Advertisement

ಚಿನ್ನ , ಬೆಳ್ಳಿ ಸಹಿತ 7 ಲ. ರೂ.ಮೌಲ್ಯದ ಸೊತ್ತು ಕಳವು

01:05 AM Jul 10, 2017 | Harsha Rao |

ಕುಂಬಳೆ: ಶಿರಿಯ ಸೀರೆ ಶಂಕರನಾರಾಯಣ ದೇವಸ್ಥಾನದಿಂದ 7 ಲಕ್ಷ ರೂ.ಅಂದಾಜು ಮೌಲ್ಯದ ಸೊತ್ತು ಕಳವಾಗಿದೆ. ಶನಿವಾರ ರಾತ್ರಿಯಿಂದ ರವಿವಾರ ಮುಂಜಾನೆ ಮಧ್ಯೆ ಕಳ್ಳರು ದೇವಸ್ಥಾನದೊಳಗೆ ನುಗ್ಗಿ ಬೆಳ್ಳಿ, ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದ್ದಾರೆ. ಗರ್ಭಗುಡಿಯಲ್ಲಿದ್ದ ಬೆಳ್ಳಿ ಪೀಠ, ಪ್ರಭಾವಳಿ, ತ್ರಿಶೂಲ, ಗೋಲಕ್‌, ನಾಗರಹೆಡೆ, ಚಿನ್ನದಿಂದ ತಯಾರಿಸಿದ ಕಣ್ಣು, ನಾಮ, ಮುಖವಾಡ, ತೀರ್ಥ ಮಂಟಪದಲ್ಲಿದ್ದ ಬೆಳ್ಳಿಯ ತೀರ್ಥ ಬಟ್ಟಲು, ಕವಳಿಗೆ ಮುಖವಾಡ ಮೊದಲಾದ ಸೊತ್ತುಗಳನ್ನು ದೋಚಿದ್ದಾರೆ. ಕ್ಷೇತ್ರದೊಳಗಿದ್ದ ಮೂರು ಕಾಣಿಕೆ ಹುಂಡಿಗಳಿಂದ ಹಣ ತೆಗೆದು ಹುಂಡಿ ಹಾಗೂ ಪ್ರಭಾವಳಿ ಅಳವಡಿಸಿದ ಮರದ ಪೀಠವನ್ನು ಹೊರಾಂಗಣದಲ್ಲಿ ಬಿಟ್ಟುಹೋಗಿದ್ದಾರೆ. . ಗೋಪುರದ ಉತ್ತರ ಭಾಗದ ಬಾಗಿಲು ಮುರಿದು ಕಳ್ಳರು ನುಗ್ಗಿದ್ದಾರೆ. ಬಳಿಕ ಗರ್ಭಗುಡಿಯ ಬಾಗಿಲು ಮುರಿದು ಈ ಎಲ್ಲಾ ಸೊತ್ತುಗಳನ್ನು ಕಳವು ನಡೆಸಿದ್ದಾರೆ. ಗೋಪುರ ಹಾಗೂ ಗರ್ಭಗುಡಿಗೆ ಮರದ ಬಾಗಿಲಿನ ಜೊತೆಗೆ ಕಬ್ಬಿಣದ ಸರಳಿನ ಬಾಗಿಲುಗಳಿದ್ದು ಅವುಗಳನ್ನು ಮುರಿದು ಕಳ್ಳರು ಈ ಕೃತ್ಯ ನಡೆಸಿದ್ದಾರೆ. ಇದೇ ವೇಳೆ ಗರ್ಭಗುಡಿಯೊಳಗೆ ಪಂಚಲೋಹದಿಂದ ತಯಾರಿಸಿದ ಉತ್ಸವಮೂರ್ತಿಯಿದ್ದು ಅದನ್ನು ಕಳವುಗೈಯ್ಯಲು ಸಾಧ್ಯವಾಗಿಲ್ಲ.

