Advertisement

ಆರೋಗ್ಯ ಇಲಾಖೆಗೆ 4 ಕೋಟಿ ಅನುದಾನ: ಸಂಸದ ಉಗ್ರಪ್ಪ

10:32 AM Mar 06, 2019 | |

ಹಗರಿಬೊಮ್ಮನಹಳ್ಳಿ: ದೇಶದಲ್ಲಿ ಆರೋಗ್ಯ ಬಲವರ್ಧನೆಗೆ ರೂಪಿಸಲಾದ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕು ಎಂದು ಸಂಸದ ವಿ.ಎಸ್‌.ಉಗ್ರಪ್ಪ ತಿಳಿಸಿದರು.

Advertisement

ಪಟ್ಟಣದ ಗಂ.ಭೀ.ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆವರಣದಲ್ಲಿ ಜಿಲ್ಲಾ ಆರೋಗ್ಯ ಮತ್ತು ತಾಲೂಕು ಆರೋಗ್ಯ ಇಲಾಖೆ ಏರ್ಪಡಿಸಿದ್ದ ಬಳ್ಳಾರಿ ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಉಚಿತ ಬೃಹತ್‌ ಆರೋಗ್ಯ ಮೇಳವನ್ನು ಉದ್ಘಾಟಿಸಿ ಮಂಗಳವಾರ ಅವರು ಮಾತನಾಡಿದರು. ಪ್ರತಿ
ತಾಲೂಕುಗಳಲ್ಲಿ ತಿಂಗಳಿಗೊಮ್ಮೆ ಆರೋಗ್ಯ ಮೇಳವನ್ನು ಏರ್ಪಡಿಸಬೇಕು. ಜಿಲ್ಲೆಯಲ್ಲಿ ಆರೋಗ್ಯ ಇಲಾಖೆಗೆ ವಿವಿಧ ಚಿಕಿತ್ಸೆ ಮತ್ತು ಉಪಕರಣಗಳಿಗಾಗಿ 4 ಕೋಟಿ ರೂ. ಅನುದಾನ ಕಲ್ಪಿಸಲಾಗಿದೆ ಎಂದರು. ಬಳಿಕ ರಕ್ತದಾನ ಶಿಬಿರಕ್ಕೆ ತೆರಳಿ ರಕ್ತದಾನಿಗಳನ್ನ ಪ್ರೇರೆಪಿಸಿದರು. ಆರೋಗ್ಯ ಇಲಾಖೆಯ ವಿವಿಧ ವಸ್ತುಪ್ರದರ್ಶನ ಮಳಿಗೆಗಳಿಗೆ ಚಾಲನೆ ನೀಡಿದರು.

ಆರೋಗ್ಯ ಇಲಾಖೆಯ ವಿವಿಧ ಯೋಜನೆಗಳನ್ನು ಕುರಿತಂತೆ 6 ಮಳಿಗೆಗಳಲ್ಲಿ ವಸ್ತು ಪ್ರದರ್ಶನದ ಮೂಲಕ ಅರಿವು ಮೂಡಿಸಲಾಯಿತು. ಮೇಳದಲ್ಲಿ ಎಚ್‌ಐವಿ, ಸೋಂಕು ರೋಗಗಳು ಮತ್ತು ಕ್ಯಾನ್ಸರ್‌ನ ಮೂಲ ಕಾರಣಗಳನ್ನು ಕುರಿತು ಆರೋಗ್ಯ ಶಿಕ್ಷಣ ಮಾಹಿತಿ ನೀಡಲಾಯಿತು. ಆಯುಷ್ಮಾನ್‌ ಭಾರತ್‌ ಯೋಜನೆ ಕುರಿತು ಸಾರ್ವಜನಿಕರಿಗೆ ಮಾಹಿತಿ ನೀಡಲಾಯಿತು. ಮೇಳದಲ್ಲಿ ಮೆಡಿಸಿನ್‌, ಸರ್ಜರಿ, ನ್ಯೂರೋಲಜಿ, ಕಾರ್ಡಿಯೋಲಜಿ ಸೇರಿ ಗ್ಯಾಸ್ಟ್ರೋ ಇಂಟಾಲಜಿ 2 ಸೂಪರ್‌ ಸ್ಪೆಷಾಲಿಟಿ ಸೇರಿದಂತೆ ವಿವಿಧ ರೋಗಗಳ ಚಿಕಿತ್ಸೆ ನೀಡಲಾಯಿತು. ಹೊಸದಾಗಿ 60 ಮಧುಮೇಹ ರೋಗಿಗಳನ್ನು ಪತ್ತೆ ಹಚ್ಚಿ ಚಿಕಿತ್ಸೆ ಪಡೆಯುವಂತೆ ಸೂಚನೆ ನೀಡಲಾಯಿತು.

ಮೇಳದಲ್ಲಿ ಕಾಲೇಜು ವಿದ್ಯಾರ್ಥಿಗಳು, ಉಪನ್ಯಾಸಕರು, ಸಾರ್ವಜನಿಕರು ಸೇರಿ ಒಟ್ಟು 80 ಜನ ರಕ್ತದಾನ ಮಾಡಿದರು. ಮೇಳದಲ್ಲಿ ಒಟ್ಟು 24 ವೈದ್ಯಾಧಿಕಾರಿಗಳು, 20 ತಜ್ಞ ವೈದ್ಯಾಧಿಕಾರಿಗಳು ಮತ್ತು 9 ಸೂಪರ್‌ ಸ್ಪೆಷಾಲಿಸ್ಟ್‌ ವೈದ್ಯಾಧಿಕಾರಿಗಳು ರೋಗಿಗಳಿಗೆ ಚಿಕಿತ್ಸೆ ನೀಡಿದರು. 81 ಕಣ್ಣಿನ ರೋಗಿಗಳನ್ನ ಶಸ್ತ್ರಚಿಕಿತ್ಸೆಗೆ ಆಯ್ಕೆ ಮಾಡಲಾಯಿತು. ಮೆಡಿಸಿನ್‌ 520, ಮಕ್ಕಳು 250, ಇಎನ್‌ಟಿ 200, ಕೀಲು ಮತ್ತು ಮೂಳೆ 500, ನ್ಯೂರೋಲಜಿ ವಿಭಾಗದ 300 ರೋಗಿಗಳು ಸೇರಿ ಒಟ್ಟು 4547 ರೋಗಿಗಳಿಗೆ ಚಿಕಿತ್ಸೆ ನೀಡಲಾಯಿತು.

