ಅಂದಾಜು ವಿವರದಲ್ಲಿ ರೈತರ ಸಾಲ ಮನ್ನಾ ಘೋಷಣೆ ಹಿನ್ನೆಲೆಯಲ್ಲಿ ಸಹಕಾರ ಇಲಾಖೆ ಅನುದಾನಕ್ಕೆ 2,600 ಕೋಟಿ ರೂ., ಲೋಕೋಪಯೋಗಿ ಇಲಾಖೆ ಅನುದಾನಕ್ಕೆ 1997 ಕೋಟಿ ರೂ. ಹೆಚ್ಚುವರಿ ಸೇರ್ಪಡೆ ಮಾಡಿರುವುದು ಉಲ್ಲೇಖವಾಗಿದೆ.
Advertisement
ಲೋಕೋಪಯೋಗಿ ಇಲಾಖೆಗೆ 1,997 ಕೋಟಿ ರೂ. ಹೆಚ್ಚುವರಿ ಮೊತ್ತ ಸೇರ್ಪಡೆ ಮಾಡಲಾಗಿದೆ. ಇದರಲ್ಲಿ ಬಾಕಿ ಬಿಲ್ ಪಾವತಿಗಾಗಿ 1850 ಕೋಟಿ ರೂ. ಸೇರ್ಪಡೆ ಮಾಡಲಾಗಿದೆ. ಜತೆಗೆ ಕೆಆರ್‌ಡಿಸಿಎಲ್ ವತಿಯಿಂದ ಕೈಗೊಳ್ಳಲಾದ ರಸ್ತೆ, ಸೇತುವೆ ಕಾಮಗಾರಿಗಳ ಭೂಸ್ವಾಧೀನ ಪ್ರಕರಣಗಳ ಭೂಪರಿಹಾರ ವೆಚ್ಚಗಳಿಗಾಗಿ 41.45 ಕೋಟಿ ರೂ., ಹಾಸನ ನಗರದ ಚೆನ್ನಪಟ್ಟಣ ಕೆರೆ ಅಭಿವೃದ್ಧಿಗೆ 36 ಕೋಟಿ ರೂ. ಹೆಚ್ಚುವರಿಯಾಗಿ ಸೇರ್ಪಡೆ ಮಾಡಲಾಗಿದೆ. ಕೇಂದ್ರ ಪುರಸ್ಕೃತ ನೀಲಿಕ್ರಾಂತಿ/ ಮೀನುಗಾರಿಕೆಯ ಸಮಗ್ರ ಅಭಿವೃದಿಟಛಿ ಮತ್ತು ನಿರ್ವಹಣೆ ಯೋಜನೆಗೆ ಕೇಂದ್ರದಿಂದ ಮರುಮೌಲಿಕರಿಸಿದ ಅನುದಾನಕ್ಕೆ ರಾಜ್ಯದ ಪಾಲು ಸೇರಿಸಿ 6.30 ಕೋಟಿ ರೂ. ಸೇರ್ಪಡೆ ಮಾಡಲಾಗಿದೆ. ಮೋಟಾರು ನಾಡ ದೋಣಿಗಳಿಗೆ ಪಡಿತರ ದರದಲ್ಲಿ ಸೀಮೆಎಣ್ಣೆ ಪೂರೈಕೆಗೆ 8.57 ಕೋಟಿ ರೂ. ಹೆಚ್ಚುವರಿ ಸೇರ್ಪಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನ ಕುಳಾಯಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣಕಾಮಗಾರಿಗೆ ಕೇಂದ್ರದಿಂದ ಬಿಡುಗಡೆಯಾದ ಅನುದಾನಕ್ಕೆ ಪೂರಕವಾಗಿ ರಾಜ್ಯದ ಪಾಲು ಸೇರಿಸಿ ಬಿಡುಗಡೆ ಮಾಡಲು
54.04 ಕೋಟಿ ರೂ. ಸೇರ್ಪಡೆ ಮಾಡಲಾಗಿದೆ.