Advertisement

ರವಿವಾರ ಮುಂಜಾನೆ ಪೂಜೆಗಾಗಿ ಅರ್ಚಕ ನವೀನ್‌ ಹೆಬ್ಟಾರ್‌ ಅವರು ದೇಗುಲಕ್ಕೆ ಪ್ರವೇಶಿಸಿದಾಗ ಕಳವು ನಡೆದಿರುವುದು ತಿಳಿಯಿತು. ವಿಷಯ ತಿಳಿದುದೇಗುಲಕ್ಕೆ ಬಂಧ ಆಡಳಿತ ಮೊಕ್ತೇಸರ ನ್ಯಾಯವಾದಿ ವಿ.ಬಾಲಕೃಷ್ಣ ಶೆಟ್ಟಿ ಅವರು ಕುಂಬಳೆ ಪೊಲೀಸರಿಗೆ ದೂರು ನೀಡಿದರು. ಸಿ.ಐ. ವಿ.ವಿ. ಮನೋಜ್‌ ನೇತೃತ್ವದಲ್ಲಿ ಪೊಲೀಸರದೇಗುಲಕ್ಕೆ ಆಗಮಿಸಿ ಪ್ರಾಥಮಿಕ ತನಿಖೆ ನಡೆಸಿದ್ದಾರೆ. 

ಬಳಿಕ ಬೆರಳಿನ ಗುರುತು ತಜ್ಞರು ಬಂದು  ಪರಿಶೀಲನೆ ನಡೆಸಿದರು. ಕಳವು ಮಾಹಿತಿ ತಿಳಿದು ಕೊಂಡೆವೂರು ಶ್ರೀ ಯೋಗಾನಂದ ಸರಸ್ವತಿ ಸ್ವಾಮೀಜಿ ಹಾಗೂ ನೂರಾರು ಭಕ್ತರು ದೇಗುಲಕ್ಕೆ ಭೇಟಿ ನೀಡಿದರು.

ಅರ್ಚಕ, ಸಿಬಂದಿ ದೇಗುಲದಲ್ಲಿದ್ದರು
ಶನಿವಾರ ರಾತ್ರಿ ವಾರದ ಭಜನೆ ಬಳಿಕ ದೇಗುಲದ ಬಾಗಿಲು ಮುಚ್ಚಲಾ ಗಿತ್ತು.ದೇಗುಲದ ಹೊರಾಂಗಣದ ಗೋಪುರದಲ್ಲಿರುವ ಕೊಠಡಿಯಲ್ಲಿ ಅರ್ಚಕ ನವೀನ್‌ ಹೆಬ್ಟಾರ್‌ ಹಾಗೂ ಕ್ಲಾರ್ಕ್‌ ಅಶೋಕ ಅವರು ನಿದ್ರಿಸಿದ್ದರು. ಆದರೆದೇಗುಲದೊಳಗೆ ಕಳ್ಳರು ಪ್ರವೇಶಿಸಿ ಸೊತ್ತುಗಳನ್ನು ದೋಚಿರುವುದು ಅವರ ಗಮನಕ್ಕೆ ಬರಲೇ ಇಲ್ಲ. ಶನಿವಾರ ರಾತ್ರಿ ಮಳೆ ಸುರಿಯುತ್ತಿತ್ತು.  ಹಾಗಾಗಿ ಬಹುಷಃ ಕಳ್ಲವು ನಡೆದಿರುವುದು ದೇಗುಲದಲ್ಲಿದ್ದವರಿಗಾಗಲೀ, ಪರಿಸರದ ಜನರಿಗಾಗಲೀ ಗೊತ್ತಾಗದಿರುವ ಸಾಧ್ಯತೆ ಇದೆ.

ದೇಗುಲದಲ್ಲಿ ಕಾವಲುಗಾರನನ್ನು ನೇಮಿಸಿರಲಿಲ್ಲ.  ಸಿ.ಸಿ.ಕೆಮರಾ ವ್ಯವಸ್ಥೆ ಅಳವಡಿಸಿಲ್ಲ. ಇದನ್ನೆಲ್ಲ ತಿಳಿದೇ ಕಳ್ಳರು ಭಾರೀ ಸಿದ್ಧತೆಗಳೊಂದಿಗೆ ದೇಗುಲಕ್ಕೆ ನುಗ್ಗಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ. 

Advertisement
Advertisement

Udayavani is now on Telegram. Click here to join our channel and stay updated with the latest news.

Next