Advertisement

ನಾಲ್ಕು ವರ್ಷ ಸುವರ್ಣಸೌಧ ನಿರ್ವಹಣೆಗೆ 9.95 ಕೋಟಿ ವೆಚ್ಚ!

06:20 AM Nov 21, 2017 | |

ಬೆಳಗಾವಿ: ಸುಮಾರು 500 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಸುವರ್ಣಸೌಧ ಕಟ್ಟಡ ಹಾಗೂ ಉದ್ಯಾನಗಳ ನಿರ್ವಹಣೆಗಾಗಿ ನಾಲ್ಕು ವರ್ಷಗಳಲ್ಲಿ ವೆಚ್ಚ ಮಾಡಿರುವ ಮೊತ್ತ 9.95 ಕೋಟಿ ರೂ.

Advertisement

ಹೌದು, ಆರ್‌ಟಿಐ ಕಾರ್ಯಕರ್ತ ಭೀಮಪ್ಪಗಡಾದ ಸುವರ್ಣಸೌಧ ನಿರ್ವಹಣೆ ವೆಚ್ಚದ ಕುರಿತು ವಿವರ ಪಡೆದಿದ್ದು, ಅದರಲ್ಲಿ 2017 ಏಪ್ರಿಲ್‌ವರೆಗೆ ಸುವರ್ಣಸೌಧ ಕಟ್ಟಡ ಹಾಗೂ ಉದ್ಯಾನ ನಿರ್ವಹಣೆಗೆ 4.62 ಕೋಟಿ ರೂ. ಹಾಗೂ ವಿದ್ಯುತ್‌ ಬಿಲ್‌ಗಾಗಿ 3.38 ಕೋಟಿ ರೂ. ವೆಚ್ಚ ಮಾಡಲಾಗಿದೆ ಎಂದು ತಿಳಿಸಲಾಗಿದೆ.

ತೆರಿಗೆ ಪೋಲು: ಸುವರ್ಣಸೌಧಕ್ಕೆ ಬಳಕೆ ಮಾಡಿರುವ ವಿದ್ಯುತ್‌ ಸಲುವಾಗಿ ಹೆಸ್ಕಾಂಗೆ 3,38,68,929 ರೂ. ಪಾವತಿಸಲಾಗಿದೆ. 2017 ಜನವರಿ ತಿಂಗಳಿನಲ್ಲಿ ಅತ್ಯಂತ ಹೆಚ್ಚು 53,36,732 ರೂ. ಹಾಗೂ ಫೆಬ್ರವರಿಯಲ್ಲಿ ಅತಿ
ಕಡಿಮೆ 92 ಸಾವಿರ ರೂ. ಲೋಕೋಪಯೋಗಿ ಇಲಾಖೆ ಯಿಂದ ಪಾವತಿಸಲಾಗಿದೆ. ಲೋಕೋಪಯೋಗಿ ಇಲಾಖೆ ವಿದ್ಯುತ್‌ ನಿರ್ವಹಣೆಗಾಗಿಯೇ ಪ್ರತ್ಯೇಕ ಶಾಖೆ ಪ್ರಾರಂಭಿಸಿದೆ. ಅಭಿವೃದ್ಧಿಯ ಹೆಸರಿನಲ್ಲಿ ಸಾರ್ವಜನಿಕರ ತೆರಿಗೆ ಹಣವನ್ನು ಜನಪ್ರತಿನಿಧಿಗಳು ಅಧಿಕಾರಿಗಳು ಸೇರಿ ಪೋಲು ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.

2013-14ರಲ್ಲಿ 169.10 ಲಕ್ಷ ರೂ., 2014- 15ರಲ್ಲಿ 149.85 ಲಕ್ಷ ರೂ., 2015-16ರಲ್ಲಿ 143.32 ಲಕ್ಷ ರೂ. ನೀಡಲಾಗಿದೆ. 2016-17ನೇ ಸಾಲಿನ ಮಾಹಿತಿ ಏಪ್ರಿಲ್‌ವರೆಗೆ ಮಾತ್ರ ನೀಡಿದ್ದು, ಸಂಪೂರ್ಣ ಲಭ್ಯವಿಲ್ಲ ಎಂದು
ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ತಿಳಿಸಿರುವುದಾಗಿ ಹೇಳಿದ್ದಾರೆ.

