂ ಎಂಬ ಪದವು ನಮ್ಮ ಮಾತೃಭೂಮಿ, ಸಂಸ್ಕೃತಿಯ ಶ್ರೀಮಂತ ಪರಂಪರೆಗೆ ಸಮಾನಾರ್ಥಕವಾಗಿದೆ. ಈ ಸಂದರ್ಭದಲ್ಲಿ ನಮಗೆ ಪ್ರತಿಯೊಬ್ಬ ಭಾರತೀಯನೂ ಒಬ್ಬ ಹಿಂದೂ, ಆತನ ಧಾರ್ಮಿಕ, ಭಾಷಿಕ ಮತ್ತು ಜನಾಂಗೀಯ ದೃಷ್ಟಿಕೋನವನ್ನು ಲೆಕ್ಕಿಸದೆ. ಭಾರತೀಯ ಸಂಸ್ಕೃತಿ ವೈವಿಧ್ಯಮಯ ದೃಷ್ಟಿಕೋನಗಳನ್ನು ಹೊಂದಿದೆ ಮತ್ತು ಇತರ ಧರ್ಮಗಳನ್ನು ಗೌರವಿಸುತ್ತದೆ’ ಎಂದು ಅವರು ಹೇಳಿದ್ದಾರೆ.
ಇದನ್ನೂ ಓದಿ : ಕೇರಳ ನಿಫಾ ಸೋಂಕು : ಬಾಲಕನ ಸಂಪರ್ಕಕ್ಕೆ ಬಂದವರ ವರದಿ ನೆಗೆಟಿವ್ : ಸಚಿವೆ ವೀಣಾ ಜಾರ್ಜ್