Advertisement

Fake Currency: 500 ರೂ. ನಕಲಿ ನೋಟುಗಳಲ್ಲಿ ಗಾಂಧಿ ಬದಲು ಅನುಪಮ್‌ ಖೇರ್‌ ಫೋಟೊ!

12:44 PM Sep 30, 2024 | Team Udayavani |

ಅಹಮದಾಬಾದ್:‌ ನೂತನ 500 ರೂ. ಮುಖಬೆಲೆಯ(500 Rs notes) ನೋಟು ಚಲಾವಣೆಗೆ ಬಂದು ಎಂಟು ವರ್ಷಗಳಾಗುತ್ತ ಬಂದಿದೆ. ಹೊಸ ನೋಟುಗಳು ಚಲಾವಣೆಗೆ ಬರುತ್ತಿದ್ದಂತೆಯೇ ನಕಲಿ ನೋಟುಗಳ(Fake Currency) ಹಾವಳಿಗೆ ಕಡಿವಾಣ ಬಿದ್ದಿತ್ತು. ಆದರೆ ಇದೀಗ ಭಾರತದಲ್ಲಿ ಮತ್ತೊಮ್ಮೆ ನಕಲಿ ನೋಟುಗಳ ಸುದ್ದಿ ಸದ್ದು ಮಾಡಿದೆ.

Advertisement

ಗುಜರಾತ್‌ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಸುಮಾರು 1.60 ಕೋಟಿ ರೂಪಾಯಿ ಮೌಲ್ಯದ ನಕಲಿ ಕರೆನ್ಸಿಯನ್ನು ವಶಪಡಿಸಿಕೊಂಡಿರುವುದಾಗಿ ವರದಿ ತಿಳಿಸಿದೆ.

ಪೊಲೀಸರು ವಶಪಡಿಸಿಕೊಂಡ 500 ರೂಪಾಯಿ ಮುಖಬೆಲೆಯ ನಕಲಿ ನೋಟುಗಳಲ್ಲಿ ಮಹಾತ್ಮಗಾಂಧಿಯ ಬದಲು ನಟ ಅನುಪಮ್‌ ಖೇರ್‌ ಅವರ ಚಿತ್ರವನ್ನು ಬಳಸಿರುವುದು ಪತ್ತೆಯಾಗಿದೆ.

ನಕಲಿ ನೋಟುಗಳಲ್ಲಿ ನಟ ಅನುಪಮ್‌ ಖೇರ್‌ ಫೋಟೊ ಬಳಸಿದ್ದು, ಅದರ ಜೊತೆಗೆ ರಿಸರ್ವ್‌ ಬ್ಯಾಂಕ್‌ ಆಫ್‌ ಇಂಡಿಯಾ ( Reserve Bank Of India) ಬದಲು ರಿಸೋಲ್‌ ಬ್ಯಾಂಕ್‌ ಆಫ್‌ ಇಂಡಿಯಾ ಎಂದು ಮುದ್ರಿಸಲಾಗಿದೆ ಎಂಬುದಾಗಿ ಪೊಲೀಸ್‌ ಕಮಿಷನರ್‌ ರಾಜ್‌ ದೀಪ್‌ ನುಕುಂ ತಿಳಿಸಿದ್ದಾರೆ.

Advertisement

ನಕಲಿ ನೋಟುಗಳ ಚಿತ್ರಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು, ಇದಕ್ಕೆ ಬಳಕೆದಾರರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದು, ಕೆಲವರು ಆಘಾತ ವ್ಯಕ್ತಪಡಿಸಿದ್ದರೆ, ಇನ್ನು ಕೆಲವರು ಹಾಸ್ಯವಾಗಿ ಪ್ರತಿಕ್ರಿಯೆ ನೀಡಿದ್ದಾರೆ.

ಈ ಮೊದಲು ನಕಲಿ ನೋಟುಗಳನ್ನು ತಯಾರಿಸುತ್ತಿದ್ದ ಗುಜರಾತ್‌ ನ ಸೂರತ್‌ ನ ಆನ್‌ ಲೈನ್‌ ಗಾರ್ಮೆಂಟ್‌ ಸ್ಟೋರ್‌ ನ ಕಚೇರಿ ಮೇಲೆ ದಾಳಿ ನಡೆಸಿದ್ದ ಪೊಲೀಸರು ನಾಲ್ವರನ್ನು ಬಂಧಿಸಿರುವುದಾಗಿ ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next