10 ಕೋಟಿ ವೆಚ್ಚ ಆಕ್ಷೇಪಿಸಿ
ಸಲ್ಲಿಸಿದ್ದ ಪಿಐಎಲ್‌ ವಾಪಸ್‌
ಬೆಂಗಳೂರು
: ವಿಧಾನಸೌಧ ವಜ್ರ ಮಹೋತ್ಸವ ಆಚರಣೆಗೆ 10 ಕೋಟಿ ರೂ. ವ್ಯಯಿಸುತ್ತಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಸಾರ್ವ ಜನಿಕ ಹಿತಾಸಕ್ತಿ ಅರ್ಜಿಯನ್ನು ಅರ್ಜಿದಾರರು ಸೋಮವಾರ ಹಿಂಪಡೆದಿದ್ದಾರೆ. ವಕೀಲ
ಎಸ್‌.ಎನ್‌.ರವೀಂದ್ರ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಕೈಗೆತ್ತಿಕೊಂಡ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಎಚ್‌.ಜಿ.ರಮೇಶ್‌ ಹಾಗೂ ನ್ಯಾಯಮೂರ್ತಿ ಪಿ.ಎಸ್‌.ದಿನೇಶ್‌ಕುಮಾರ್‌ ಇದ್ದ ವಿಭಾಗೀಯ ಪೀಠ, “ಅರ್ಜಿ 
ಯಲ್ಲಿ ವಜ್ರಮಹೋತ್ಸವಕ್ಕೆ ಸಾರ್ವಜನಿಕ ತೆರಿಗೆ ಖರ್ಚು ಮಾಡುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಲಾಗಿದೆ. ಆದರೆ, ಅರ್ಜಿದಾರರು ಮನವಿಯಲ್ಲಿ ಸರಿಯಾದ ಅಂಶಗಳನ್ನು ಉಲ್ಲೇಖೀಸಿಲ್ಲ. ಹೀಗಾಗಿ ಈ ಅರ್ಜಿಯನ್ನು ವಜಾಗೊಳಿಸಲಾಗುತ್ತದೆ. ಅಗತ್ಯವಿದ್ದರೆ ಅರ್ಜಿದಾರರು ಮತ್ತೂಮ್ಮೆ ಸೂಕ್ತ ರೀತಿಯಲ್ಲಿ ಅರ್ಜಿ ಸಲ್ಲಿಸಬಹುದು’ ಎಂದು ಮೌಖೀಕ ಸಲಹೆ ನೀಡಿತು.

Advertisement

2016-17ನೇ ಸಾಲಿಗೆ ನಿರ್ವಹಿಸಿದ ಕಾಮಗಾರಿಗಳ ಬಿಲ್‌ಗ‌ಳು ಇನ್ನೂ ಸ್ವಿಕೃತಿಯಾಗಿಲ್ಲ ಎಂದು ಇಲಾಖೆ
ತಿಳಿಸಿದೆ. ಆದರೆ, ಆ ಕಾಮಗಾರಿ ಗುತ್ತಿಗೆ ಪಡೆಯುವಲ್ಲಿ ಕೆಲವೇ ಪ್ರಭಾವಿ ಗುತ್ತಿಗೆದಾರರು ಸರ್ಕಾರದ ಮೇಲೆ ಒತ್ತಡ ಹೇರಿದ್ದಾರೆ. ಜತೆಗೆ ಕಾಮಗಾರಿ ವೆಚ್ಚದಲ್ಲಿ ಸಾಕಷ್ಟು ಹಣ ಪೋಲಾಗಿದೆ. 

– ಭೀಮಪ್ಪ ಗಡಾದ, ಆರ್‌ಟಿಐ ಕಾರ್ಯಕರ್ತ

Advertisement

Udayavani is now on Telegram. Click here to join our channel and stay updated with the latest news.

Next