Advertisement

ಕಲಾನಿಧಿ ಮಾರನ್‌ ಸಂಸ್ಥೆಗೆ 793 ಕೋಟಿ ಸಂದಾಯ?

06:45 AM Nov 08, 2017 | Team Udayavani |

ಸ್ಯಾನ್‌ಫ್ರಾನ್ಸಿಸ್ಕೋ/ನವದೆಹಲಿ: ಏರ್‌ಸೆಲ್‌-ಮ್ಯಾಕ್ಸಿಸ್‌ ಡೀಲ್‌ ಪ್ರಕರಣದ ತನಿಖೆ ಸಿಬಿಐಗೆ ಹಸ್ತಾಂತರವಾಗುತ್ತಿದ್ದಂತೆಯೇ ಉದ್ಯಮಿ ಕಲಾನಿಧಿ ಮಾರನ್‌ರ ಸನ್‌ ಸಮೂಹ ಸಂಸ್ಥೆಗೆ 793 ಕೋಟಿ ರೂ.ಸಂದಾಯವಾಗುವುದರಲ್ಲಿತ್ತು. ಈ ಮಹತ್ವದ ಅಂಶ ಪ್ಯಾರಡೈಸ್‌ ಪೇಪರ್ಸ್‌ನಲ್ಲಿ ಉಲ್ಲೇಖವಾಗಿದೆ. ಈ ಬಗ್ಗೆ “ದ ಇಂಡಿಯನ್‌ ಎಕ್ಸ್‌ಪ್ರೆಸ್‌’ ವರದಿ ಮಾಡಿದೆ. ಯುಪಿಎ ಸರ್ಕಾರದಲ್ಲಿ ದೂರಸಂಪರ್ಕ ಸಚಿವರಾಗಿದ್ದ ದಯಾನಿಧಿ ಮಾರನ್‌ರ ಸಹೋದರ ಕಲಾನಿಧಿ ಮಾರನ್‌ರ ಕಂಪನಿಯಲ್ಲಿ ಶೇ.20ರಷ್ಟು  ಷೇರುಗಳ ಖರೀದಿಗೆ ಆ್ಯಸ್ಟ್ರೋ ಎಂಬ ಕಂಪನಿಗೆ ಹಣ ಸಂದಾಯ ಮಾಡಲಾಗಿತ್ತು ಎಂಬ ಅಂಶ ಬೆಳಕಿಗೆ ಬಂದಿದೆ. ಈ ಮೂಲಕ ಆಸ್ಟ್ರೋ ಕಂಪನಿಗೆ ಸಂಬಂಧಿಸಿದ ಮತ್ತೂಂದು ದೂರಸಂಪರ್ಕ ಕಂಪನಿ ಏರ್‌ಸೆಲ್‌ ಟೆಲೆವೆಂಚರ್ಸ್‌ ಅನ್ನು ಖರೀದಿಸುವ ಪ್ರಯತ್ನ ನಡೆಸಲಾಗಿತ್ತು ಎಂದು ಹೇಳಲಾಗಿದೆ.

Advertisement

ಸಿಬಿಐ ದಾಖಲಿಸಿಕೊಂಡ ಎಫ್ಐಆರ್‌ ಪ್ರಕಾರ ಟಿ.ಆನಂದ ಕೃಷ್ಣನ್‌ ಎಂಬುವರೇ ಮ್ಯಾಕ್ಸಿಸ್‌ ಕಮ್ಯುನಿಕೇಷನ್‌, ಆಸ್ಟ್ರೋ ಆಲ್‌ ಏಷ್ಯಾ ನೆಟ್‌ವರ್ಕ್‌ನ ಪ್ರವರ್ತಕರು. 2007ರಲ್ಲಿ ಸಿಬಿಐ ತನ್ನ ಎಫ್ಐಆರ್‌ನಲ್ಲಿ ಆರೋಪಿಸಿದಂತೆ ಸೈನ್‌ ಡೈರೆಕ್ಟ್‌ನಲ್ಲಿ ಆಸ್ಟ್ರೋ ಓವರ್‌ಸೀಸ್‌ ಲಿಮಿಟೆಡ್‌ (ಎಒಎಲ್‌) ಎಂಬ ಹೆಸರಿನಲ್ಲಿ ಬರ್ಮುಡಾದಲ್ಲಿ ಆರಂಭಿಸಲಾಗಿರುವ ಕಂಪನಿ ಮೂಲಕ 1,079 ಕೋಟಿ ರೂ. ಹೂಡಿಕೆ ಮಾಡಿರುವುದು ಕ್ರಮಬದ್ಧವಾಗಿಲ್ಲ ಎಂದು ಪ್ರತಿಪಾದಿಸಿತ್ತು.

ಗಮನಾರ್ಹ ಅಂಶವೆಂದರೆ ಸುದ್ದಿವಾಹಿನಿಯೊಂದು ಸನ್‌ ನೆಟ್‌ವರ್ಕ್‌ನ ಎಫ್ಎಂ ರೇಡಿಯೋ ವಹಿವಾಟಿನಲ್ಲಿ ಶೇ.1.09ರಷ್ಟು ಪಾಲುದಾರಿಕೆ ಹೊಂದಿರುವ ವಿಚಾರವೂ ಪೇಪರ್ಸ್‌ನಲ್ಲಿ ಉಲ್ಲೇಖವಾಗಿದೆ ಎಂದು ವರದಿಯಾಗಿದೆ. ಮತ್ತೂಂದು ಮಹತ್ವದ ಬೆಳವಣಿಗೆಯೊಂದರಲ್ಲಿ ನವದೆಹಲಿ ಮೂಲದ ಮಾಧ್ಯಮ ಸಂಸ್ಥೆ ಕೂಡ ಬರ್ಮುಡಾದಲ್ಲಿ ಹೂಡಿಕೆ ಮಾಡಿದ ಬಗ್ಗೆ ಪ್ಯಾರಡೈಸ್‌ ಪೇಪರ್ಸ್‌ಗಳಲ್ಲಿ ಉಲ್ಲೇಖಗೊಂಡಿದೆ. ಅಲ್ಲಿ ಹೂಡಿಕೆ ಮಾಡಿದ ಬಳಿಕ ಅದು, 7 ಕೋಟಿ ರೂ. ನಷ್ಟ ತೋರಿಸಿದೆ ಎಂದು ವರದಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next