ಹೊಸದಿಲ್ಲಿ : ಕರ್ನಾಟಕದಲ್ಲಿನ ಕಾಂಗ್ರೆಸ್ – ಜೆಡಿಎಸ್ ಮೈತ್ರಿ ಸರಕಾರದ ಉಳಿವಿಗೆ ಬೆದರಿಕೆಯಾಗಿರುವ ತಾಜಾ ವಿದ್ಯಮಾನಗಳ ಬಗ್ಗೆ ವಿರೋಧ ಪಕ್ಷ ಕಾಂಗ್ರೆಸ್ ಅಕ್ರೋಷಿತವಾಗಿ ಭಾರೀ ಗಲಾಟೆ ನಡೆಸಿದ ಕಾರಣ ರಾಜ್ಯ ಸಭೆ ಕಲಾಪವನ್ನು ಒಂದು ತಾಸಿನ ಮಟ್ಟಿಗೆ, ಮಧ್ಯಾಹ್ನದ ವರೆಗೆ, ಮುಂದೂಡಲಾದ ಪ್ರಸಂಗ ಇಂದು ಮಂಗಳವಾರ ನಡೆದಿದೆ.
ಕರ್ನಾಕದಲ್ಲಿನ ಕಾಂಗ್ರೆಸ್ – ಜೆಡಿಎಸ್ ಸರಕಾರದಲ್ಲಿ ಬಿಜೆಪಿಯು ಬಂಡಾಯವನ್ನು ಪ್ರಚೋದಿಸುತ್ತಿದೆ ಎಂದು ಆರೋಪಿಸಿ ಕಾಂಗ್ರೆಸ್ ಸದಸ್ಯರು ರಾಜ್ಯಸಭೆ ಸದನದಲ್ಲಿ ಜಮಾಯಿಸಿ ಪ್ರತಿಭಟನೆ ನಡೆಸಿ ಆಳುವ ಬಿಜೆಪಿ ವಿರುದ್ಧ ಘೋಷಣೆ ಕೂಗಿದರು.
ಒಂದು ವರ್ಷವನ್ನಷ್ಟೇ ಪೂರೈಸಿರುವ ಕರ್ನಾಟಕದಲ್ಲಿನ ಕಾಂಗ್ರೆಸ್ – ಬಿಜೆಪಿ ಮೈತ್ರಿ ಸರಕಾರ ಪ್ರಕೃತ ಬಂಡುಕೋರ ಶಾಸಕರ ರಾಜೀನಾಮೆ ಪ್ರಹಸನದಿಂದ ಕುಸಿಯುವ ಹಂತ ತಲುಪಿದೆ.
ಓರ್ವ ನಾಮ ನಿರ್ದೇಶಿತ ಶಾಸಕ ಸಹಿತ ಒಟ್ಟು 225 ಸದಸ್ಯ ಬಲ ಹೊಂದಿರುವ ಕರ್ನಾಟಕ ವಿಧಾನಸಭೆಯಲ್ಲಿ ಬಹುಮತಕ್ಕೆ 113 ಸ್ಥಾನಗಳು ಬೇಕಿವೆ.