Advertisement

IT ದಾಳಿ; ಟಾಯ್ಲೆಟ್ ನಲ್ಲಿ 7 ಕೋಟಿ ನಗದು, 3 ಕೆಜಿ ಚಿನ್ನ ಪತ್ತೆ!

02:20 PM Oct 07, 2017 | Sharanya Alva |

ನವದೆಹಲಿ: ಪ್ರತಿಷ್ಠಿತ ಜೈ ಭಾರತ್ ಮಾರುತಿ ಗ್ರೂಪ್ ಆಫ್ ಕಂಪನಿಗಳ ಮೇಲೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶನಿವಾರ ಏಕಕಾಲದಲ್ಲಿ ದಾಳಿ ನಡೆಸಿ ಅಪಾರ ಪ್ರಮಾಣದ ನಗದು ಮತ್ತು ಚಿನ್ನಾಭರಣಗಳನ್ನು ವಶಪಡಿಸಿಕೊಂಡಿರುವುದಾಗಿ ಖಾಸಗಿ ಟಿವಿ ಚಾನೆಲ್ ವರದಿ ಮಾಡಿದೆ.

Advertisement

ದೆಹಲಿ ಹಾಗೂ ಎಸಿಆರ್ ಪ್ರದೇಶಗಳಲ್ಲಿನ ಸುಮಾರು 50 ಕಡೆಗಳಲ್ಲಿ ಗುರುವಾರ ದಾಳಿ ನಡೆಸಿದ್ದ ಅಧಿಕಾರಿಗಳು ಶನಿವಾರದವರೆಗೂ ಶೋಧ ಕಾರ್ಯ ಮುಂದುವರಿಸಿರುವುದಾಗಿ ವರದಿ ತಿಳಿಸಿದೆ.

ಟಾಯ್ಲೆಟ್ ನಲ್ಲಿ 3 ಕೆಜಿ ಚಿನ್ನ, ಬೆಳ್ಳಿ ಹಾಗೂ 7 ಕೋಟಿ ರೂಪಾಯಿ ನಗದನ್ನು ವಶಪಡಿಸಿಕೊಂಡಿರುವುದಾಗಿ ವರದಿ ವಿವರಿಸಿದ್ದು, ಮಹತ್ವದ ದಾಖಲೆಗಳನ್ನು ಪರಿಶೀಲಿಸುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಜೈ ಮಾರುತಿ ಗ್ರೂಪ್ ಮಾರುತಿ ಹಾಗೂ ಅಶೋಕ್ ಲೇಲ್ಯಾಂಡ್ ರೀತಿ ದೊಡ್ಡ ಆಟೋಮೊಬೈಲ್ ಕಂಪನಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next