Advertisement

ಐದು ರೂಪಾಯಿಗೆ ಊಟ: ಬಿಜೆಪಿ ವಾಗ್ಧಾನ

07:30 PM Feb 09, 2023 | Team Udayavani |

ಅಗರ್ತಲಾ: ಕೇವಲ 5ರೂ.ಗೆ ಊಟ, ರೈತರಿಗೆ ನೀಡಲಾಗುವ ಹಣಕಾಸು ನೆರವು ಹೆಚ್ಚಳ, ಕೈಗಾರಿಕಾ ಕೇಂದ್ರಿತ ಉತ್ಪಾದನಾ ವಲಯ, ಬುಡಕಟ್ಟು ಪ್ರದೇಶಗಳಿಗೆ ಹೆಚ್ಚಿನ ಸ್ವಾಯತ್ತೆ, ಅಗರ್ತಲಾದಲ್ಲಿ ವೈದ್ಯಕೀಯ ವಿಜ್ಞಾನಗಳ ಪ್ರಾದೇಶಿಕ ಸಂಸ್ಥೆ ಸ್ಥಾಪನೆ…

Advertisement

ವಿಧಾನಸಭೆ ಚುನಾವಣೆ ಎದುರಿಸಲಿರುವ ತ್ರಿಪುರಾದಲ್ಲಿ ಆಡಳಿತಾರೂಢ ಬಿಜೆಪಿ ನೀಡಿರುವ ವಾಗ್ಧಾನಗಳಿವು. ಫೆ. 16ರಂದು ನಡೆಯಲಿರುವ ಚುನಾವಣೆಯ ಪ್ರಣಾಳಿಕೆಯನ್ನು ಗುರುವಾರ ಬಿಡುಗಡೆ ಮಾಡಿರುವ ಬಿಜೆಪಿ, ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬಂದರೆ ಏನೇನು ಯೋಜನೆಗಳನ್ನು ಜಾರಿ ಮಾಡಲಾಗುತ್ತದೆ ಎಂಬುದನ್ನು ಉಲ್ಲೇಖೀಸಿದೆ.

ಸರ್ವರಿಗೂ 5ರೂ.ನಲ್ಲಿ ಊಟ ಎಂಬ ಯೋಜನೆಯನ್ನು ಧಾರ್ಮಿಕ ಗುರು ಅನುಕುಲ್‌ ಚಂದ್ರ ಅವರ ಹೆಸರಲ್ಲಿ ಜಾರಿಗೆ ತರಲಾಗುತ್ತದೆ. ನಾವು ತ್ರಿಪುರವನ್ನು ಡಿಟಿಎಚ್‌(ಅಭಿವೃದ್ಧಿ, ಪರಿವರ್ತನೆ ಮತ್ತು ಸಾಮರಸ್ಯ) ಪಥದಲ್ಲಿ ಕೊಂಡೊಯ್ಯಲಿದ್ದೇವೆ. ಪ್ರತಿಯೊಂದು ಹೆಣ್ಣು ಮಗುವಿನ ಹೆಸರಲ್ಲಿ 50 ಸಾವಿರ ರೂ.ಗಳ ಬಾಲಿಕ ಸಮೃದ್ಧಿ ಬಾಂಡ್‌, ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದಲ್ಲಿ ಬುಡಕಟ್ಟು ಭಾಷೆಯಾದ ಕೊಕ್‌ಬೊರೋಕ್‌ ಸೇರ್ಪಡೆ, ಪಿಎಂ ಕಿಸಾನ್‌ ಸಮೃದ್ಧಿ ಯೋಜನೆಯಡಿ ರೈತರಿಗೆ ನೀಡಲಾಗುತ್ತಿರುವ ವಾರ್ಷಿಕ 6 ಸಾವಿರ ರೂ.ಗಳಿಗೆ ರಾಜ್ಯದಿಂದ 2,000 ರೂ. ಸೇರ್ಪಡೆ ಸೇರಿದಂತೆ ಹಲವು ಆಶ್ವಾಸನೆಗಳನ್ನು ಬಿಜೆಪಿ ನೀಡಿದೆ.

Advertisement

Udayavani is now on Telegram. Click here to join our channel and stay updated with the latest news.

Next