Advertisement

ವಿಮಾನ ಪ್ರಯಾಣಿಕರಿಂದ 8 ಲಕ್ಷ ರೂ. ಅಮೆರಿಕನ್‌ ಕರೆನ್ಸಿ ವಶ

12:21 PM Feb 05, 2018 | Team Udayavani |

ಚೆನ್ನೈ : ಕೊಲಂಬೋಗೆ ಹಾರಲು ಸಜ್ಜಾಗಿದ್ದ ಇಬ್ಬರು ವಿಮಾನ ಪ್ರಯಾಣಿಕರಿಂದ ಕಸ್ಟಮ್ಸ್‌ ಅಧಿಕಾರಿಗಳು ಎಂಟು ಲಕ್ಷ ರೂ. ಮೌಲ್ಯದ ಅಮೆರಿಕನ್‌ ಡಾಲರ್‌ಗಳನ್ನು ವಶಪಡಿಸಿಕೊಂಡಿದ್ದಾರೆ. 

Advertisement

ಈ ಅಕ್ರಮ ಕರೆನ್ಸಿಯನ್ನು ಆರೋಪಿ ವಿಮಾನ ಪ್ರಯಾಣಿಕರು ತಮ್ಮ ಬೆಲ್ಟ್‌ಗಳಲ್ಲಿ ಅಡಗಿಸಿಟ್ಟಿದ್ದರು.

ಈ ಬಗ್ಗೆ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ಆರೋಪಿ ಪ್ರಯಾಣಿಕ ದ್ವಯರನ್ನು  ವಿಮಾನ ನಿಲ್ದಾಣದಲ್ಲಿ ತಪಾಸಣೆಗೊಳಪಡಿಸಿ ಅಕ್ರಮ ಕರೆನ್ಸಿಯನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡರು. 

ಇಬ್ಬರೂ ಆರೋಪಿಗಳನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದಾರೆ. 

Advertisement

Udayavani is now on Telegram. Click here to join our channel and stay updated with the latest news.

Next