ಬಜಪೆ : ಎಕ್ಕಾರು ಗ್ರಾಮ ಪಂಚಾ ಯತ್ ವ್ಯಾಪ್ತಿಯ ಸರಕಾರಿ ಜಾಗದಲ್ಲಿ ಮನೆ ಮಾಡಿಕೊಂಡಿದ್ದ 250 ಮಂದಿಗೆ 94ಸಿಸಿ ಹಕ್ಕು ಪತ್ರಗಳನ್ನು ಶಾಸಕ ಕೆ. ಅಭಯಚಂದ್ರ ಮಂಗಳ ವಾರ ಎಕ್ಕಾರು ಕುಂಭಕಂಠಿನಿ ಸಭಾಭವನದಲ್ಲಿ ನಡೆದ ಸಮಾರಂಭದಲ್ಲಿ ವಿತರಿಸಿದರು.
ಇದೇ ಸಂದರ್ಭದಲ್ಲಿ ಎಕ್ಕಾರು ಗ್ರಾ.ಪಂ. ವ್ಯಾಪ್ತಿಯ ಬಡಗ ಎಕ್ಕಾರು ಮತ್ತು ತೆಂಕ ಎಕ್ಕಾರು ಗ್ರಾಮಗಳಲ್ಲಿ ಶಾಸಕರ 6 ಕೋಟಿ ರೂ. ಅನುದಾನದ ವಿವಿಧ ಕಾಮಗಾರಿಗಳಿಗೆ ಚಾಲನೆ ಹಾಗೂ ಉದ್ಘಾಟನೆಯನ್ನು ಅವರು ನೆರವೇರಿಸಿದರು.
ಅತಂತ್ರ ಸ್ಥಿತಿಯಲ್ಲಿದ್ದ 250 ಕುಟುಂಬಗಳ ಮಂದಿ 94ಸಿಸಿ ಹಕ್ಕುಪತ್ರ ಪಡೆಯುವ ಮೂಲಕ ಆ ಜಾಗದ ಯಜಮಾನರಾಗಿದ್ದಾರೆ. ಇನ್ನು ಪಂಚಾಯತ್‌ನಿಂದ ಮನೆ ನಂಬ್ರ ಪಡೆದು ನಳ್ಳಿನೀರು, ವಿದ್ಯುತ್ ಸಂಪರ್ಕ ಪಡೆಯಬಹುದಾಗಿದೆ.
ಎಲ್ಲರಿಗೂ ಗ್ರಾ.ಪಂ. ಸಹಕಾರದೊಂದಿಗೆ ಅಶ್ರಯ ಯೋಜನೆಯಡಿ ಮನೆ ನಿರ್ಮಾಣ ಮಾಡಿಕೊಡಲಾಗುವುದು ಎಂದು ಅಭಯಚಂದ್ರ ಹೇಳಿದರು. ಫಲಾನುಭವಿಗಳಿಗೆ 40 ದಿನಗಳೊಳಗೆ ಆರ್‌ಟಿಸಿ ಮಾಡಿಕೊಡಲಾಗುವುದು. ನಕ್ಷೆ ಹಾಗೂ 9/11 ಕೂಡ ಉಚಿತವಾಗಿ ಮಾಡಿಕೊಡಲಾಗುವುದು ಎಂದು ಮಂಗಳೂರು ತಹಶೀಲ್ದರ್ ಗುರು ಪ್ರಸಾದ್ ಹೇಳಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಕಸ್ತೂರಿ ಪಂಜ ಮಾತನಾಡಿದರು. ತಾ. ಪಂ. ಸದಸ್ಯೆ ಪ್ರತಿಭಾ, ಎಕ್ಕಾರು ಗ್ರಾ.ಪಂ. ಅಧ್ಯಕ್ಷ ಸುರೇಶ್ ಶೆಟ್ಟಿ, ಉಪಾಧ್ಯಕ್ಷ ಸುಜಾತಾ, ಬಜಪೆ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕಿನ ಅಧ್ಯಕ್ಷ ಮೋನಪ್ಪ ಶೆಟ್ಟಿ ಎಕ್ಕಾರು, ಸುರತ್ಕಲ್ ಹೋಬಳಿಯ ಕಂದಾಯ ನಿರೀಕ್ಷಕ ನವೀನ್ ಕುಮಾರ್, ಬಜಪೆ ಗ್ರಾ.ಪಂ. ಉಪಾಧ್ಯಕ್ಷ ಮಹಮದ್ ಶರೀಫ್ ಉಪಸ್ಥಿತರಿದ್ದರು. ಕಂದಾಯ ನಿರೀಕ್ಷಕ ನವೀನ್ ಕುಮಾರ್ ಮತ್ತು ಗ್ರಾಮ ಲೆಕ್ಕಾಧಿಕಾರಿ ವಿಜೇತ್ ಅವರನ್ನು ಸಮ್ಮಾನಿಸಲಾಯಿತು. ಕಾರ್ಯಕ್ರಮವನ್ನು ಜಗದೀಶ್ ಶೆಟ್ಟಿ ನಿರೂಪಿಸಿದರು.