Advertisement

ಮುಂಬಯಿ: 4.93 ಕೋಟಿ ನಿಷೇಧಿತ ನೋಟುಗಳ ಸಮೇತ ಮೂವರ ಸೆರೆ

02:12 PM May 25, 2018 | Team Udayavani |

ಮುಂಬಯಿ: ಇಲ್ಲಿಯ ಅಂಧೇರಿ ಪ್ರದೇಶದಲ್ಲಿರುವ ಪಂಚತಾರಾ ಹೊಟೇಲೊಂದರಲ್ಲಿ  ಬರೋಬ್ಬರಿ 4.93 ಕೋಟಿ ರೂಪಾಯಿ ನಿಷೇಧಿತ ನೋಟುಗಳ ಸಮೇತ ಮೂವರನ್ನು ಪೊಲೀಸರು ಗುರುವಾರ ಬಂಧಿಸಿದ್ದಾರೆ.

Advertisement

ಬಂಧಿತರು ಹೈದರಾಬಾದ್‌ ಮೂಲದವರಾಗಿದ್ದು ಹೊಟೇಲ್‌ನ ರೂಮ್‌ನಲ್ಲಿ ಉಳಿದುಕೊಂಡಾಗ ಪೊಲೀಸರು ದಾಳಿ ನಡೆಸಿದ್ದಾರೆ. ಪೊಲೀಸರು ಬಲವಂತವಾಗಿ ಬಾಗಿಲು ಮುರಿದು ಒಳ ಪ್ರವೇಶಿಸಿ ಪರಿಶೀಲಿಸಿದಾಗ ಅಪಾರ ಪ್ರಮಾಣದ ನಿಷೇಧಿತ ನೋಟುಗಳ ಸೂಟ್‌ಕೇಸನ್ನು ಪತ್ತೆ ಹಚ್ಚಿದ್ದಾರೆ.

ಈ ನೋಟುಗಳನ್ನು ಯಾರಿಗೋ ನೀಡುವ ದುರುದ್ದೇಶದಿಂದ ಮೂವರು ನಗರಕ್ಕೆ ಆಗಮಿಸಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. 

ಮೂವರನ್ನು ಪೊಲೀಸರು ತೀವ್ರವಾಗಿ ವಿಚಾರಣೆ ನಡೆಸುತ್ತಿದ್ದು ಹಣದ ಮೂಲದ ಬಗ್ಗೆ ಇನ್ನಷ್ಟೇ ತಿಳಿದು ಬರಬೇಕಿದೆ. 

Advertisement

Udayavani is now on Telegram. Click here to join our channel and stay updated with the latest news.

Next