ಡಿಎಚ್‌ಒ ಡಾ| ಶಿವರಾಜ ಹೆಡೆ ಪ್ರಾಸ್ತಾವಿಕ ಮಾತನಾಡಿ, ಆರೋಗ್ಯ ಮೇಳದಿಂದ ಗ್ರಾಮೀಣ ಪ್ರದೇಶದ ಜನರಿಗೆ ಒಂದೆ ಕಡೆ ಗುಣಮಟ್ಟದ ಚಿಕಿತ್ಸೆ ನೀಡಲು ಸಹಕಾರಿಯಾಗುತ್ತದೆ. ಜಿಲ್ಲಾ ಕೇಂದ್ರ ಸ್ಥಾನದಲ್ಲಿ ನಡೆಯಬೇಕಿದ್ದ ಮೇಳವನ್ನ ಹಿಂದುಳಿದ ತಾಲೂಕಿನ ಜನರಿಗೆ ಆರೋಗ್ಯ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಹಮ್ಮಿಕೊಳ್ಳಲಾಗಿದೆ  ಎಂದರು. ತಾಪಂ ಸಾಮಾಜಿಕ ನ್ಯಾಯಸಮಿತಿ ಅಧ್ಯಕ್ಷ ಬುಡ್ಡಿ ಬಸವರಾಜ ಮಾತನಾಡಿದರು. 

Advertisement

ತಾಪಂ ಅಧ್ಯಕ್ಷೆ ಕೆ.ನಾಗಮ್ಮ, ತಾಪಂ ಇಒ ಬಿ.ಮಲ್ಲಾನಾಯ್ಕ, ಜಿಲ್ಲಾ ಶಸ್ತ್ರಚಿಕಿತ್ಸಕ ಡಾ| ಬಸವರೆಡ್ಡಿ, ಆರ್‌ಸಿಎಚ್‌ಒ ಡಾ| ರವೀಂದ್ರನಾಥ, ತಾಲೂಕು ವೈದ್ಯಾಧಿಕಾರಿ ಡಾ| ಸುಲೋಚನಾ, ಮುಖ್ಯ ವೈದ್ಯಾಧಿಕಾರಿ ಡಾ| ಶಂಕರನಾಯ್ಕ, ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ| ನಿಜಾಮುದ್ದೀನ್‌, ಬಳ್ಳಾರಿ ವೈದ್ಯಕೀಯ ಅಧೀಕ್ಷಕ ಡಾ| ಚನ್ನಣ್ಣ, ಜಿಲ್ಲಾ ನೋಡಲ್‌ ಅಧಿಕಾರಿ ಡಾ| ರಜಿನಿ ಬಿ.ಎನ್‌, ಡಾ| ಅನಿಲ್‌ಕುಮಾರ್‌, ಡಾ| ವಿಜಯಲಕ್ಷ್ಮೀ, ಡಾ| ರಾಜಶೇಖರರೆಡ್ಡಿ, ಕುಷ್ಠ ರೋಗ ನಿಯಂತ್ರಾಣಾಧಿಕಾರಿ ಡಾ| ನರಸಿಂಹ ಮೂರ್ತಿ, ವಿಮ್ಸ್‌ ನಿರ್ದೇಶಕ ಡಾ| ಲಕ್ಷ್ಮೀನಾರಾಯಣರೆಡ್ಡಿ, ಜಿಲ್ಲಾ ಆಯುಷ್‌ ವೈದ್ಯಾಧಿಕಾರಿ ಡಾ| ವಂದನಾ, ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷೆ ಸೌಭಾಗ್ಯ ತಿರುಮಲ, ಕಾಂಗ್ರೆಸ್‌ ಜಿಲ್ಲಾ ಅಧ್ಯಕ್ಷ ಶಿವಯೋಗಿ, ಹೆಗ್ಗಾಳ್‌ ರಾಮಣ್ಣ, ಜಿಪಂ ಮಾಜಿ ಸದಸ್ಯ ಅಕ್ಕಿ ತೋಟೇಶ, ಮುಟುಗನಹಳ್ಳಿ ಕೊಟ್ರೇಶ್‌, ವಾಲ್ಮೀಕಿ ಮಹಾಸಭಾ ಅಧ್ಯಕ್ಷ ಚಿಂತ್ರಪಳ್ಳಿ ದೇವೇಂದ್ರ, ಕನ್ನಿಹಳ್ಳಿ ಚಂದ್ರಶೇಖರ ಇನ್ನಿತರರಿದ್ದರು.  ಇಲಾಖೆಯ ಆರ್‌ಸಿಎಚ್‌ಒ ರವೀಂದ್ರನಾಥ, ಡಾ| ಬಸವರೆಡ್ಡಿ, ಶಿಕ್ಷಕ ಕೊಟ್ರಪ್ಪ ನಿರೂಪಿಸಿದರು.  

Advertisement

Udayavani is now on Telegram. Click here to join our channel and stay updated with the latest news.

Next