Advertisement
ಆರುಲ್ ಮೋಝಿ ಸೆಲ್ವಾನ್ ಎಂಬಾತ ದಿಲ್ಲಿಯ ಆರ್‌ಬಿಐ ಕಟ್ಟಡದ ಮುಂದೆ ನಿಂತು ಕಟ್ಟಡದ ಫೋಟೋ ತೆಗೆಯಲು ಪ್ರಯತ್ನಿಸುತ್ತಿದ್ದ. ಆ ವೇಳೆ ಭದ್ರತಾ ಸಿಬಂದಿ ಆತನನ್ನು ತಡೆದಿದ್ದರು. ಆತ ಆರ್‌ಬಿಐ ತನ್ನ ಮೂಲಭೂತ ಹಕ್ಕನ್ನು ಚಲಾಯಿಸಲು ಅನುವು ಮಾಡಲಿಲ್ಲ ಎಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದ. ಈ ಮನವಿಯನ್ನು ಪರಿಶೀಲಿಸಿದ ಮುಖ್ಯ ನ್ಯಾಯಮೂರ್ತಿ ಜೆ.ಎಸ್. ಖೆಹರ್ ಮತ್ತು ನ್ಯಾ| ಡಿ.ವೈ. ಚಂದ್ರಚೂಡ್ ಅವರನ್ನೊಳಗೊಂಡ ಪೀಠ, ಆತನಿಗೇ 50,000 ರೂ. ದಂಡ ವಿಧಿಸಿದೆ. “ಈ ರೀತಿಯ ಅರ್ಜಿ ಸಲ್ಲಿಸಿ ಸೆಲ್ವಾನ್ ಕೋರ್ಟ್ ಹಾಗೂ ಕಾನೂನು ಪ್ರಕ್ರಿಯೆಗೆ ತೊಡಕುಂಟು ಮಾಡಿದ್ದಾರೆ ಮತ್ತು ನ್ಯಾಯಾಂಗದ ಸಮಯವನ್ನು ಹಾಳು ಮಾಡಿದ್ದಾರೆ. ಇದಕ್ಕಾಗಿ ದಂಡ ವಿಧಿಸಲಾಗಿದೆ’ ಎಂದು ನ್ಯಾಯಪೀಠ ಹೇಳಿದೆ.