Advertisement

ಮರೀನಾ ಬೀಚ್‌ನಲ್ಲಿ ಕರುಣಾ ಸ್ಮಾರಕ

10:16 PM Nov 08, 2021 | Team Udayavani |

ಚೆನ್ನೈ: ಡಿಎಂಕೆಯ ಹಿರಿಯ ನಾಯಕ ದಿ.ಎಂ.ಕೆ.ಕರುಣಾನಿಧಿ ಅವರ ಸ್ಮಾರಕ ಚೆನ್ನೈನ ಮರೀನಾ ಬೀಚ್‌ನಲ್ಲಿ ಸ್ಥಾಪಿಸಲು ತಮಿಳುನಾಡು ಸರ್ಕಾರ ಆದೇಶ ಹೊರಡಿಸಿದೆ.

Advertisement

ಒಟ್ಟು 2.21 ಎಕರೆ ಪ್ರದೇಶದಲ್ಲಿ 39 ಕೋಟಿ ರೂ.ವೆಚ್ಚದಲ್ಲಿ ಈ ಯೋಜನೆ ಕೈಗೆತ್ತಿಕೊಳ್ಳಲಾಗುತ್ತದೆ. ಚೆನ್ನೈ ಮಹಾನಗರ ಪಾಲಿಕೆಯ ಯೋಜನಾ ಪ್ರಾಧಿಕಾರಕ್ಕೆ ಸ್ಮಾರಕದ ನೀಲ ನಕ್ಷೆಯನ್ನು ಸಲ್ಲಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ಈ ಮೂಲಕ ಅದು ಕರಾವಳಿ ತೀರ ರಕ್ಷಣಾ ನಿಯಮಗಳ ವ್ಯಾಪ್ತಿಯಲ್ಲಿ ಇದೆಯೇ ಎಂಬ ಬಗ್ಗೆ ಪರಿಶೀಲಿಸಲೂ ಸೂಚಿಸಿದೆ. ಆದರೆ, ಸರ್ಕಾರದ ನಿರ್ಧಾರಕ್ಕೆ ಸಾರ್ವಜನಿಕರು ಸಾಮಾಜಿರ ಜಾಲತಾಣಗಳಲ್ಲಿ ಆಕ್ಷೇಪ ಮಾಡಿದ್ದಾರೆ.

ಇದನ್ನೂ ಓದಿ:ಹಣಕಾಸಿನ ಒಳಗೊಳ್ಳುವಿಕೆ : ಚೀನಾವನ್ನೇ ಹಿಂದಿಕ್ಕಿದ ಭಾರತ

Advertisement

Udayavani is now on Telegram. Click here to join our channel and stay updated with the latest news.

Next