Advertisement

ಮೇಘಸ್ಫೋಟಕ್ಕೆ ಕೊಚ್ಚಿಹೋದ ಬದುಕು-ಜನಜೀವನ ಅಸ್ತವ್ಯಸ್ತ; ಹಿಮಾಚಲಕ್ಕಾದ ನಷ್ಟ 4 ಸಾವಿರ ಕೋಟಿ

03:40 PM Jul 12, 2023 | Team Udayavani |

ನವದೆಹಲಿ:  ಹಿಮಾಚಲ ಪ್ರದೇಶದಲ್ಲಿ ಧಾರಾಕಾರ ಮಳೆಯ ಪರಿಣಾಮ ಹಿಮಾಚಲ ಪ್ರದೇಶದಲ್ಲಿ ಭಾರೀ ಪ್ರಮಾಣದ ಭೂ ಕುಸಿತ, ವಿದ್ಯುತ್‌ ಅವ್ಯವಸ್ಥೆ, ರಸ್ತೆ ಬಂದ್‌, ಸೇತುವೆ ಹಾನಿ ಸೇರಿದಂತೆ ದೊಡ್ಡ ಮಟ್ಟದ ವಿನಾಶಕ್ಕೆ ಕಾರಣವಾಗಿದೆ. ಹಲವಾರು ಪ್ರವಾಸಿಗರು ಅತಂತ್ರ ಸ್ಥಿತಿಗೆ ಸಿಲುಕಿದ್ದು, ಈವರೆಗೆ ಸಾವನ್ನಪ್ಪಿರವವರ ಸಂಖ್ಯೆ 80ಕ್ಕೆ ಏರಿಕೆಯಾಗಿದೆ ಎಂದು ವರದಿ ತಿಳಿಸಿದೆ.

Advertisement

ಇದನ್ನೂ ಓದಿ:Congress ಸರ್ಕಾರ ಅಧಿಕಾರಕ್ಕೆ ಬಂದ ಎರಡೇ ತಿಂಗಳಲ್ಲಿ ಜಂಗಲ್ ರಾಜ್ಯ ಸೃಷ್ಟಿ: ಬೊಮ್ಮಾಯಿ

ಮೇಘಸ್ಫೋಟದಿಂದಾಗಿ ನೂರಾರು ಮನೆಗಳು, ಮರಗಳು, ಸೇತುವೆಗಳು ಕೊಚ್ಚಿಕೊಂಡು ಹೋಗಿದ್ದು, ಅಂದಾಜು 3ಸಾವಿರದಿಂದ 4 ಸಾವಿರ ಕೋಟಿ ರೂಪಾಯಿಯವರೆಗೆ ನಷ್ಟ ಸಂಭವಿಸಿದೆ ಎಂದು ವರದಿ ವಿವರಿಸಿದೆ.

ಹಿಮಾಚಲ ಪ್ರದೇಶ ವಿಪತ್ತು ನಿರ್ವಹಣಾ ಇಲಾಖೆಯ ಮಾಹಿತಿ ಪ್ರಕಾರ, ಮಳೆ ಮತ್ತು ಪ್ರವಾಹದಲ್ಲಿ 80ಕ್ಕೂ ಅಧಿಕ ಮಂದಿ ಜೀವ ಕಳೆದುಕೊಂಡಿದ್ದಾರೆ. ಧಾರಾಕಾರ ಮಳೆಯಿಂದಾಗಿ ಭೂಕುಸಿತ ಸಂಭವಿಸಿದ್ದರಿಂದ ಚಂಡೀಗಢ್-ಮನಾಲಿ ಮತ್ತು ಶಿಮ್ಲಾ-ಕಲ್ಕಾ ಹೆದ್ದಾರಿ ಸೇರಿದಂತೆ 1,300ಕ್ಕೂ ಅಧಿಕ ರಸ್ತೆಗಳು ಬಂದ್‌ ಆಗಿದೆ. ಕಳೆದ ರಾತ್ರಿ ಮನಾಲಿಯಿಂದ ಮಾಂಡಿವರೆಗೆ ಏಕಮುಖ ಸಂಚಾರಕ್ಕೆ ಅವಕಾಶ ಮಾಡಿಕೊಟ್ಟಿದ್ದು, ಇದರಿಂದಾಗಿ ರಾತ್ರಿ-ಹಗಲು ಒಂದು ಸಾವಿರಕ್ಕೂ ಅಧಿಕ ಪ್ರವಾಸಿ ವಾಹನಗಳು ತೆರಳಿರುವುದಾಗಿ ವರದಿ ತಿಳಿಸಿದೆ.

ವರ್ಷಧಾರೆಯಿಂದಾಗಿ 40 ಸೇತುವೆಗಳು ಹಾನಿಗೊಂಡಿವೆ. ರಾಜ್ಯಾದ್ಯಂತ ಜುಲೈ 15ರವರೆಗೆ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪ್ರವಾಹ ಪೀಡಿತ ಪ್ರದೇಶದಿಂದ ಸುಮಾರು 20,000ಕ್ಕೂ ಅಧಿಕ ಜನರನ್ನು ಸುರಕ್ಷಿತವಾಗಿ ಸ್ಥಳಾಂತರಿಸಲಾಗಿದೆ.

Advertisement

ಪ್ರವಾಹ ಮತ್ತು ಭೂಕುಸಿತಗೊಂಡ ಪ್ರದೇಶಕ್ಕೆ ಮುಖ್ಯಮಂತ್ರಿ ಸುಖವಿಂದರ್‌ ಸಿಂಗ್‌ ಸುಖು ಅವರು ಸ್ಥಳಕ್ಕೆ ಭೇಟಿ ನೀಡಿದ್ದರು.

ಸತತ ನಾಲ್ಕು ದಿನಗಳ ಕಾಲದ ಮಳೆಯಿಂದಾಗಿ ಉತ್ತರ ಭಾರತದಾದ್ಯಂತ ವಿನಾಶ ಸಂಭವಿಸಿದೆ. ದೇಶದ 23 ರಾಜ್ಯಗಳಲ್ಲಿ ಭಾರೀ ಪ್ರಮಾಣದ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಭವಿಷ್ಯ ನುಡಿದಿದೆ. ಪಶ್ಚಿಮಬಂಗಾಳ, ಸಿಕ್ಕಿಂ, ಅರುಣಾಚಲ ಪ್ರದೇಶ, ಅಸ್ಸಾಂ, ಉತ್ತರಾಖಂಡ್‌ ಮತ್ತು ಮೇಘಾಲಯದಲ್ಲಿ ಭಾರೀ ಮೇಘಸ್ಫೋಟ ಸಂಭವಿಸಲಿದೆ ಎಂದು ವರದಿ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next