Advertisement

ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ 2 ಕೋಟಿ ರೂ.

12:51 PM Dec 15, 2017 | Team Udayavani |

ಹುಣಸೂರು: ಇಲ್ಲಿನ ಡಿಡಿ ಅರಸ್‌ ಪ್ರಥಮ ದರ್ಜೆ ಕಾಲೇಜಿನ ಒಳಾಂಗಣ ಕ್ರೀಡಾಂಗಣಕ್ಕೆ 70ಲಕ್ಷ ಹಾಗೂ ಬಾಲಕರ ಪಿಯು ಕಾಲೇಜು ಹಿಂಭಾಗದ ಕ್ರೀಡಾಂಗಣದ ಹಿಂಭಾಗದಲ್ಲಿ ಕ್ರೀಡಾ ಸಂಕೀರ್ಣ ನಿರ್ಮಾಣಕ್ಕೆ 2 ಕೋಟಿರೂ ಅನುದಾನ ಬಿಡುಗಡೆಯಾಗಿದೆ ಎಂದು ಶಾಸಕ ಎಚ್‌.ಪಿ.ಮಂಜುನಾಥ್‌ ತಿಳಿಸಿದರು.

Advertisement

ನಗರದ ಡಿ.ಡಿ.ಅರಸ್‌ ಕಾಲೇಜಿನಲ್ಲಿ 12ನೇ ಹಣಕಾಸು ಯೋಜನೆಯಡಿ ಶೆಟಲ್‌ ಬ್ಯಾಡ್ಮಿಂಟನ್‌ ಒಳಾಂಗಣ ಕ್ರೀಡಾಂಗಣ ಕಾಮಗಾರಿಗೆ ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರೊಂದಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು. ಸಿಂಥೆಟಿಕ್‌ ನೆಲಹಾಸನ್ನು ಅಳವಡಿಸಿ ನಿರ್ಮಿಸಲಾಗುವ, ಇನ್‌ ಡೋರ್‌ ಸ್ಟೇಡಿಯಂ ರಾಷ್ಟ್ರಮಟ್ಟದ ಕ್ರೀಡಾಂಗಣಗಳ ಗುಣಮಟ್ಟ ಹೊಂದಿರಲಿದ್ದು ಶೀಘ್ರ ಕಾಮಗಾರಿ ಆರಂಭಗೊಳ್ಳಲಿದೆ ಎಂದು ಹೇಳಿದರು.

2 ಕೋಟಿ ರೂ., ವೆಚ್ಚದ ಕ್ರೀಡಾ ಸಂಕೀರ್ಣ: ನಗರದ ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಹಿಂಭಾಗವಿರುವ ತಾಲೂಕು ಕ್ರೀಡಾಂಗಣದ ಹೊರ ಆವರಣದಲ್ಲಿ 2 ಕೋಟಿ ರೂ.ವೆಚ್ಚದಲ್ಲಿ ಸಾರ್ವಜನಿಕ ಕ್ರೀಡಾ ಸಂಕೀರ್ಣ ನಿರ್ಮಿಸಲು ಕ್ರೀಡಾ ಇಲಾಖೆ ವತಿಯಿಂದ ಅನುದಾನ ಬಿಡುಗಡೆಯಾಗಿದೆ. ಈ ಸಂಬಂಧ ನಗರದ ಕ್ರೀಡಾಪಟುಗಳು ಹಾಗೂ ಕ್ರೀಡಾಭಿಮಾನಿಗಳೊಂದಿಗೆ ಚರ್ಚಿಸಿ ಆಗಬೇಕಾದ ಕ್ರೀಡಾ ಸೌಲಭ್ಯ,

ಮೈದಾನ ಸೇರಿ ಎಲ್ಲವನ್ನೂ ನಿರ್ಮಿಸಲಾಗುವುದು ಎಂದು ಹೇಳಿದರು. ಯಾವುದೇ ಯೋಜನೆಗಳು ಸಾರ್ವಜನಿಕರ ಸಹಕಾರವಿದ್ದಲ್ಲಿ ಮಾತ್ರ ಯಶಸ್ಸು ಕಾಣಲು ಸಾಧ್ಯ. ಇಲ್ಲಿ ಕ್ರೀಡಾ ಸಂಕೀರ್ಣ ನಿರ್ಮಿಸಿದ ನಂತರ ಕ್ರೀಡಾಂಗಣ ಬಳಸುವ ಕ್ರೀಡಾಪಟುಗಳೇ ಇದನ್ನು ನಿರ್ವಹಣೆ ಮಾಡುವ ಹೊಣೆಗಾರಿಕೆ ಹೊರುವ ಅವಶ್ಯವಿದ್ದು, ಕ್ರೀಡಾಪ್ರೇಮಿಗಳು ಸಮಿತಿ ರಚಿಸಿ ಅಭಿವೃದ್ಧಿಪಡಿಸಬೇಕು ಎಂದರು.  

ಸಮಾಜ ಕಲ್ಯಾಣ ಕಟ್ಟಡಕ್ಕೆ 70ಲಕ್ಷ ರೂ.,: ಸ್ವಂತ ಕಟ್ಟಡವಿಲ್ಲದೆ ಸಮಾಜ ಕಲ್ಯಾಣ ಇಲಾಖೆ ಆಡಳಿತ ಕಚೇರಿ ನಿರ್ಮಾಣಕ್ಕೆ 70 ಲಕ್ಷ ರೂ., ಅನುದಾನ ಬಿಡುಗಡೆಯಾಗಿದ್ದು, ಕಾಲೇಜು ಹಿಂಭಾಗದ ವಿದ್ಯಾರ್ಥಿ ನಿಲಯದ ಆವರಣದಲ್ಲಿ ಕಟ್ಟಡ ನಿರ್ಮಿಸಲಾಗುವುದು. ತಾಲೂಕಿಗೆ ಪರಿಶಿಷ್ಟ ವರ್ಗಗಳ ಇಲಾಖೆಗೆ ಈಗಾಗಲೇ ಸ್ವಂತ ಕಟ್ಟಡವಾಗಿದ್ದು, ರಾಜ್ಯಕ್ಕೆ ಪ್ರಥಮವಾಗಿರುವುದು ಹೆಮ್ಮೆಯ ವಿಚಾರ ಎಂದು ಹೇಳಿದರು.

Advertisement

ಕಾಲೇಜಿನ ಪ್ರಾಂಶುಪಾಲ ಪೊ›.ವೆಂಕಟೇಶಯ್ಯ, ಸಿಡಿಸಿ ಉಪಾಧ್ಯಕ್ಷ ಎಚ್‌.ಆರ್‌.ಸಿದ್ದೇಗೌಡ ಸದಸ್ಯರಾದ ಜಯರಾಂ, ಮಂಜುನಾಥ್‌, ರಾಜರತ್ನಂ, ಶ್ರೀನಿವಾಸ್‌, ಕಾಲೇಜಿನ ಅಧ್ಯಾಪಕರು, ಸಿಬ್ಬಂದಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next