Advertisement
ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಟೋಲ್ ಗೇಟ್ ಪ್ರಸ್ತಾವ ಶಾಶ್ವತವಾಗಿ ರದ್ದು ಆಗಬೇಕಿದೆ. ಈ ಸಂಬಂಧ ಕೂಡಲೇ ಆದೇಶ ಹೊರಡಿಸಲು ಆಗ್ರಹಿಸಿ ಸಚಿವರನ್ನು ಭೇಟಿ ಮಾಡಲಾಗುವುದು ಎಂದರು.ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಮಾತನಾಡಿ, ಜನರ ಬಲವೇ ಹೋರಾಟಕ್ಕೆ ಶಕ್ತಿ ತುಂಬಿದೆ. ಹೋರಾಟಕ್ಕೆ ರಾಜಕೀಯ ಬಣ್ಣ ತುಂಬದೇ ಪಕ್ಷಾತೀತವಾಗಿ ಎಲ್ಲರೂ ಕೈ ಜೋಡಿಸಿ ರುವುದು ಸ್ವಾಗತಾರ್ಹ. ನಾವಿರಿಸಿದ ಪುಟ್ಟ ಹೆಜ್ಜೆಯೇ ಇಂದು ಹೋರಾಟ ವಾಗಿ ಮಾರ್ಪಟ್ಟಿದೆ ಎಂದರು.
ಕೇಮಾರು ಸಾಂದೀಪನಿ ಸಾಧನಾ ಶ್ರಮದ ಶ್ರೀ ಈಶ ವಿಠಲದಾಸ ಸ್ವಾಮೀಜಿ ಮಾತನಾಡಿ, ಈ ಹೋರಾಟವು ಜಿಲ್ಲೆಯ ಜನರನ್ನು ಒಗ್ಗೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ. ಅವಿಭಜಿತ ದ.ಕ.ಜಿಲ್ಲೆಯು ಟೋಲ್‌ಗೇಟ್ ಮುಕ್ತವಾಗಬೇಕು. ಇದು ಐಟಿ, ಬಿಟಿ ಅಧ್ಯಯನದ ತಾಣವಾಗಬೇಕು ಎಂದು ಹೇಳಿದರು. ಮುದರಂಗಡಿ ಚರ್ಚ್‌ನ ಧರ್ಮಗುರು ರೆ| ಫಾ| ಫೆಡ್ರಿಕ್ ಡಿ’ ಸೋಜಾ ಮಾತನಾಡಿ, ಇದು ಜನಪರ ಸಭೆಯಾಗಿದ್ದು, ನಮ್ಮ ರಾಜ್ಯ ರಸ್ತೆಯಲ್ಲಿ ಯಾವುದೇ ಕಾರಣಕ್ಕೂ ಟೋಲ್‌ಗೇಟ್ ತೆರೆಯಲು ಅವಕಾಶ ನೀಡಬಾರದು ಎಂದರು. ಹೋರಾಟ ಸಮಿತಿ ಅಧ್ಯಕ್ಷ ಸುಹಾಸ್ ಹೆಗ್ಡೆ ನಂದಳಿಕೆ ಮಾತನಾಡಿ, ರಸ್ತೆ ಅಭಿವೃದ್ಧಿ ನಿಗಮದ ಕಾರ್ಯಾದೇಶಕ್ಕೆ ತಾತ್ಕಾಲಿಕ ತಡೆ ನೀಡಿರುವುದು ಸ್ವಾಗತಾರ್ಹ. ಆದರೆ ಇದು ಶಾಶ್ವತವಾಗಿ ಎತ್ತಂಗಡಿ ಯಾಗುವವರೆಗೂ ನಮ್ಮ ಹೋರಾಟ ಮುಂದುವರಿಯಲಿದೆ ಎಂದರು.
Related Articles
Advertisement
ಸಾವಿರಾರು ಮಂದಿ ಭಾಗಿಉಡುಪಿ ಜಿಲ್ಲೆಯ ವಿವಿಧ ಸಂಘಟನೆಗಳು, ವಿವಿಧ ಕ್ಷೇತ್ರ ವ್ಯಾಪ್ತಿಯ ಜನಪ್ರತಿನಿಧಿಗಳು, ಸಂಘ ಸಂಸ್ಥೆಗಳ ಪ್ರತಿನಿಧಿಗಳು, ಸುತ್ತಲಿನ 40 ಗ್ರಾಮಗಳ ಸಹಸ್ರಾರು ಮಂದಿ ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು. ಸಭೆಯ ಬಳಿಕ ಕಂಚಿನಡ್ಕದಿಂದ ಪಡುಬಿದ್ರಿ ಜಂಕ್ಷನ್‌ವರೆಗೆ ಜಾಥಾ ನಡೆಯಿತು. ಜಿಲ್ಲಾ ಮೀಸಲು ಪಡೆಯ ಒಂದು ತುಕಡಿ ಸಹಿತ ಉಡುಪಿ ಜಿಲ್ಲಾ ಪೊಲೀಸ್ ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಶ್ರಮಿಸಿದ್ದರು. ಪಡುಬಿದ್ರಿ, ನಂದಿಕೂರು, ಪಲಿಮಾರು, ಮುದರಂಗಡಿ, ಸಾಂತೂರು, ಬೆಳ್ಮಣ್, ಕಾರ್ಕಳ ಪರಿಸರದ ಎಲ್ಲ ವ್ಯಾಪಾರ ವಹಿವಾಟುಗಳ ಮಳಿಗೆಗಳೂ ಬೆಳಗ್ಗೆ 9ರಿಂದ ಮಧ್ಯಾಹ್ನ 1 ಗಂಟೆಯವರೆಗೆ ಮುಚ್ಚಿ ಜನಾಂದೋಲನಕ್ಕೆ ಬೆಂಬಲ ಸೂಚಿಸಿದ್ದವು. ಮನವಿ ಸಲ್ಲಿಕೆ
ಪ್ರತಿಭಟನೆ ಸ್ಥಳಕ್ಕೆ ಭೇಟಿ ನೀಡಿದ ಅಪರ ಜಿಲ್ಲಾಧಿಕಾರಿ ಮಮತಾ ದೇವಿ, ಕಾಪು ತಹಶೀಲ್ದಾರ್ ಡಾ| ಪ್ರತಿಭಾ ಆರ್. ಮೂಲಕ ಜಿಲ್ಲಾಡಳಿತ ಮತ್ತು ಸರಕಾರಕ್ಕೆ ಕಂಚಿನಡ್ಕ ಟೋಲ್ ಶಾಶ್ವತ ರದ್ದತಿಗಾಗಿ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಅವರು, ಜಿಲ್ಲಾಡಳಿತವು ಸದಾ ಜನತೆಯ ಪರ ಇರಲಿದೆ ಎಂದರು. ಪ್ರಭಾರ ಡಿವೈಎಸ್ಪಿ ಗೀತಾ ಪಾಟೀಲ್, ಕಾಪು ವೃತ್ತ ನಿರೀಕ್ಷಕಿ ಜಯಶ್ರೀ ಮಾನೆ ಮೊದಲಾದವರು ಇದ್ದರು.