Advertisement

ಡಿ ಮಾರ್ಟ್‌ ಮಳಿಗೆಗೆ 5 ಸಾವಿರ ರೂ. ದಂಡ

01:23 PM Apr 15, 2021 | Team Udayavani |

ನೆಲಮಂಗಲ: ಪಟ್ಟಣದ ಹೊರವಲಯದ ಪ್ರತಿಷ್ಠಿತ ಡಿ.ಮಾರ್ಟ್‌ ಮಾರಾಟ ಮಳಿಗೆಯಲ್ಲಿ ಕೋವಿಡ್‌ ನಿಯಮಾವಳಿ ಉಲ್ಲಂ ಸಲಾಗುತ್ತದೆ ಎಂಬ ಖಚಿತ ಮಾಹಿತಿ ಮೇರೆಗೆ ತಹಶೀಲ್ದಾರ್‌ ಕೆ.ಮಂಜುನಾಥ್‌,ಅಧಿಕಾರಿಗಳ ತಂಡ ದಿಢೀರ್‌ ಭೇಟಿ ನೀಡಿ ಪರಿಶೀಲಿಸಿಡಿ.ಮಾರ್ಟ್‌ನ ಅಧಿಕಾರಿ, ಸಿಬ್ಬಂದಿಗಳನ್ನು ತರಾಟೆಗೆ ತೆಗೆದುಕೊಂಡರು.

Advertisement

ಯುಗಾದಿ ಸಡಗರದಲ್ಲಿ ಡಿ.ಮಾರ್ಟ್‌ಗೆ ಲಗ್ಗೆ ಇಟ್ಟಿದ್ದಗ್ರಾಹಕರಿಗೆ ಕೊರೊನಾ ಕುರಿತಾಗಿ ಜಾಗೃತಿ ಸೇರಿದಂತೆನಿಯಮಗಳ ಪಾಲನೆ ಮಾಡದೆ ಕೋವಿಡ್‌ ನಿಯಮಗಾಳಿಗೆ ತೂರಿದರೆ ಸೂಕ್ತ ರೀತಿಯ ಕಟ್ಟುನಿಟ್ಟಿನಕ್ರಮಜರುಗಿಸಲಾಗುತ್ತದೆ. ನಿಯಮ ಪಾಲನೆ ಕಡ್ಡಾಯಕೋವಿಡ್‌ 2ನೇ ಅಲೆಯಿಂದಾಗಿ ನಾಗರಿಕ ಸಮಾಜ ತಲ್ಲಣಗೊಳ್ಳುತ್ತಿದೆ.

ಆದರೆ ಡಿ ಮಾರ್ಟ್‌ ಸಿಬ್ಬಂದಿಗ್ರಾಹಕರಿಗೆ ಮಾಸ್ಕ್ ಹಾಕಿಕೊಳ್ಳುವುದು ಸ್ಯಾನಿಟೈಸರ್‌ಮತ್ತು ದೈಹಿಕ ಅಂತರ ಕಾಯ್ದುಕೊಳ್ಳುವಂತೆ ಎಚ್ಚರಿಕೆವಹಿಸಬೇಕು. ಇಲ್ಲವಾದಲ್ಲಿ ಕಟ್ಟುನಿಟ್ಟಿನ ಕ್ರಮಕ್ಕೆಮುಂದಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ5 ಸಾವಿರ ರೂ.ಗಳ ದಂಡ ವಿಧಿಸಲಾಗಿದೆ ಎಂದುತಹಶೀಲ್ದಾರ್‌ ಕೆ.ಮಂಜುನಾಥ್‌ ತಿಳಿಸಿದರು.ನಗರಸಭೆ ಆಯುಕ್ತ ಎಲ್‌.ಮಂಜುನಾಥಸ್ವಾಮಿ,ಕಿರಿಯ ಅಭಿಯಂತರ ರವಿಕುಮಾರ್‌, ಸ್ಥಳಿಯ ಗ್ರಾಮಲೆಕ್ಕಾಧಿಕಾರಿಗಳು ಇದ್ದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next