ಕೋಟಿ ರೂ.ರಾಜ್ಯದಲ್ಲಿ ಪ್ರಕೃತಿ ವಿಕೋಪಕ್ಕೆ ತುತ್ತಾದ ಜಿಲ್ಲೆಗಳಲ್ಲಿ ಪರಿಹಾರ ಕಾಮಗಾರಿ ಕೈಗೊಳ್ಳಲು 200 ಕೋಟಿ ರೂ., ಬೆಂಗಳೂರಿನ ಶಂಕರ ಮಠದಲ್ಲಿರುವ ಶೃಂಗೇರಿ ಮಠದ ಅಭಿವೃದಿಟಛಿಗೆ 4.95 ಕೋಟಿ ರೂ., 84ನೇ ಅಖೀಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ 6 ಕೋಟಿ ರೂ., ಸಾಲ ಮರುಪಾವತಿ, ಬಡ್ಡಿ ಪಾವತಿಗೆ 50.39 ಕೋಟಿ ರೂ. ಅಕ್ರಮ ಮದ್ಯ ಸಾಗಾಟಕ್ಕೆ ಕಡಿವಾಣ: ಕುಮಾರ ಸ್ವಾಮಿ
ವಿಧಾನಪರಿಷತ್ತು: ಕಳಪೆ ಹಾಗೂ ಅಕ್ರಮ ಮದ್ಯ ಮಾರಾಟಕ್ಕೆ ಕಡಿವಾಣ ಹಾಕಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಮುಖ್ಯಮಂತ್ರಿ ಎಚ್.ಡಿ. ಕುಮಾರ ಸ್ವಾಮಿ ಭರವಸೆ ನೀಡಿದ್ದಾರೆ. ಬಿಜೆಪಿ ಸದಸ್ಯೆ ತೇಜಸ್ವಿನಿ ಗೌಡ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಎಲ್ಲಿಯೂ ಅನಧಿಕೃತ ಸಾರಾಯಿ ಅಂಗಡಿಗಳು ಇಲ್ಲ. ಒಂದು ವೇಳೆ ಅಂತಹ ಅಂಗಡಿಗಳು ಇದ್ದರೆ ಅವುಗಳ ವಿರುದ್ಧ ಕಠಿಣ ಕ್ರಮ
ಜರುಗಿಸುತ್ತೇವೆ ಎಂದು ತಿಳಿಸಿದರು.
Related Articles
Advertisement
ಗ್ರಾನೈಟ್ ಕ್ವಾರಿ ಪರವಾನಗಿ ಪ್ರಕ್ರಿಯೆ ಸರಳಬೆಳಗಾವಿ: ಗ್ರಾನೈಟ್ ಗಣಿಗಾರಿಕೆ ಸಂಬಂಧಿಸಿದಂತೆ ರಾಜ್ಯಕ್ಕೆ ರಾಜಧನ ನಷ್ಟವಾಗದಂತೆ ಉದ್ಯಮಿಗಳಿಗೆ ಪರವಾನಗಿ ನೀಡುವ ಪ್ರಕ್ರಿಯೆಯನ್ನು ಸರಳಗೊಳಿಸಲು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸೂಚನೆ ನೀಡಿದರು. ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಗ್ರಾನೈಟ್ ಕ್ವಾರಿಯಿಂಗ್ ಉದ್ಯಮ ಎದುರಿಸುತ್ತಿರುವ ಸಮಸ್ಯೆಗಳ ಕುರಿತಂತೆ ನಡೆದ ಚರ್ಚೆಯಲ್ಲಿ ಉದ್ಯಮಿಗಳ ಸಮಸ್ಯೆಯನ್ನು ಆಲಿಸಿದ ಮುಖ್ಯಮಂತ್ರಿಗಳು ಮೇಲ್ಕಂಡಂತೆ ಸೂಚನೆ ನೀಡಿದರು. ಸಭೆಯಲ್ಲಿ ಸಂಬಂಧಪಟ್ಟ ಪ್ರದೇಶ ವ್ಯಾಪ್ತಿಯ ಶಾಸಕರು ನೀಡಿದ ಸಲಹೆಗಳನ್ನು ಪರಿಗಣಿಸಿ ಗ್ರಾನೈಟ್ ಉದ್ಯಮಗಳು
ಎದುರಿಸುತ್ತಿರುವ ಸವಾಲುಗಳನ್ನು ಬಗೆಹರಿಸಲು ಸೂಕ್ತ ಕ್ರಮಕೈಗೊಳ್ಳುವ ಭರವಸೆ ನೀಡಿದರು. ಗಣಿ ಇಲಾಖೆ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಕಠಾರಿಯಾ ಸಭೆಯಲ್ಲಿ ಮಾತನಾಡಿ, ಈಗಾಗಲೇ ಪರವಾನಗಿ ನೀಡುವ ಸಂಬಂಧ ಕಾನೂನು ಸರಳೀಕರಣಗೊಳಿಸಲು ನೆರೆ ರಾಜ್ಯಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದ್ದು, ಅಧ್ಯಯನ ವರದಿಯೂ ಸಲ್ಲಿಕೆಯಾಗಿದೆ. ಶೀಘ್ರವೇ ಕಾನೂನು ಸರಳೀಕರಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ವಿವರಣೆ ನೀಡಿದರು.