Advertisement

77 ಲಕ್ಷ ರೂ. ಮದ್ಯ ವಶ

02:37 AM Mar 28, 2019 | Team Udayavani |

ಮಂಗಳೂರು: ಚುನಾವಣ ಪ್ರಕ್ರಿಯೆ ಆರಂಭವಾದ ದಿನದಿಂದ ನಾಮಪತ್ರಗಳನ್ನು ಸಲ್ಲಿಕೆ ಕೊನೆಯ ದಿನದ ವರೆಗೆ ಜಿಲ್ಲೆಯಲ್ಲಿ ನೀತಿಸಂಹಿತೆ ಉಲ್ಲಂಘನೆಯ ವಿವಿಧ ಪ್ರಕರಣಗಳು ವರದಿಯಾಗಿದೆ.

Advertisement

8,73,000 ನಗದನ್ನು ಮುಟ್ಟುಗೋಲು ಹಾಕಿ ಪರಿಶೀಲಿಸಿ ಸಂಬಂಧಪಟ್ಟವರಿಗೆ ಮರಳಿಸಲಾಗಿದೆ. 77.77 ಲಕ್ಷ ರೂ. ಮೌಲ್ಯದ 53,805.52 ಲೀ. ಮದ್ಯ ವಶಪಡಿಸಲಾಗಿದ್ದು, 73 ಲಕ್ಷ ರೂ. ಮೌಲ್ಯದ 1 ಸ್ಕೂಟರ್‌, 2 ಲಾರಿ, 220 ಭಿತ್ತಿಪತ್ರ, 2 ಮಾರುತಿ ಕಾರು, 1 ಟ್ರಕ್‌, 1 ಟ್ಯಾಂಕರ್‌ ಮುಟ್ಟುಗೋಲು ಹಾಕಲಾಗಿದೆ. ಅಬಕಾರಿ ಕಾನೂನು ಉಲ್ಲಂಘನೆಯ 266 ಪ್ರಕರಣ ದಾಖಲಿಸಲಾಗಿದ್ದು, ಖರ್ಚು ವೆಚ್ಚ ಸಂಬಂಧಿಸಿದ ದೂರಿನ ಆಧಾರದಲ್ಲಿ 1 ಎಫ್‌ಐಆರ್‌ ದಾಖಲಿಸಲಾಗಿದೆ.

ಜಿಲ್ಲೆಯಲ್ಲಿ ನೀಡಲಾದ 11,631 ಆಯುಧ ಪರವಾನಿಗೆಗಳ ಪೈಕಿ 11,551 ಆಯುಧಗಳನ್ನು ಸಂಬಂಧಪಟ್ಟವರು ಆಯಾಯ ಠಾಣೆಯಲ್ಲಿ ಠೇವಣಿ ಇರಿಸಿದ್ದಾರೆ. 9 ಆಯುಧಗಳಿಗೆ ವಿನಾಯಿತಿ ನೀಡಲಾಗಿದೆ. 1950 (ಟೋಲ್‌ ಫ್ರೀ) ನಂಬರಿನ ಸಹಾಯವಾಣಿಯಲ್ಲಿ ಈವರೆಗೆ 2,062 ಕರೆಗಳನ್ನು ಸ್ವೀಕರಿಸಲಾಗಿದೆ. 1,942 ಮಾಹಿತಿ ಕರೆಯಾಗಿದ್ದು, 120 ಕರೆಗಳ ದೂರು ದಾಖಲಿಸಲಾಗಿದೆ. ಸಿವಿಜಿಲ್‌ ಅಪ್ಲಿಕೇಶನ್‌ನಲ್ಲಿ ಈವರೆಗೆ 23 ದೂರುಗಳು ದಾಖಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next